ತೆರಿಗೆ ಎಫೆಕ್ಟ್..ಆಪಲ್ ಐಫೋನ್‌ಗಳ ಬೆಲೆಯಲ್ಲಿ ಭಾರೀ ಏರಿಕೆ!..ಇಲ್ಲಿದೆ ಫುಲ್ ಲೀಸ್ಟ್!!

Written By:

2018ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕಸ್ಟಮ್ಸ್ ಸುಂಕ ಏರಿಕೆ ಮಾಡಿರುವುದರಿಂದ ಆಪಲ್‌ ಕಂಪನಿಯು ತನ್ನ ಐಫೋನ್ ಮತ್ತು ಆಪಲ್‌ ವಾಚ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದೆ.! ಇದೀಗ ಐಫೋನ್‌ಗಳ ಬೆಲೆ ₹ 3,210ರವರೆಗೆ ಮತ್ತು ವಾಚ್‌ಗಳ ಬೆಲೆ ₹ 2,510ರವರೆಗೆ ಏರಿಕೆಯಾಗಿದೆ.!!

ಡಿಸೆಂಬರ್‌ನಲ್ಲಿ ಫೋನ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 10 ರಿಂದ ಶೇ 15ಕ್ಕೆ ಏರಿಕೆ ಮಾಡಿದ್ದ ಸರ್ಕಾರ, ದೀಗ ಕೇಂದ್ರ ಬಜೆಟ್‌ನಲ್ಲಿ ಶೇ 15 ರಿಂದ ಶೇ 20ಕ್ಕೆಕಸ್ಟಮ್ಸ್ ಸುಂಕ ಏರಿಕೆ ಮಾಡಿದೆ. ಹಾಗಾಗಿ, ಕೇವಲ ಒಂದು ವಾರದಲ್ಲಿ ಐಫೋನ್‌ಗಳು ಮತ್ತು ಆಪಲ್‌ ವಾಚ್‌ಗಳ ಬೆಲೆಯಲ್ಲಿ ಶೇ 5ಕ್ಕಿಂತ ಹೆಚ್ಚು ಬೆಲೆ ಏರಿಕೆಯಾಗಿದೆ.!!

ತೆರಿಗೆ ಎಫೆಕ್ಟ್..ಆಪಲ್ ಐಫೋನ್‌ಗಳ ಬೆಲೆಯಲ್ಲಿ ಭಾರೀ ಏರಿಕೆ!..ಇಲ್ಲಿದೆ ಫುಲ್ ಲೀಸ್

ಇನ್ನು ಭಾರತದಲ್ಲಿ ಬಿಡಿಭಾಗಗಳ ಜೋಡಣೆ ಆಗುವ ಐಫೋನ್ ಎಸ್‌ಇ ಸ್ಮಾರ್ಟ್‌ಫೋನ್ ಒಂದನ್ನು ಬಿಟ್ಟು ಉಳಿದೆಲ್ಲಾ ಐಫೋನ್ ಮಾದರಿಗಳ ಬೆಲೆ ಏರಿಕೆ ಕಂಡಿದ್ದು, ಹಾಗಾದರೆ, ಆಪಲ್ ಕಂಪೆನಿಯ ಯಾವ ಯಾವ ಐಫೋನ್ ಮಾದರಿಗಳ ಬೆಲೆ ಎಷ್ಟೆಷ್ಟು ಹೆಚ್ಚಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಎಕ್ಸ್‌ (256ಜಿಬಿ)

ಐಫೋನ್ ಎಕ್ಸ್‌ (256ಜಿಬಿ)

ಕಸ್ಟಮ್ಸ್ ಸುಂಕ ಏರಿಕೆ ಮೊದಲು 1,05,000 ಬೆಲೆಯನ್ನು ಹೊಂದಿದ್ದ ಐಫೋನ್ ಎಕ್ಸ್‌ 256ಜಿಬಿ ವೆರಿಯಂಟ್ ಫೋನ್ ಬೆಲೆ ಇದೀಗ 3,210ರೂಗಳಷ್ಟು ಹೆಚ್ಚಾಗಿದೆ. ಪ್ರಸ್ತುತ ಐಫೋನ್ ಎಕ್ಸ್‌ 256ಜಿಬಿ ವೆರಿಯಂಟ್ ಫೋನ್ ಖರೀದಿಸಲು ₹ 1.08 ಲಕ್ಷ ರೂ.ಹಣವನ್ನು ಪಾವತಿಸಬೇಕಿದೆ!

ಐಫೋನ್ ಎಕ್ಸ್‌ ( 64GB)

ಐಫೋನ್ ಎಕ್ಸ್‌ ( 64GB)

ಐಫೋನ್ ಎಕ್ಸ್ 64GB ವೆರಿಯಂಟ್ ಫೋನ್ ಬೆಲೆ ಕೂಡ ಸರಿಸುಮಾರು ಮೂರು ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದ್ದು, 92,430 ರೂ. ಬೆಲೆ ಹೊಂದಿದ್ದ ಐಫೋನ್ ಎಕ್ಸ್ 64GB ವೆರಿಯಂಟ್ ಫೋನ್ ಬೆಲೆ ಇದೀಗ 95,390 ಸಾವಿರ ರೂಪಾಯಿಗಳಾಗಿದೆ.!!

ಐಫೋನ್ 8 ಸಿರೀಸ್ !!

ಐಫೋನ್ 8 ಸಿರೀಸ್ !!

ಐಫೋನ್ ಎಕ್ಸ್ ನಂತರ ಹೆಚ್ಚು ಬೇಡಿಕೆಯಲ್ಲಿರುವ ಐಫೋನ್ 8 64GB ವೆರಿಯಂಟ್ ಫೋನ್ ಬೆಲೆ 66,120 ರೂ.ಗಳಿಂದ 67,940 ರೂ.ಗಳಿಗೆ ಹೆಚ್ಚಾಗಿದೆ.!! ಇನ್ನು 256GB ವೆರಿಯಂಟ್ ಐಫೋನ್ 8 ಬೆಲೆ 79,420 ರೂಪಾಯಿಗಳಿಂದ 81,500 ರೂಪಾಯಿಗಳಿಗೆ ಬಂದು ನಿಂತಿದೆ.!!

ಐಫೋನ್ 7 ಸಿರೀಸ್

ಐಫೋನ್ 7 ಸಿರೀಸ್

ಆಪಲ್ ಐಫೋನ್ 7 32 ಜಿಬಿ ವೆರಿಯಂಟ್ ಫೋನ್ ಬೆಲೆ ಶೇಕಡ 3.1 ಏರಿಕೆಯಾಗಿ ಪ್ರಸ್ತುತ 52,370 ರೂ. ಬೆಲೆಯನ್ನು ಹೊಂದಿದೆ. ಇನ್ನು ಐಫೋನ್ 7 128 ಜಿಬಿ ಜಿಬಿ ವೆರಿಯಂಟ್ ಐಫೋನ್ ಬೆಲೆ 59,910 ರೂ.ಗಳಿಂದ 61,560 ರೂಪಾಯಿಗಳಿಗೆ ಏರಿಕೆಯಾಗಿದೆ.!!

ಐಫೋನ್ 6 ಎಸ್ ಸಿರೀಸ್!!

ಐಫೋನ್ 6 ಎಸ್ ಸಿರೀಸ್!!

ಸುಮಾರು ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಐಫೋನ್ 6 ಎಸ್ 32 ಜಿಬಿ ವೆರಿಯಂಟ್ ಫೋನ್ ಬೆಲೆ ಇದೀಗ 42,900 ರೂ.ಗಳಿಂದ ಆರಂಭವಾಗಲಿದೆ ಮತ್ತು 128 ಜಿಬಿ ಆವೃತ್ತಿಯ ಐಫೋನ್ 6 ಎಸ್ ಪ್ಲಸ್ 52,100 ರೂ. ಬೆಲೆಯನ್ನು ಹೊಂದಿದೆ.!!

Honor 9 Lite with four cameras (KANNADA)
ಆಪಲ್ ಐಫೋನ್ 6

ಆಪಲ್ ಐಫೋನ್ 6

2014 ರಲ್ಲಿ ಬಿಡುಗಡೆಯಾದ ಆಪಲ್ ಐಫೋನ್ 6 ಹೊಸ ಬೆಲೆಯಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಆಪಲ್ ಐಫೋನ್ 6 ಈ ಮೊದಲು 30,780 ರೂಪಾಯಿಗಳ ಬೆಲೆಯನ್ನು ಹೊಂದಿದ್ದರೆ, ಪ್ರಸ್ತುತ 31,900 ರೂಪಾಯಿಗಳಿಗೆ ಏರಿಕೆಯಾಗಿದೆ.!!

ಆಪಲ್ ವಾಚ್ ಸೀರೀಸ್

ಆಪಲ್ ವಾಚ್ ಸೀರೀಸ್

ಭಾರತದಲ್ಲಿಗ ಆಪಲ್ 3 ಜಿಪಿಎಸ್ 38 ಎಂಎಂ ಆಪಲ್ ವಾಚ್ ಬೆಲೆ 29,300 ರೂ.ಗಳಿಂದ ಏರಿಕೆಯಾಗಿ 32,380 ರೂ.ಗಳಾಗಿವೆ. 3 ಜಿಪಿಎಸ್ 38 42 ಎಂಎಂ ಬೆಲೆ 31,900 ರೂ.ಗಳಿಂದ ಏರಿಕೆಯಾಗಿ ಪ್ರಸ್ತುತ 34,410 ರೂಪಾಯಿಗಳಾಗಿವೆ.!!

ಓದಿರಿ:ಫೆಬ್ರವರಿ 14 ರಂದು ಭಾರತದಲ್ಲಿ ಶಿಯೋಮಿ ಫೋನ್ ರಿಲೀಸ್ ಪಕ್ಕಾ!..ಯಾವುದು ಗೊತ್ತಾ!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple iPhone prices in India have increased and these will applicable from today. Apple iPhone X, iPhone 8, iPhone 8 Plus, iPhone 7, iPhone 7 Plus, iPhone 6s and iPhone 6s Plus will all see their prices go up. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot