ಬಜೆಟ್ ಐಪೋನ್ ಬಿಡುಗಡೆಗೊಳಿಸಿ ಸರ್‌ಪ್ರೈಸ್ ನೀಡುತ್ತಾ ಆಪಲ್..!
ಆಪಲ್ ಐಫೋನ್ ಎಸ್ಇ 2 ಅಸ್ತಿತ್ವದ ಬಗ್ಗೆ ವದಂತಿಗಳು ಮತ್ತು ಸೋರಿಕೆಯಾದ ಸುದ್ದಿ ವರದಿಗಳ ನಂತರ, ಫೋರ್ಬ್ಸ್ ಪತ್ರಿಕೆಯು ಆಪಲ್ ಸಂಸ್ಥೆ ಐಫೋನ್ ಎಸ್ಇ 2 ಫೋನನ್ನು ಸಂಪೂರ್ಣವಾಗಿ ಕ್ಯಾನ್ಸಲ್ ಮಾಡಲಿದೆ ಎಂದು ತಿಳಿಸಿದೆ. ಐಫೋನ್ನ ಕೇಸ್ ತಯಾರಕ ಒಲಿಕ್ಸಾರ್ಗೆ ಫೋರ್ಬ್ಸ್ ನೀಡಿದ ವರದಿ ಈ ಮಾಹಿತಿಯನ್ನು ಒಳಗೊಂಡಿದೆ.
ಈ ವರದಿಯ ಅನ್ವಯ ಒಲಿಕ್ಸಾರ್ “ಸ್ಮಾರ್ಟ್ಫೋನ್ ಸೋರಿಕೆಯ ಗಮನಾರ್ಹ ಟ್ರ್ಯಾಕ್ ರೆಕಾರ್ಡ್” ನ್ನು ಹೊಂದಿದೆ. ಯಾಕೆಂದರೆ ಯಾವುದೇ ಹೊಸ ಸ್ಮಾರ್ಟ್ ಫೋನ್ ತಯಾರಿಕೆ ಆಗಬೇಕು ಎಂದರೆ ಅದರ ಆಕ್ಸಸರೀಸ್ ಗಳು ಮೊದಲು ತಯಾರಾಗಬೇಕು.ಅದು ಓಲಿಕ್ಸಾರ್ ನಲ್ಲಿ ತಯಾರಾಗುವುದರಿಂದಾಗಿ ಬಹಳ ಬೇಗನೆ ಮಾಹಿತಿಗಳು ಸೋರಿಹೋಗುತ್ತದೆ.

ಆಕ್ಸಸರೀಸ್ ತಯಾರಿಕಾ ಕಂಪೆನಿಯು ಈಗ ಮತ್ತೊಂದು ಮಾಹಿತಿಯನ್ನು ತಿಳಿಸಿದ್ದು, ಆಪಲ್ ಐಫೋನ್ ಎಸ್ ಇ 2 ನ್ನು ಮಾಡುವ ಬದಲಾಗಿ ಹೊಸದಾದ ದೊಡ್ಡ ಐಫೋನ್ ಒಂದನ್ನು ಬಿಡುಗಡೆಗೊಳಿಸಲಿದೆಯಂತೆ.ಈ ಮಾಹಿತಿಯ ಅನ್ವಯ, ಒಲಿಕ್ಸಾರ್ ಆ ನಿಟ್ಟಿನಲ್ಲಿ ಈಗಾಗಲೇ ಆಕ್ಸಸರೀಸ್ ಗಳನ್ನು ತಯಾರಿಸುವ ಕೆಲಸ ಆರಂಭಿಸಿದೆ. ಆಪಲ್ ಬಹುಶ್ಯಃ 6.1 ಇಂಚಿನ ವೇರಿಯಂಟ್ ಇರುವ ಐಫೋನ್ ಎಕ್ಸ್ ನ್ನು ಬಿಡುಗಡೆಗೊಳಿಸಲಿದ್ದು, ಬಜೆಟ್ ಸ್ನೇಹಿಯಾಗಿ ಕೂಡ ಇರಲಿದೆಯಂತೆ.
ಈ ಹಿಂದಿನ ವರದಿಯು ಹೇಳುವಂತೆ ಆಪಲ್ ಐಫೋನ್ ಎಸ್ ಇ 2 ನ್ನು ಐಪೋನ್ ಎಕ್ಸ್ ನ ಮಿನಿ ಐಫೋನ್ ನಂತೆ ಬಿಡುಗಡೆಗೊಳಿಸಲಿದ್ದು, ಕಡಿಮೆ ವೆಚ್ಚದಲ್ಲಿ ಇರುತ್ತದೆ ಎನ್ನಲಾಗಿತ್ತು.. ಆದರೆ ಈಗ, ಆಪಲ್ ನಲ್ಲಿ ಇನ್ನೂ ಹೆಚ್ಚಿನ ಉತ್ತಮ ಉಪಾಯಗಳಿವೆ ಎಂದನಿಸುತ್ತದೆ. ಅಂದರೆ 6.1 ಇಂಚಿನ ಐಫೋನ್ ಎಕ್ಸ್ ವರ್ಷನ್ ನ್ನು ಹೊಸ ಹಾರ್ಡ್ ವೇರ್ ಗಳನ್ನು ಬಳಸಿ,ಈಗಿರುವ ಐಫೋನ್ ಎಕ್ಸ್ ಗಿಂತ ಕಡಿಮೆ ಬೆಲೆಗೆ ಬಿಡುಗಡೆಗೊಳಿಸುವ ಯೋಜನೆ ಹೊಂದಿರುವಂತೆ ಕಾಣುತ್ತದೆ.

ಐಫೋನ್ ಎಕ್ಸ್ ಪ್ಲಸ್ ಹೆಸರಿನಲ್ಲಿ ದೊಡ್ಡ ಫೋನನ್ನು ಅಂದರೆ 6.5 ಇಂಚಿನ ಡಿಸ್ಪ್ಲೇ ಹೊಂದಿರುವ ಫೋನನ್ನು ಬಿಡುಗಡೆಗೊಳಿಸುವ ಯೋಜನೆ ಇದ್ದರೆ ಅದು ಎಷ್ಟು ಕಡಿಮೆ ಬೆಲೆಗೆ ಎಂಬುದೀಗ ಕುತೂಹಲಕಾರಿಯಾಗಿದೆ. ಆದರೆ, ಈ ಬಗ್ಗೆ ಆಪಲ್ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿಯೂ ಹೊರಬಿದ್ದಿಲ್ಲ, ಇದೆಲ್ಲ ಕೇವಲ ಅಲ್ಲಿಇಲ್ಲಿ ಹರಿದಾಡುತ್ತಿರುವ ಗುಸುಗುಸು ಸುದ್ಧಿಗಳು ಅಷ್ಟೇ..
ಈ ಮಾಹಿತಿ ಬಹಿರಂಗವು ಕೇವಲ ಆಕ್ಸಸರೀಸ್ ತಯಾರಕರಿಂದ ಹೊರಬಿದ್ದಿದ್ದು, ಅವರು ಈಗಾಗಲೇ ಕೆಲವು ವಸ್ತುಗಳ ತಯಾರಿಕೆಯನ್ನು ಪ್ರಾರಂಭಿಸಿದ್ದಾರೆ ಎಂಬುದಷ್ಟೇ ತಿಳಿದಿದೆ. ಬಹುಶ್ಯಃ ಮುಂದಿನ ಐಫೋನ ನ್ನು ಐಫೋನ್ ಎಕ್ಸ್ ಎಂದು ಕರೆಯುವ ಪ್ರಮೇಯವಿರುವುದಿಲ್ಲ ಎಂದನಿಸುತ್ತದೆ. ಆದರೆ ಆಪಲ್ ಮುಂದೆಯೂ ಕೂಡ ಡಿಸ್ಪ್ಲೇ ನಾಚ್ ಡಿಸೈನ್ ನನ್ನು ಈ ವರ್ಷವೂ ಮುಂದುವರಿಸಿದ್ದು, 2018 ರಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಐಫೋನ್ ಗಳನ್ನು ಆಪಲ್ ಬಿಡುಗಡೆಗೊಳಿಸಲಿದೆ ಎಂಬ ವಿಶ್ವಾಸ ಹಲವರದ್ದು...
ಗಾಳಿ ಸುದ್ದಿಗಳಿಗೇನಂತೆ ಹರಿದಾಡುತ್ತಲೇ ಇರುತ್ತದೆ.. ನಾವು ಯಾವುದಕ್ಕೂ ಕಾದು ನೋಡೋಣ..


Click it and Unblock the Notifications
