ಐಫೋನ್ ಎಸ್‌ಇ 2 ಬಗ್ಗೆ ಮತ್ತಷ್ಟು ವದಂತಿಗಳು ಬಂದಿವೆ ನೋಡಿ!
ಮೊಬೈಲ್ ಮಾರುಕಟ್ಟೆ ಭಾರೀ ಕುತೂಹಲದಿಂದ ನೋಡುತ್ತಿರುವ ಆಪಲ್‌ನ ಐಫೋನ್ ಎಸ್‌ಇ 2 ಬಗ್ಗೆ ಮತ್ತಷ್ಟು ವದಂತಿಗಳು ಹರಿದಾಡಿವೆ. ಆಪಲ್‌ನ ಎರಡನೇ ತಲೆಮಾರಿನ ಐಫೋನ್ ಎಸ್ಇ ಫೋನನ್ನು 2020ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮತ್ತು ಅದನ್ನು ಖಚಿತವಾಗಿ 'ಐಫೋನ್ ಎಸ್ಇ 2' ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಐಫೋನ್ ಎಸ್ಇ 2 ಯುಎಸ್‌ನಲ್ಲಿ 399 ಡಾಲರ್‌ಗಳಿಗೆ (ರೂ. 28,300) ಆರಂಭಿಕ ಬೆಲೆಗೆ ಚಿಲ್ಲರೆ ಮಾರಾಟ ಮಾಡಲಾಗುತ್ತದೆ ಎಂದು ಹಲವು ವರದಿಗಗಳು ಭವಿಷ್ಯ ನುಡಿದಿವೆ.

ಹೌದು, ಆಪಲ್ ವಿಶ್ಲೇಷಕ ಮಿನ್-ಚಿ ಕುವೊ ಅವರು ಐಫೋನ್ ಎಸ್ಇ 2 ಫೋನ್ ಲಿಕ್ವಿಡ್ ಕ್ರಿಸ್ಟಲ್ ಪಾಲಿಮರ್ ಆಂಟೆನಾ ವಿನ್ಯಾಸವನ್ನು ಹೊಂದಿರುತ್ತದೆ. ಈ ಎಲ್ಸಿಪಿ ವಿನ್ಯಾಸವು ವೈರ್‌ಲೆಸ್ ಪ್ರಸರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಈ ತಂತ್ರಜ್ಞಾನಗಳು 2020ರ ಆರಂಭದಲ್ಲಿ ಆಪಲ್‌ಗೆ ಎಲ್‌ಸಿಪಿ ಆಂಟೆನಾ ಘಟಕಗಳನ್ನು ಪೂರೈಸಲಿದೆ ಎಂದು ಕುವೊ ಅವರು ತಿಳಿಸಿದ್ದಾರೆ. ಇದರ ಜೊತೆಗೆ ಮತ್ತೊಂದು ನಂಬಲರ್ಹ ವರದಿಯು ಐಫೋನ್ ಎಸ್ಇ 2 ನಲ್ಲಿ ಎಲ್ಸಿಡಿ ಪ್ರದರ್ಶನವನ್ನು ಎಲ್‌ಜಿ ಸರಬರಾಜು ಮಾಡಲಿದೆ ಎಂದು ಹೇಳಿದೆ.

ಇನ್ನು ಬೆಲೆ ಮತ್ತು ಫೀಚರ್ಸ್ ವಿಷಯಕ್ಕೆ ಬಂದರೆ, ಐಫೋನ್ ಎಸ್ಇ ಯಂತೆಯೇ ಮುಂಬರುವ ಎಸ್ಇ 2 ಸಹ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯನ್ನು ತಲುಪಲಿದೆ ಎಂದು ಅವರು ತಿಳಿಸಿದ್ದಾರೆ. ಹೊಸ ಐಫೋನ್ 11 ಸರಣಿ ಫೋನ್‌ಗಳಂತೆಯೇ ಐಫೋನ್ ಎಸ್ಇ 2 ಅನ್ನು ಎ 13 ಸಿಪಿಯು 64 ಜಿಬಿ ಮತ್ತು 128 ಜಿಬಿ ಎಂಬ ಎರಡು ಶೇಖರಣಾ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ, ಐಫೋನ್ ಎಸ್ಇ 2 ಬೆಲೆಯನ್ನು ಅಂದಾಜು 28,300 ರೂ.ಗಳಿಗೆ ನಿಗದಿಪಡಿಸಬಹುದು ಎಂದು ವಿಶ್ಲೇಷಕ ಮಿಂಗ್-ಚಿ ಕುವೊ ಅವರು ತಿಳಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದಿನ ವದಂತಿಗಳು ಮುಂಬರುವ ಐಫೋನ್ ಎಸ್ಇ 2 ವಿನ್ಯಾಸವು ಐಫೋನ್ 8 ವಿನ್ಯಾಸದಂತೆ ಇರಲಿದೆ ಎಂದು ಸೂಚಿಸಿದ್ದವು. ಆದರೆ, ಇದೀಗ ಬಿಗಡೆಯಾಗಿರುವ ಕೆಲವೊಂದು ಚಿತ್ರಗಳು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದ ಐಫೋನ್ X ವಿನ್ಯಾಸದ ಮೂಲಕ ಐಫೋನ್ ಎಸ್ಇ 2 ಕಾಲಿಡಲಿದೆ ಎಂದು ಹೇಳಿವೆ. ವಿನ್ಯಾಸದ ವಿಷಯದಲ್ಲಿ ನೀರಸವಾಗಿ ಕಾಣುವ ಐಫೋನ್ ಎಸ್ಇಗಿಂತ ಐಫೋನ್ ಎಸ್ಇ 2 ವಿನ್ಯಾಸ ನವೀಕರಣವಾಗಿರಲಿದೆ. ಆದರೆ, ಫೀಚರ್ಸ್ ವಿಷಯದಲ್ಲಿ ಅಷ್ಟೇನು ಬದಲಾವಣೆಗಳು ಕಾಣುವುದಿಲ್ಲ ಎಂದು ಹೇಳಲಾಗಿದೆ.

ಒಟ್ಟು ಎರಡು ಆವೃತ್ತಿಯಲ್ಲಿ ಐಫೋನ್ ಎಸ್ಇ 2 ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಐಫೋನ್ ಎಸ್ಇ 2ನಲ್ಲಿ ಆಪಲ್ ಎ 13 ಪ್ರೋಸೆಸರ್ ಅನ್ನು ಅಳವಡಿಸುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ 2 ಅಥವಾ 3 GB RAM ಮತ್ತು 64/128 GB ಇಂಟರ್ನಲ್ ಮೆಮೊರಿ ಸಹ ಇರಲಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ 4 ಇಂಚಿನ ಅಥವಾ 4.5 ಇಂಚಿನ ಡಿಸ್‌ಪ್ಲೇ ನೀಡಬಹುದಾಗಿದೆ. ಈ ಹಿಂದೆ ನೀಡುತ್ತಿದ್ದ ಟೆಚ್ ಐಡಿಯ ಬದಲಿಗೆ ಫೇಸ್ ಐಡಿ ಆಯ್ಕೆಯನ್ನು ಆಪಲ್ ಐಫೋನ್ ಎಸ್ಇ 2 ನಲ್ಲಿಯೂ ನೀಡಲಿದೆ ಎನ್ನವ ಮಾಹಿತಿಯೂ ದೊರೆತಿದೆ.


Click it and Unblock the Notifications








