ಕಡಿಮೆ ಬೆಲೆಯ ಐಫೋನ್ ಎಸ್ಇ - ನೀವು ಕೇಳರಿಯದ ವಿಶೇಷತೆಗಳು

Written By:

ನಿರೀಕ್ಷಿಸಿದಂತೆಯೇ ಆಪಲ್ ಮಿತದರದ ಐಫೋನ್, ಐಫೋನ್ ಎಸ್ಇ ಯನ್ನು ಬಿಡುಗಡೆ ಮಾಡಿದೆ ಕ್ಯುಪರ್ಟಿನೊದಲ್ಲಿ ನಡೆದ ಈವೆಂಟ್‌ನಲ್ಲಿ ಆಪಲ್ ಐಫೋನ್ ಎಸ್ಇಯನ್ನು ಮಾರುಕಟ್ಟೆಗೆ ತಂದಿದೆ. ಐಫೋನ್ 6ಎಸ್‌ನಂತೆಯೇ ಐಫೋನ್ ಎಸ್ಇ 4 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ ಹಾಗೂ ಕಂಪೆನಿ ಇದುವರೆಗೆ ಬಿಡುಗಡೆ ಮಾಡಿರುವ ಮಿತದರದ ಫೋನ್ ಆಗಿದೆ ಐಫೋನ್ ಎಸ್ಇ.

ಕಾಂಪಾಕ್ಟ್ ಅಲ್ಯುಮಿನಿಯಮ್ ಡಿಸೈನ್ ಅನ್ನು ಫೋನ್ ಪಡೆದುಕೊಂಡಿದ್ದು ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್‌ನಲ್ಲಿ ನೀಡಿರುವ 64 ಬಿಟ್ ಎ9 ಚಿಪ್ ಅನ್ನು ಈ ಡಿವೈಸ್ ಕೂಡ ಪಡೆದುಕೊಂಡಿದೆ. ಇಂದಿನ ಲೇಖನದಲ್ಲೊ ಬಜೆಟ್ ಐಫೋನ್‌ನಲ್ಲಿರುವ ಮಹತ್ತರ ವಿಶೇಷತೆಗಳನ್ನು ನಾವು ಅರಿಯಲಿದ್ದು ಕೆಳಗಿನ ಸ್ಲೈಡರ್ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಲ್ಯುಮಿನಿಯಮ್ ವಿನ್ಯಾಸ

ಅಲ್ಯುಮಿನಿಯಮ್ ವಿನ್ಯಾಸ

#1

ಆಪಲ್ ಐಫೋನ್ ಎಸ್ಇ ಸ್ಯಾಟಿನ್‌ನಂತಹ ಫಿನಿಶ್ ಅನ್ನು ಪಡೆದುಕೊಂಡಿದೆ. ಕಲರ್ ಹೊಂದಿಕೆಯಾಗುವ ಸ್ಟೈನ್‌ಲೆಸ್ ಸ್ಟೀಲ್ ಆಪಲ್ ಲೋಗೋವನ್ನು ಐಫೋನ್ ಪಡೆದುಕೊಂಡಿದ್ದು, ನಾಲ್ಕು ಅದ್ಭುತ ಮೆಟಾಲಿಕ್ ಫಿನಿಶ್ ಅನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

#2

ವದಂತಿಗಳು ಹೇಳುವಂತೆ ಎಸ್ಇ, 4 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಮುಂಭಾಗದಲ್ಲಿ ರೆಟೀನಾ ಪ್ಯಾನೆಲ್ ಅನ್ನು ಪಡೆದುಕೊಂಡಿದೆ. 640x1136 ಪಿಕ್ಸೆಲ್‌ಗಳು ಇದರಲ್ಲಿದೆ. ಆಪಲ್ 6ಎಸ್‌ನ 3 ಡಿ ಟಚ್ ಈಗ ಬರುತ್ತಿರುವ ಹೊಸ ಡಿವೈಸ್‌ಗಳಲ್ಲಿ ಕಾಣುತ್ತಿಲ್ಲ ಎಂಬುದು ವಿಷಾದನೀಯವಾಗಿದೆ.

ಪ್ರೊಸೆಸರ್

ಪ್ರೊಸೆಸರ್

#3

ಆಪಲ್ ಐಫೋನ್ ಎಸ್ಇ 64 ಬಿಟ್ ಎ9 ಚಿಪ್‌ನೊಂದಿಗೆ ಬಂದಿದ್ದು ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್‌ನಲ್ಲಿ ಇದೇ ಪ್ರೊಸೆಸರ್ ಅನ್ನು ನಿಮಗೆ ಕಾಣಬಹುದು.

ಸಾಫ್ಟ್‌ವೇರ್

ಸಾಫ್ಟ್‌ವೇರ್

#4

ಬಳಸಲು ಸುಲಭವಾಗಿರುವ ಐಓಎಸ್ 9 ಅನ್ನು ಐಫೋನ್ ಒಳಗೊಂಡಿದ್ದು, ಮೆಸೇಜಸ್, ಫೇಸ್ ಟೈಮ್, ಫೋಟೋಸ್, ಮ್ಯೂಸಿಕ್ ಮತ್ತು ಮ್ಯಾಪ್ಸ್ ಮೊದಲಾದ ಬಿಲ್ಟ್ ಇನ್ ಅಪ್ಲಿಕೇಶನ್‌ಗಳನ್ನು ಇದು ಒಳಗೊಂಡಿದೆ.

ಕ್ಯಾಮೆರಾ

ಕ್ಯಾಮೆರಾ

#5

ಐಫೋನ್ ಎಸ್ಇ 12 ಮೆಗಾಪಿಕ್ಸೆಲ್ ಇನ್‌ಸೈಟ್ ಕ್ಯಾಮೆರಾವನ್ನು ಹೊಂದಿದ್ದು ಫೋಕಸ್ ಪಿಕ್ಸೆಲ್ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಆಪಲ್ ವಿನ್ಯಾಸದ ಇಮೇಜ್ ಸಿಗ್ನಲ್ ಪ್ರೊಸೆಸರ್ ಅನ್ನು ಹೊಂದಿದ್ದು, ಸುಧಾರಿತ ಧ್ವನಿ ಕಡಿತ, ಥರ್ಡ್ ಜನರೇಶನ್ ಲೋಕಲ್ ಟೋನ್ ಮ್ಯಾಪಿಂಗ್ ಮತ್ತು ಉತ್ತಮ ಫೇಸ್ ಡಿಟೆಕ್ಶನ್ ಅನ್ನು ಇದು ಪಡೆದುಕೊಂಡಿದೆ.

ಸಂಗ್ರಹಣೆ

ಸಂಗ್ರಹಣೆ

#6

ಐಫೋನ್ ಎಸ್ಇ ಎರಡು ಸಂಗ್ರಹಣಾ ಆಯ್ಕೆಗಳಲ್ಲಿ ಬಂದಿವೆ: 16 ಜಿಬಿ ಮತ್ತು 64 ಜಿಬಿ ಮತ್ತು ಸಾಮಾನ್ಯವಾಗಿ ಮೈಕ್ರೋಎಸ್‌ಡಿ ಕಾರ್ಡ್ ಇದ್ದು ಇದನ್ನು ವಿಸ್ತರಿಸುವ ಅನುಕೂಲವೂ ಇದೆ.

ಬ್ಯಾಟರಿ

ಬ್ಯಾಟರಿ

#7

ಆಪಲ್ ಇದುವರೆಗೆ ಐಫೋನ್ ಎಸ್ಇಯ ಬ್ಯಾಟರಿ ಸಾಮರ್ಥ್ಯವನ್ನು ತಿಳಿಸಿಲ್ಲ. ಆದರೆ 64 ಬಿಟ್ A9 ಚಿಪ್‌ನೊಂದಿಗೆ ಮೋಶನ್ ಎಮ್9 ಕೊ ಪ್ರೊಸೆಸರ್ ದೀರ್ಘ ಬ್ಯಾಟರಿ ಜೀವನವನ್ನು ನೀಡುತ್ತದೆ.

ಬಣ್ಣಗಳು

ಬಣ್ಣಗಳು

#8

ಐಫೋನ್ ಎಸ್ಇ ಸ್ಪೇಸ್ ಗ್ರೇ, ಸಿಲ್ವರ್, ಗೋಲ್ಡ್ ಮತ್ತು ರೋಸ್ ಗೋಲ್ಡ್ ಮೆಟಾಲಿಕ್ ಫಿನಿಶ್‌ಗಳಲ್ಲಿ ಲಭ್ಯವಿದೆ.

ಬೆಲೆ

ಬೆಲೆ

#9

ಬೆಲೆಯ ವಿಷಯಕ್ಕೆ ಬಂದಾಗ, ಆಪಲ್ ಐಫೋನ್ ಎಸ್ಇ ಮಿತದರದ ಹೊಸ ಐಫೋನ್ ಆಗಿದ್ದು ಸರಾಸರಿ 16 ಜಿಬಿ ಆವೃತ್ತಿ $399 (25,950) ಕ್ಕೆ ಲಭ್ಯವಿದ್ದರೆ, 64 ಜಿಬಿ ಆವೃತ್ತಿ ರೂ $100 (32,435) ಕ್ಕೆ ಲಭ್ಯವಿದೆ.

ಭಾರತೀಯ ಲಭ್ಯತೆ

ಭಾರತೀಯ ಲಭ್ಯತೆ

#10

ಐಫೋನ್ ಎಸ್ಇ ಏಪ್ರಿಲ್‌ನಲ್ಲೇ ಭಾರತದ ಮಾರುಕಟ್ಟೆಗೆ ಕಾಲಿರಿಸಲಿದೆ. ಐಫೋನ್ ಎಸ್ಇ ಯ ಸ್ಥಳೀಯ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ. ಅದಾಗ್ಯೂ ಹೆಚ್ಚು ಕಡಿಮೆ ರೂ 39,000 ಕ್ಕೆ ಲಭ್ಯವಾಗಬಹುದು.

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಪುಟ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As expected, Apple has introduced the cheapest iPhone - the iPhone SE at an event happened at its headquarters in Cupertino. The new iPhone SE is the cheapest iPhone ever built by the company and is a simply a 4-inch variant of its bigger sibling - the iPhone 6s.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot