ನಿಮ್ಮ ಕುತೂಹಲವನ್ನು ತಣಿಸಲಿರುವ ಐಫೋನ್ 6 ವೈಶಿಷ್ಟ್ಯತೆಗಳು

By Shwetha
|

ಆಪಲ್ ಐಫೋನ್ 6 ಹೆಚ್ಚು ನಿರೀಕ್ಷೆಗಳನ್ನು ಒಳಗೊಂಡು ಮಾರುಕಟ್ಟೆಗೆ ಬರುತ್ತಿದೆ. ಹೆಚ್ಚಿನ ಪತ್ರಿಕೆಗಳು ವೆಬ್‌ಸೈಟ್‌ಗಳು ಐಫೋನ್ ಬಗೆಗಿನ ಮಹತ್ವದ ಅಂಶಗಳನ್ನು ಹೊರತರುತ್ತಿದ್ದು ಗ್ರಾಹಕರ ತುಡಿತವನ್ನು ಹೆಚ್ಚಿಸುತ್ತಿದೆ. ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟುಮಾಡುವ ಆಪಲ್ ಇತ್ತೀಚೆಗಷ್ಟೇ ತನ್ನ Q2 ನ 2014 ರ ಗಳಿಕೆಯನ್ನು ಬಹಿರಂಗಪಡಿಸಿದ್ದು 43.7 ಮಿಲಿಯಗಿಂತಲೂ ಹೆಚ್ಚಿನ ಮಾರಾಟವನ್ನು ಹೊಂದಿದ್ದು ಆಪಲ್‌ಗಿರುವ ಬೇಡಿಕೆಯನ್ನು ಯೋಚಿಸುವಂತೆ ಮಾಡಿದೆ.

ಆಪಲ್ ಐಫೋನ್ 6 ರೌಂಡ್ ಕೋರ್ನರ್‌ಗಳನ್ನು ಹೊಂದಿದ್ದು ಐಫೋನ್ 5s ಗಿಂತ ನೇರ ಮೂಲೆಗಳು ಇದರಲ್ಲಿದೆ. ಅಲ್ಯುಮಿನಿಯಂ ಆಕಾರ, ಗ್ಲಾಸ್ ಆಂಟೆನಾ ಹೀಗೆ ವಿಭಿನ್ನ ಅಂಶಗಳಿಂದ ಮನಸೂರೆಗೊಳ್ಳುವಂತಿದೆ. ಒಟ್ಟಾರೆ ಹೇಳುವುದಾದರೆ ಆಪಲ್ ತನ್ನ ನಿರೀಕ್ಷೆಯ ಐಫೋನ್‌ನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡುತ್ತಿದೆ.

ಆಕರ್ಷಕ ವಿನ್ಯಾಸ, ಸುಸಕ್ಕಿತ ಡಿಸ್‌ಪ್ಲೇ, ಬಳಸಲು ಸುಲಭವಾಗಿರುವ ಸೆಟ್ಟಿಂಗ್‌ಗಳು, ಹೊಸ ತಂತ್ರಜ್ಞಾನಗಳು ಹೀಗೆ ಹತ್ತು ಹಲವು ಅಂಶಗಳಿಂದ ಭಿನ್ನತೆಯನ್ನು ಹೊಂದಿರುವ ಐಫೋನ್ 6 ಭವಿಷ್ಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವುದು ಖಂಡಿತ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಕರ್ವ್ ಅನ್ನು ಒಮ್ಮೆಗೆ ನೆನಪಿಸುವ ವಿನ್ಯಾಸ ಐಪೋನ್ 6 ಗಿದೆ. ಎರಡು ವಿಭಿನ್ನ ಸ್ಕ್ರೀನ್ ಗಾತ್ರಗಳುಳ್ಳ ಐಫೋನ್ ಅನ್ನು ಲಾಂಚ್ ಮಾಡುತ್ತಿರುವ ಆಪಲ್ 4.7-ಇಂಚಿನದ್ದನ್ನು ಸಪ್ಟೆಂಬರ್‌ನಲ್ಲಿ ಮತ್ತು 5.5 ಇಂಚಿನದ್ದನ್ನು 2015 ಕ್ಕೆ ತರುವ ನಿರೀಕ್ಷೆಯಲ್ಲಿದೆ.

ಆಪಲ್ ಐಫೋನ್ 6 ಹೊಸ ವಿನ್ಯಾಸ, ವೇಗವಾದ ಎ೮ ಪ್ರೊಸೆಸರ್, ಟಚ್ ಐಡಿ ಫಿಂಗರ್‌ಪ್ರಿಂಟ್, ಸುಧಾರಿತ ಸಿರಿ ಇಂಟಿಗ್ರೇಶನ್, ಮತ್ತು ನಿರೀಕ್ಷಿತ ಹೊಸ ತಂತ್ರಜ್ಞಾನದ ಕ್ಯಾಮರಾವನ್ನು ಒಳಗೊಂಡಿದೆ. ನಿಮ್ಮ ಕುತೂಹಲವನ್ನು ತಣಿಸುವ ಸಲುವಾಗಿ ಆಪಲ್ ಐ ಫೋನ್‌ನ ಇನ್ನಷ್ಟು ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

#1

#1

ಐಫೋನ್ 6 ಕರ್ವ್ ಡಿಸ್‌ಪ್ಲೇಯನ್ನು ಹೊಂದಿದ್ದು ಸ್ಟೈಲಿಶ್ ಆಕಾರದಲ್ಲಿ ಮನಸೂರೆಗೊಳ್ಳಲಿದೆ. ಆಪಲ್‌ನ ಇತರ ಡಿವೈಸ್‌ಗಳಿಗೆ ಹೋಲಿಸಿದಾಗ ಇದು ಇನ್ನಷ್ಟು ಸ್ಲಿಮರ್ ಮತ್ತು ಆಕರ್ಷಕವಾಗಿದೆ.

#2

#2

ಕ್ವಾಂಟಮ್ ಡಾಟ್ಸ್ ತಂತ್ರಜ್ಞಾನವನ್ನು ಐಪೋನ್ 6 ಬಿಡುಗಡೆ ಮಾಡಲಿದ್ದು ಆಪಲ್ ಈ ತಂತ್ರಜ್ಞಾನ ಖರೀದಿಯಲ್ಲಿ ಸ್ಪರ್ಧೆಯನ್ನೊಡ್ಡುತ್ತಿದೆ ಎಂದೇ ಹೇಳಬಹುದಾಗಿದೆ.

#3

#3

ಬಳಕೆದಾರರ ಚಲನೆಗಳು, ಸನ್ನೆಗಳು, ಅಂತರ ಮತ್ತು ಸ್ಥಳಗಳನ್ನು ಸುಲಭವಾಗಿ ಗುರುತಿಸಲು ಸಹಾಯಕವಾಗಿರುವ ಸುಧಾರಿತ ಸೆನ್ಸಾರ್ ಅಂಶಗಳನ್ನು ಐಪೋನ್ 6 ಒಳಗೊಂಡಿದೆ. ಬಳಕೆದಾರ ಎಲ್ಲಿದ್ದರೂ ಡಿವೈಸ್‌ನ ನಿಯಂತ್ರಣವನ್ನು ಮಾಡಬಹುದಾಗಿದೆ.

#4

#4

ಈ ಫೋನ್ ಇತರ ಆಪಲ್ ನಿರ್ಮಿತ ಫೋನ್‌ಗಳಿಗಿಂತ ಹಗುರವಾಗಿದ್ದು ಪ್ರೊಟ್ರುಡಿಂಗ್ ರಿಯರ್ ಕ್ಯಾಮರಾದೊಂದಿಗೆ ಬಂದಿದೆ.

#5

#5

ನೆಕ್ಸ್ಟ್ ಜನರೇಶನ್ ಐಪೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಪೋನ್ 6 ಆಗಸ್ಟ್ ಅಥವಾ ಸಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X