Home
ಮೊಬೈಲ್

ಈ 9 ಕಾರಣಗಳಿಂದ ನೀವು ಆಪಲ್ ಐಪೋನ್ ನಿಂದ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗೆ ಬದಲಾಯಿಸಿಕೊಳ್ಳುತ್ತಿರಿ..!

By Avinash

ಆಪಲ್ ಸಂಸ್ಥೆ ಇತ್ತೀಚೆಗೆ ತಾನೇ ಹೊಸ iOS 12 ಅನ್ನು ಬಿಡುಗಡೆಗೊಳಿಸಿದೆ. ಹೊಸ ಒಎಸ್ ನಿಂದ ಐಪೋನ್ ಗಳಲ್ಲಿ ಹೊಸ ಫೀಚರ್ ಗಳು ಬರಲಿವೆ. ಅದೇ ರೀತಿ ಆಂಡ್ರಾಯ್ಡ್ ಕೂಡ ಹೊಸ ಆಂಡ್ರಾಯ್ಡ್ ಪಿ ಒಎಸ್ ಅನ್ನು ಬಿಡುಗಡೆಗೊಳಿಸಿದೆ. ಎರಡು ಒಎಸ್ ಗಳು ಬಳಕೆದಾರರಿಗೆ ಬೇಟಾ ಆವೃತ್ತಿಗಳಲ್ಲಿ ಲಭ್ಯವಿದ್ದು, ವರ್ಷಾಂತ್ಯದಲ್ಲಿ ಸ್ಮಾರ್ಟ್ ಪೋನ್ ಮತ್ತು ಐಪೋನ್ ಬಳಕೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಸಿಗಲಿವೆ.

ಐಪೋನ್ ಗಳಲ್ಲಿನ ಹಲವು ಫೀಚರ್ ಗಳು ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ನಲ್ಲಿ ಸಿಗುವುದಿಲ್ಲ, ಅದರಂತೆ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ನ ಹಲವು ಫೀಚರ್ಸ್ ಗಳು ಐಪೋನ್ ನಲ್ಲಿ ಲಭ್ಯವಿಲ್ಲ ಎಂದರೆ ನಂಬಲೇಬೇಕು. ಇದಲ್ಲದೇ ಅನೇಕ ಹೊಸ ಫೀಚರ್ ಗಳು ಆಂಡ್ರಾಯ್ಡ್ ಪಿ ಒಎಸ್ ನೊಂದಿಗೆ ತಂತ್ರಜ್ಞಾನ ಲೋಕಕ್ಕೆ ಪ್ರವೇಶಿಸುತ್ತಿವೆ. ಹಾಗಾಗೀ, ಕೆಳಗಿನ 9 ಕಾರಣಗಳು ನೀವು ಐಪೋನ್ ನಿಂದ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗೆ ಬದಲಾಯಿಸುವಂತೆ ಮಾಡುತ್ತವೆ.

ಈಕಾರಣಗಳಿಂದ ನೀವು ಐಪೋನ್ ನಿಂದ ಆಂಡ್ರಾಯ್ಡ್ ಗೆ ಬದಲಾಯಿಸಿಕೊಳ್ಳುತ್ತಿರಿ..!

1. ಆಂಡ್ರಾಯ್ಡ್ ನಲ್ಲಿ ಮಲ್ಟಿಮಲ್ ಪ್ರೋಪೈಲ್ಸ್ ಸೃಷ್ಟಿಸಬಹುದು

1. ಆಂಡ್ರಾಯ್ಡ್ ನಲ್ಲಿ ಮಲ್ಟಿಮಲ್ ಪ್ರೋಪೈಲ್ಸ್ ಸೃಷ್ಟಿಸಬಹುದು

ಮಲ್ಟಿಪಲ್ ಪ್ರೋಪೈಲ್ಸ್ ಸೃಷ್ಟಿಸುವ ಆಯ್ಕೆಯು ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗ್ರಾಹಕರಿಗೆ ಲಾಲಿಪಾಪ್ ಆವೃತ್ತಿಯಿಂದ ಲಭ್ಯವಿವೆ. ಆದರೆ iOS12ನಲ್ಲೂ ಈ ಫೀಚರ್ ಇಲ್ಲ. ಈ ಫೀಚರ್ ನಿಂದ ಪ್ರತ್ಯೇಕವಾದ ಆಪ್ ಸೆಟ್ ಮತ್ತು ಅಕೌಂಟ್ಸ್ ಜೊತೆಗೆ ಮಲ್ಟಿಪಲ್ ಪ್ರೋಪೈಲ್ಸ್ ಸೃಷ್ಟಿಸಬಹುದಾಗಿದೆ.

2. ಹೋಮ್ ಸ್ಕ್ರೀನ್ ಬದಲಾಯಿಸಬಹುದು

2. ಹೋಮ್ ಸ್ಕ್ರೀನ್ ಬದಲಾಯಿಸಬಹುದು

ಆಂಡ್ರಾಯ್ಡ್ ಕಸ್ಟಮೈಜ್ ಆಗಿರುವುದರಿಂದ ಯಾವುದೇ ಡೇವಲಪರ್ ಆಪ್ ಗಳನ್ನು ಬದಲಾಯಿಸಬಹುದಾಗಿದೆ. ಇಲ್ಲಿ ಹೋಮ್ ಸ್ಕ್ರೀನ್ ಕೂಡ ಬದಲಾಯಿಸುವ ಆಯ್ಕೆಯಿದ್ದು, ನಿಮ್ಮ ಆಸಕ್ತಿಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಆದರೆ ಈ ಆಯ್ಕೆ iOS ಬಳಕೆದಾರರಿಗೆ ಇಲ್ಲ.

3. ಸ್ಪ್ಲಿಟ್ ಸ್ಕ್ರೀನ್ ಜೊತೆ ಒಂದೇ ಸಮಯದಲ್ಲಿ 2 ಕೆಲಸ

3. ಸ್ಪ್ಲಿಟ್ ಸ್ಕ್ರೀನ್ ಜೊತೆ ಒಂದೇ ಸಮಯದಲ್ಲಿ 2 ಕೆಲಸ

ಒಂದೇ ಸಮಯದಲ್ಲಿ ಅನೇಕ ಕಾರ್ಯನಿರ್ವಹಿಸಲು ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಬಳಕೆದಾರರಿಗೆ ಆಂಡ್ರಾಯ್ಡ್ 6.0 ಮಾರ್ಷ್ ಮಲ್ಲೋ ಆವೃತ್ತಯಿಂದ ಸ್ಪ್ಲಿಟ್ ಸ್ಕ್ರೀನ್ ಆಯ್ಕೆ ನೀಡಲಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ಕನಿಷ್ಠ 2 ಆಪ್ ಗಳೊಂದಿಗೆ ಒಂದೇ ಸಮಯದಲ್ಲಿ ಕಾರ್ಯನಿರ್ವಹಿಸಬಹುದು. ಆದರೆ, ಈ ಆಯ್ಕೆ ಕೂಡ ಆಪಲ್ iOS ಬಳಕೆದಾರರಿಗೆ ಸಿಗುತ್ತಿಲ್ಲ.

4. ಆಂಬಿಯೆಂಟ್ ಡಿಸ್ ಪ್ಲೇ

4. ಆಂಬಿಯೆಂಟ್ ಡಿಸ್ ಪ್ಲೇ

ಈ ಫೀಚರ್ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳಲ್ಲಿ ಲಭ್ಯವಿಲ್ಲ. ಈ ಫೀಚರ್ ಅನ್ನು ಆಂಡ್ರಾಯ್ಡ್ ತನ್ನಲ್ಲಿಯೇ ಉಳಿಸಿಕೊಂಡಿದೆ. ಗೂಗಲ್ ಪಿಕ್ಸೆಲ್ 2, ಸ್ಯಾಮಸಂಗ್ ಗೆಲಾಕ್ಸಿ ಎಸ್ 9, ಮೊಟೊರೊಲಾ, ನೋಕಿಯಾ ಮತ್ತೀತರ ಸ್ಮಾರ್ಟ್ ಪೋನ್ ಗಳಲ್ಲಿ ಲಭ್ಯವಿದೆ. ಇದರಿಂದ ಸ್ಮಾರ್ಟ್ ಪೋನ್ ಯಾವಾಗಲೂ ಆನ್ ಆಗಿರುತ್ತೆ. ಈ ಫೀಚರ್ iOSಗೆ ಇನ್ನು ಬಂದಿಲ್ಲ ಅಂದರೆ ನಂಬಲೇಬೇಕು.

5. ಇನ್ ಡೋರ್ ನ್ಯಾವಿಗೇಷನ್ ಅಭಿವೃದ್ಧಿ

5. ಇನ್ ಡೋರ್ ನ್ಯಾವಿಗೇಷನ್ ಅಭಿವೃದ್ಧಿ

ಆಂಡ್ರಾಯ್ಡ್ ಪಿ ಒಎಸ್ Wi-Fi RTT (ರೌಂಡ್-ಟ್ರಿಪ್-ಟೈಮ್) ಅಥವಾ IEEE 802.11mc Wi-Fi ಪ್ರೋಟೋಕಾಲ್ ಗೆ ಬೆಂಬಲಿಸುತ್ತಿದೆ. ಇದರಿಂದ ಗೂಗಲ್ ಮ್ಯಾಪ್ಸ್ ನಲ್ಲಿ ಇನ್ ಡೋರ್ ನ್ಯಾವಿಗೇಷನ್ ಉತ್ತಮವಾಗಿದೆ. ಈ ಫೀಚರ್ ಇನ್ನು ಆಪಲ್ ಐಪೋನ್ ನಲ್ಲಿ ಲಭ್ಯವಿಲ್ಲ.

6. ಪಿಕ್ಚರ್ ಮೋಡ್ ನಲ್ಲಿ ನೇಟಿವ್ ಪಿಕ್ಚರ್ ಆಯ್ಕೆ

6. ಪಿಕ್ಚರ್ ಮೋಡ್ ನಲ್ಲಿ ನೇಟಿವ್ ಪಿಕ್ಚರ್ ಆಯ್ಕೆ

ಆಂಡ್ರಾಯ್ಡ್ ಡೇವಲಪರ್ಸ್ ತಮ್ಮ ಆಪ್ ಗಳಿಗೆ ಪಿಕ್ಚರ್ ಮೋಡ್ ನಲ್ಲಿ ತಮ್ಮದೇ ಆದ ಪಿಕ್ಚರ್ ಅಪ್ ಲೋಡ್ ಮಾಡಲು ಅನುಮತಿಸಿದೆ. ಆದರೆ, iOS ಈ ಫೀಚರ್ ನಲ್ಲಿ ನಿಯಮಗಳನ್ನು ಹೊಂದಿದೆ. ಆದ್ದರಿಂದ ಫೀಚರ್ ಆಂಡ್ರಾಯ್ಡ್ ಗೆ ಮಾತ್ರ ಬೆಂಬಲಿಸುತ್ತದೆ ಹೊರತು iOSಗಲ್ಲ.

7. ಆಟೋ ಆಪ್ ಶಾರ್ಟ್ ಕಟ್ಸ್

7. ಆಟೋ ಆಪ್ ಶಾರ್ಟ್ ಕಟ್ಸ್

ಆಂಡ್ರಾಯ್ಡ್ ಹೀಗಾಗಲೇ ತನ್ನ ಹೊಸ ಆಂಡ್ರಾಯ್ಡ್ ಪಿ ಒಎಸ್ ನಲ್ಲಿ ಗೂಗಲ್ ಆಟೋ ಆಪ್ ಶಾರ್ಟ್ ಕಟ್ಸ್ ಫೀಚರ್ ಪರಿಚಯಿಸಿದೆ. ಈ ಫೀಚರ್ ನಿಂದ ಸ್ಕ್ರೀನ್ ಮೇಲೆ ಸಿಂಗಲ್ ಟ್ಯಾಪ್ ಮಾಡಿ ಆಪ್ ನಲ್ಲಿ ಕಾರ್ಯನಿರ್ವಹಣೆ ಮಾಡಬಹುದಾಗಿದೆ.

8. ಸೆಕ್ಯುರಿಟಿ ಮೋಡ್ ನಿಂದ ಫಿಂಗರ್ ಪ್ರಿಂಟ್ ಸೆನ್ಸಾರ್ ಡಿಸೇಬಲ್

8. ಸೆಕ್ಯುರಿಟಿ ಮೋಡ್ ನಿಂದ ಫಿಂಗರ್ ಪ್ರಿಂಟ್ ಸೆನ್ಸಾರ್ ಡಿಸೇಬಲ್

ಎಂಟರ್ ಲಾಕ್ ಡೌನ್ ಆಂಡ್ರಾಯ್ಡ್ ಪಿ ಒಎಸ್ ನ ಮತ್ತೊಂದು ಫೀಚರ್ ಆಗಿದ್ದು, ಇದು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಸಹ ಲಾಕ್ ಮಾಡುತ್ತೆ. ಈ ಫೀಚರ್ ನಿಮಗೆ ಪವರ್ ಬಟನ್ ಅನ್ನು ಲಾಂಗ್ ಪ್ರೆಸ್ ಮಾಡಿದರೆ ಕಾಣ ಸಿಗುತ್ತದೆ. ಈ ಫೀಚರ್ ನಿಮಗೆ ಆಪಲ್ iOSನಲ್ಲಿ ಸಿಗುವುದಿಲ್ಲ.

9. ಕ್ವಿಕ್ ಸ್ಕ್ರೀನ್ ರೋಟೆಷನ್ ಟೂಲ್

9. ಕ್ವಿಕ್ ಸ್ಕ್ರೀನ್ ರೋಟೆಷನ್ ಟೂಲ್

iOS 12 ರಲ್ಲಿ ಮಿಸ್ ಆದ ಮತ್ತೊಂದು ಫೀಚರ್ ಎಂದರೆ ಕ್ವಿಕ್ ಸ್ಕ್ರೀನ್ ರೋಟೆಷನ್. ಇದು ಲ್ಯಾಂಡ್ ಸ್ಕೇಪ್ ಮೋಡ್ ಗೆ ಹೋದಾಗ ಬಲ ಬದಿಯ ಮೇಲ್ತುದಿಯಲ್ಲಿ ಕ್ವಿಕ್ ಸ್ಕ್ರೀನ್ ರೋಟೆಷನ್ ಬಟನ್ ನೀಡಿದ್ದರಿಂದ ಸುಲಭವಾಗಿ ಸ್ಕ್ರೀನ್ ರೋಟೆಷನ್ ಮಾಡಬಹುದಾಗಿದೆ. ಇದರಿಂದ ಯಾವಾಗಲೂ ಸ್ವೈಪಿಂಗ್ ಡೌನ್ ಮಾಡಿ ನೊಟಿಫೀಕೇಷನ್ ಪ್ಯಾನೆಲ್ ನಿಂದ ಆಟೋ ರೋಟೆಷನ್ ಗೆ ಬದಲಾಯಿಸುವುದನ್ನು ತಡೆಯುತ್ತಿತ್ತು. ಆದರೆ, ಈ ಫೀಚರ್ ಅನ್ನು ಆಪಲ್ iOS12 ನಿಂದ ಕೈಬಿಟ್ಟಿದೆ. ಈ ಫೀಚರ್ ಈಗ ಆಂಡ್ರಾಯ್ಡ್ ಪಿ ಒಎಸ್ ನಲ್ಲಿ ಲಭ್ಯವಿದೆ.

Best Mobiles in India

English summary
Apple iPhone users, here are 9 'reasons' to switch to Android smartphone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+