Subscribe to Gizbot

ಮರೆಯಾಗುವ ಐಫೋನ್ X ಮೇಲೆ ಬೊಂಬಾಟ್ ಆಫರ್ ಕೊಟ್ಟ ಆಪಲ್: ಬೆಲೆಯಲ್ಲಿ ಭಾರೀ ಕಡಿತ..!

Written By:

ಶೀಘ್ರವೇ ಮಾರುಕಟ್ಟೆಯಿಂದ ಐಫೋನ್ X ಮಾಯವಾಗಲಿದ್ದು, ಈ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದನ್ನು ನಿಲ್ಲಿಸುವುದಾಗಿ ಆಪಲ್ ಘೋಷಣೆ ಮಾಡಿದ್ದು, ಆದರೆ ಇದರ ಬೆನ್ನಲ್ಲೇ 10ನೇ ವಾರ್ಷಿಕೋತ್ಸವದ ಅಂಗವಾಗಿ ಆಪಲ್ ಬಿಡುಗಡೆ ಮಾಡಿರುವ ಐಫೋನ್ X ಸೇರಿದಂತೆ ಎಲ್ಲಾ ಐಫೋನ್‌ಗಳ ಮೇಲೆ ಆಪಲ್ ರೂ.12,000 ಕಡಿತವನ್ನು ಘೋಷಣೆ ಮಾಡಿದೆ ಎನ್ನಲಾಗಿದೆ.

ಮರೆಯಾಗುವ ಐಫೋನ್ X ಮೇಲೆ ಬೊಂಬಾಟ್ ಆಫರ್ ಕೊಟ್ಟ ಆಪಲ್: ಬೆಲೆಯಲ್ಲಿ ಭಾರೀ ಕಡಿತ..!

ಆಪಲ್ ತನ್ನ ಎಲ್ಲಾ ಐಫೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಈ ಬಾರಿ ಆನ್‌ಲೈನ್ ಮಾರುಕಟ್ಟೆಯನ್ನು ಬಿಟ್ಟು ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಅದರಲ್ಲೂ ಆಪಲ್ ಸ್ಟೋರ್‌ಗಳಲ್ಲಿ ಐಫೋನ್ ಖರೀದಿಸುವವರಿಗೆ ಆಪಲ್ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಈ ಮೂಲಕ ಹೆಚ್ಚಿನ ಜನರನ್ನು ಸೆಳೆಯಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಫರ್‌ಗಳು:

ಆಫರ್‌ಗಳು:

ಆಪಲ್ ತನ್ನ ಐಫೋನ್ ಖರೀದಿ ಮಾಡುವವರಿಗೆ ರೂ.12,000ಗಳ ವರೆಗೆ ಡಿಸ್ಕೌಂಟ್ ನೀಡುತ್ತಿದ್ದು, ಇದರೊಂದಿಗೆ ಕ್ಯಾಷ್ ಬ್ಯಾಕ್ ಆಫರ್ ಸಹ ಲಭ್ಯವಿದೆ. HDFC ಬ್ಯಾಂಕ್ ಬಳಕೆದಾರರಿಗೆ ಆಫರ್ ನೀಡಲಾಗುತ್ತಿದೆ. ಕ್ರೆಡಿಟ್ ಕಾರ್ಡ್, EMI, ಡೆಬಿಟ್ ಕಾರ್ಡ್ ಕಾರ್ಡ್‌ ನೀಡಲಾಗುತ್ತಿದೆ. ಇದಲ್ಲದೇ ಕನ್ಸೂಮರ್ ಡ್ಯುರಬಲ್ ಲೋನ್ ವ್ಯವಸ್ಥೆ ಸಹ ಇದೆ.

ಐಫೋನ್ X ಬೆಲೆಗಳು ಇಂತಿದೆ:

ಐಫೋನ್ X ಬೆಲೆಗಳು ಇಂತಿದೆ:

ಮಾರುಕಟ್ಟೆಯಲ್ಲಿ ಐಫೋನ್ X 64 GB ಆವೃತ್ತಿಯ ಬೆಲೆ ರೂ. 92,430 ಗಳಾಗಿದ್ದು, ಇದೇ ಮಾದರಿಯಲ್ಲಿ 256 GB ಆವೃತ್ತಿಯ ಬೆಲೆ ರೂ.1,05,720 ಗಳಾಗಿದೆ. ಇದೀಗ 12,000 ರೂ.ಗಳ ರಿಯಾಯಿತಿಯೊಂದಿಗೆ 64 GB ಹಾಗೂ 256 GB ಆವೃತ್ತಿಯ ಬೆಲೆ ಬೆಲೆ ಅನುಕ್ರಮವಾಗಿ ರೂ. 80,430 ಹಾಗೂ ರೂ. 93,720ಕ್ಕೆ ದೊರೆಯುತ್ತಿದೆ.

ಇತರೆ ಐಫೋನ್‌ಗಳು:

ಇತರೆ ಐಫೋನ್‌ಗಳು:

ಐಫೋನ್ ‍‍X ನೊಂದಿಗೆ ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6S, ಐಫೋನ್ 6S ಪ್ಲಸ್, ಐಫೋನ್ 6, ಐಫೋನ್ SE ಮತ್ತು ಐಫೋನ್ 5S ಗಳ ಮೇಲೆಯೂ ಆಫರ್ ಗಳನ್ನು ಕಾಣಬಹುದಾಗಿದೆ.

ಆಫರ್ ಗಳಿದೆ:

ಆಫರ್ ಗಳಿದೆ:

ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಮೇಲೆ ರೂ. 10,000 ಆಫರ್ ಲಭ್ಯವಿದೆ, ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಮೇಲೆ ರೂ.3,000ಗಳವರೆಗೂ ಕಡಿತವನ್ನು ಕಾಣಬಹುದು. ಇದಲ್ಲದೇ ಐಫೋನ್ 6S/ಐಫೋನ್ 6S ಪ್ಲಸ್ ಬೆಲೆಯಲ್ಲಿ ರೂ.2,000 ಕಡಿತವನ್ನು ನೀಡಲಾಗಿದೆ. ಐಫೋನ್ 6/ಐಫೋನ್ SE ಮತ್ತು ಐಫೋನ್ 5S ಮೇಲೆ ರೂ.1,000ದ ವೆರೆಗೂ ಆಫರ್ ಗಳನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Apple iPhone X, iPhone 8 series get up to Rs 12,000 cashback. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot