Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇವಲ 37,999 ರೂಪಾಯಿಗಳಿಗೆ ಖರೀದಿಸಿ 'ಐಫೋನ್ ಎಕ್ಸ್‌ಆರ್'!
2019ರ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಆಪಲ್ 'ಐಫೋನ್ ಎಕ್ಸ್‌ಆರ್' ಭಾರೀ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಭಾರತದಲ್ಲಿ ಈ ಮೊದಲು 76,900 ರೂಪಾಯಿಗಳಿಗೆ ಬಿಡುಗಡೆಯಾಗಿದ್ದ ಐಫೋನ್ ಎಕ್ಸ್‌ಆರ್‌ನ ಅದೇ ಮಾದರಿಯು ಇದೀಗ ಕೇವಲ 37,999 ರೂಪಾಯಿಗಳಿಗೆ ಖರೀದಿಗೆ ಲಭ್ಯವಿದೆ. ಅಮೆಜಾನ್ ಪಟ್ಟಿಯ ಪ್ರಕಾರ, ಐಫೋನ್ ಎಕ್ಸ್‌ಆರ್ ಬೆಲೆ 39,999 ರೂ.ಗಳಾಗಿವೆ. ಆದರೆ, ಎಸ್‌ಬಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಫೋನ್ ಖರೀದಿಸುವ ಬಳಕೆದಾರರು ಹೆಚ್ಚುವರಿ ರೂ. 2,000 ರಿಯಾಯಿತಿ ಪಡೆಯಲಿದ್ದಾರೆ.

ನೀವೀಗ ಆಪಲ್ ಸ್ಮಾರ್ಟ್‌ಫೋನ್ ಯೋಜಿಸುತ್ತಿದ್ದರೆ ಅಥವಾ ಅಪ್‌ಡೇಟ್ ಆಗಲು ಇಚ್ಚಿಸಿದರೆ ಐಫೋನ್ ಎಕ್ಸ್‌ಆರ್ ಅತ್ಯಂತ ಲಾಭದಾಯಕವಾದ ಕೊಡುಗೆ. ಏಕೆಂದರೆ, ದುಬಾರಿ ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್‌ನಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಈ ಫೋನ್ ಬೆಂಬಲಿಸುತ್ತದೆ. ಇದಲ್ಲದೆ, ಆಪಲ್ ನೀಡುವ ಸಾಫ್ಟ್‌ವೇರ್ ಬೆಂಬಲವು ಸಹ ಅತ್ಯುತ್ತಮವಾಗಿದೆ. ಈ ಸಾಧನವು ಕನಿಷ್ಟ ಮೂರು ಪ್ರಮುಖ ಸಾಫ್ಟ್‌ವೇರ್ ನವೀಕರಣಗಳನ್ನು ಸ್ವೀಕರಿಸುತ್ತದೆ ಮತ್ತು ಹಲವು ವರ್ಷಗಳ ನಂತರವೂ ಉತ್ತಮ ಮರುಮಾರಾಟ ಮೌಲ್ಯವನ್ನು ಪಡೆಯುತ್ತದೆ.

ಐಫೋನ್ ಎಕ್ಸ್ ಪ್ರಾರಂಭಿಕವಾಗಿ ಭಾರತದಲ್ಲಿ 76,900 ರುಪಾಯಿ ಬೆಲೆಗೆ ಬಿಡುಗಡೆಗೊಂಡಿತ್ತು. ಇತ್ತೀಚೆಗಿನ ಐಫೋನ್ ಎಕ್ಸ್ ಆರ್ ಬಗೆಗಿನ ರಿವ್ಯೂನಲ್ಲಿ ಇದು ಬಿಡುಗಡೆಗೊಂಡ ಎಂಟು ತಿಂಗಳ ನಂತರವೂ ಕೂಡ ಗ್ರಾಹಕರಿಗೆ ಮೆಚ್ಚುಗೆ ಪಡೆಯುತ್ತಿರುವ ಫೋನ್ ಆಗಿದೆ ಎಂದು ತಿಳಿಸಿದ್ದೆವು. ಅದಕ್ಕೆ ಕಾರಣ ಐಫೋನ್ ಎಕ್ಸ್ ಆರ್ ಅತ್ಯುತ್ತಮ ಬ್ಯಾಟರಿ ಲೈಫ್ ಅನ್ನು ಹೊಂದಿದ್ದು ಮತ್ತು ಇದುವರೆಗೆ ಬಿಡುಗಡೆಗೊಂಡಿರುವ ಎಲ್ಲಾ ಐಫೋನ್ ಗಳಿಗಿಂತ ಅತ್ಯುತ್ತಮ ಬ್ಯಾಟರಿ ಲೈಫ್ ಅನ್ನು ಈ ಫೋನ್ ಹೊಂದಿರುವುದು ಕೂಡ ಕಾರಣ.

ಐಫೋನ್ ಎಕ್ಸ್ ಆರ್ ಸ್ಪೋರ್ಟ್ ಸರಣಿ 7000 ಅಲ್ಯೂಮಿನಿಯಂ ಫ್ರೇಮ್ ಜೊತೆಗೆ ಗ್ಲಾಸ್ ನ್ನು ಹಿಂಭಾಗ ಮತ್ತು ಮುಂಭಾಗದಲ್ಲಿ ಹೊಂದಿದೆ. ಐಫೋನ್ ಎಕ್ಸ್ಎಸ್ ಮತ್ತು ಎಕ್ಸ್ಎಸ್ ಮ್ಯಾಕ್ಸ್ ನ AMOLED ಪೆನಲ್ ನಂತೆಯೇ ಐಫೋನ್ ಎಕ್ಸ್ ಆರ್ 6.1-ಇಂಚಿನ HD (1792x828) LCD ಯನ್ನು ಹೊಂದಿದೆ. , ಇದನ್ನು 2.5 ಡಿ ಬಾಗಿದ ಅಯಾನ್ಎಕ್ಸ್ಚೇಂಜ್ ಟೆಂಪರ್ಡ್ ಗ್ಲಾಸ್‌ನಿಂದ ರಕ್ಷಿಸಲಾಗಿದೆ. ಇದು ಬ್ಲೇಝಿಂಗ್ ಫಾಸ್ಟ್ A12 ಬಯೋನಿಕ್ ಚಿಪ್ ಸೆಟ್ ನ್ನು ಹೊಂದಿದೆ.ಮೃದುವಾದ iOS 12 ಸಾಫ್ಟ್ ವೇರ್ ಅನ್ನು ಒಳಗೊಂಡಿದೆ.

ಫೋನಿನಲ್ಲಿ 12- ಮೆಗಾಪಿಕ್ಸಲ್ f/1.8 ಸೆನ್ಸರ್ ಕ್ಯಾಮರಾವಿದ್ದು ನ್ಯಾಚುರಲ್ ಕ್ಯಾಪ್ಚರ್ ಮತ್ತು ಹಗಲಿನ ಬೆಳಕಿನಲ್ಲಿ ಅಧ್ಬುತ ಶಾಟ್ಸ್ ಗಳನ್ನು ಶೂಟ್ ಮಾಡುವುದಕ್ಕೆ ನೆರವು ನೀಡುತ್ತದೆ. ಆದರೆ ಐಫೋನ್ ಎಕ್ಸ್ ಆರ್ ಹೊಸ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಿಗೆ ಸ್ಪರ್ಧೆಯೊಡ್ಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಕಡಿಮೆ ಬೆಳಕಿನ ಫೋಟೋಗ್ರಫಿಗೆ ಅಂದರೆ ನೈಟ್ ಮೋಡ್ಸ್ ಗೆ ಇದು ಹೆಚ್ಚಿನ ಸಹಕಾರವನ್ನು ನೀಡುತ್ತಿಲ್ಲ. ಇಷ್ಟೆಲ್ಲ ಹೇಳಿದ ಮೇಲೆ ನಿಮಗೇ ಅರ್ಥವಾಗಿರಬೇಕಲ್ಲವೆ. ಅದ್ಬುತ ಫೋನ್ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದೇನೋ ನಿಜ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470