ಲಕ್ಷ ಬೆಲೆಯ ಐಫೋನ್ XSನ RAM ಮತ್ತು ಬ್ಯಾಟರಿ ಬಗ್ಗೆ ಆಪಲ್ ಬಾಯಿಬಿಟ್ಟಿಲ್ಲ ಯಾಕೆ...?

|

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತೀ ದುಬಾರಿ ಬೆಲೆಯ ಐಫೋನ್ ಎನ್ನಿಸಿಕೊಂಡಿರುವ ಆಪಲ್ ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ನೀವು ಒಂದು ಅಂಶವನ್ನು ಐಫೋನ್‌ಗಳ ಬಗ್ಗೆ ಗಮನಿಸಿದರೆ ನಿಮಗೆ ತಿಳಿಯುವ ಒಂದು ವಿಶೇಷ ಎಂದರೆ ಐಫೋನ್ ನಲ್ಲಿರುವ ಬ್ಯಾಟರಿ ಮತ್ತು RAM ಬಗ್ಗೆ ನಿಮಗೆ ಎಲ್ಲಿಯೂ ಮಾಹಿತಿಯೂ ದೊರೆಯುವುದಿಲ್ಲ. ಅಲ್ಲದೇ ಹೊಸ ಐಫೋನ್ ಲಾಂಚ್ ಸಂದರ್ಭದಲ್ಲಿ ಈ ಕುರಿತು ಆಪಲ್ ಸಹ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ, ಕೊಡುವುದು ಇಲ್ಲ.

ಕೇವಲ ಇಂಟರ್ನಲ್ ಮೆಮೊರಿಯ ಕುರಿತು ಮಾಹಿತಿಯನ್ನು ಮಾತ್ರವೇ ನೀಡುವ ಆಪಲ್, ಬ್ಯಾಟರಿ ಬಾಳಿಕೆಯ ಅವಧಿಯ ಕುರಿತು ಮಾತ್ರವೇ ಮಾಹಿತಿಯನ್ನು ನೀಡುತ್ತದೆ. ಆದರೆ ತನ್ನ ಐಫೋನಿನಲ್ಲಿ ಅಳವಡಿಸಿರುವ RAM ಮತ್ತು ಬ್ಯಾಟರಿ ಕೆಪಾಸಿಟಿಯ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ನೀಡುವುದಿಲ್ಲ. ಇದನ್ನು ನೀವು ಐಫೋನಿನಲ್ಲಿ ನೋಡಿದರು ಸಹ ಸಿಗುವುದಿಲ್ಲ.

ಆಂಡ್ರಾಯ್ಡ್‌ ಫೋನಿನಲ್ಲಿ ಹೆಚ್ಚು:

ಆಂಡ್ರಾಯ್ಡ್‌ ಫೋನಿನಲ್ಲಿ ಹೆಚ್ಚು:

ರೂ.7000ಕ್ಕೆ ದೊರೆಯುವ ಶಿಯೋಮಿ ಸ್ಮಾರ್ಟ್‌ಫೋನಿನಲ್ಲಿ ಇರುವ RAM ಹಾಗೂ ಬ್ಯಾಟರಿ ದುಬಾರಿ ಬೆಲೆಯ ಐಫೋನ್ Xನಲ್ಲಿಯೂ ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ. ಐಫೋನಿನಲ್ಲಿ ಇರುವ RAM ಬಗ್ಗೆ ಕೇಳಿದರೆ ನಿಮಗೆ ಶಾಕ್ ಆಗುವುದು ಖಂಡಿತ. ಈ ಬಗ್ಗೆ ಸಂಫೂರ್ಣ ಮಾಹಿತಿಯೂ ಮುಂದಿದೆ.

ಐಫೋನ್ Xನಲ್ಲಿ:

ಐಫೋನ್ Xನಲ್ಲಿ:

ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಐಫೋನ್ Xನಲ್ಲಿ ನಿಮಗೆ ದೊರೆಯುವುದು ಕೇವಲ 3 GB RAM ಎಂದರೇ ನೀವು ನಂಬಲೇ ಬೇಕು. ಇದು ಬಜೆಟ್ ಆಂಡ್ರಾಯ್ಡ್ ಫೋನಿನಲ್ಲಿಯೇ ಕಾಣಬಹುದಾಗಿದೆ. ಆದರೆ ಐಫೋನ್ ನಲ್ಲಿಯೇ ಟಾಪ್ ಎನ್ನಿಸಿಕೊಂಡಿರುವ ಫೋನಿನಲ್ಲಿ ಕೇವಲ 3 GB RAM ಎಂದರೇ ನೀವು ನಂಬಲೇ ಬೇಕು.

ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್:

ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್:

ಇಂದಿನಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ಗಳಲ್ಲಿ ಐಫೋನಿನಲ್ಲಿಯೇ ದೊಡ್ದದಾದ RAM ಅನ್ನು ಕಾಣಬಹುದಾಗಿದೆ. ಇದರಲ್ಲಿ 4 GB RAM ಅನ್ನು ಅಳವಡಿಸಲಾಗಿದೆ. ಇದೇ ಅತೀ ದೊಡ್ಡ RAM ಎನ್ನಲಾಗಿದೆ.

ಬ್ಯಾಟರಿ ಕೇಳಿದ್ರೆ ಶಾಕ್:

ಬ್ಯಾಟರಿ ಕೇಳಿದ್ರೆ ಶಾಕ್:

ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಐಫೋನ್ Xನಲ್ಲಿ ಕೇವಲ 2716 mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಬಜೆಟ್ ಆಂಡ್ರಾಯ್ಡ್ ಫೋನಿನಲ್ಲಿಯೇ ಇದಕ್ಕಿಂತ ಡಬ್ಬಲ್ ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ.

ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ಬ್ಯಾಟರಿ:

ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ಬ್ಯಾಟರಿ:

ಮಾರುಕಟ್ಟೆಯಲ್ಲಿ ನೂತನವಾಗಿ ಕಾಣಿಸಿಕೊಂಡಿರುವ ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ಗಳಲ್ಲಿ ಬೇರೆ ಬೇರೆ ಗಾತ್ರದ ಬ್ಯಾಟರಿಯನ್ನ ಕಾಣಬಹುದಾಗಿದೆ. ಐಫೋನ್ XSನಲ್ಲಿ 2658 mAh ಬ್ಯಾಟರಿಯನ್ನು ಹಾಗೂ ಐಫೋನ್ XS ಮ್ಯಾಕ್ಸ್ ನಲ್ಲಿ 3174 mAh ಬ್ಯಾಟರಿಯನ್ನು ಮಾತ್ರವೇ ಕಾಣಲು ಸಾಧ್ಯ ಎನ್ನಲಾಗಿದೆ.

Best Mobiles in India

English summary
Apple iPhone XS, iPhone XS Max: RAM, Battery details, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X