ಮುಂದಿನ ಐಫೋನ್ ಬಗ್ಗೆ ಮಾಹಿತಿ ಲೀಕ್: ಮಾರುಕಟ್ಟೆಯಲ್ಲಿ ಸಂಚಲನ ಮಾಡಿದ ವಿನ್ಯಾಸ...!
ಐಫೋನ್ X ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಭಾಷ್ಯ ಬರೆದಿದ್ದನ್ನು ಯಾರು ಮರೆಯುವಂತೆ ಇಲ್ಲ. ಈ ಹಿನ್ನಲೆಯಲ್ಲಿ ಮುಂದಿನ ಐಫೋನ್ ಅನ್ನು ಯಾವ ಮಾದರಿಯಲ್ಲಿ ಆಪಲ್ ಬಿಡುಗಡೆ ಮಾಡಲಿದೆ ಮತ್ತು ಎಂದು ಬಿಡುಗಡೆ ಮಾಡಲಿದೆ ಎನ್ನುವ ಕುತೂಹಲ ನಿರ್ಮಾಣವಾಗಿತ್ತು. ಸದ್ಯ ಆಪಲ್ ಬಿಡುಗಡೆ ಮಾಡಲಿರುವ ಮುಂದಿನ ಐಫೋನ್ ಮತ್ತು ಲಾಂಚ್ ಇವೆಂಟ್ ಎಂದು ನಡೆಯಲಿದೆ ಎನ್ನುವ ಮಾಹಿತಿ ಲೀಕ್ ಆಗಿದ್ದು, ಮಾರುಕಟ್ಟೆಯಲ್ಲಿ ಚರ್ಚೆ ಶುರುವಾಗಿದೆ.
ಈ ಬಾರಿ ಆಪಲ್ ಎರಡು ಐಫೋನ್ ಗಳನ್ನು ಮತ್ತು ಹೊಸ ಮಾದರಿಯ ಆಪಲ್ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದೆ. ಆಪಲ್ ವಾಚ್ ಮತ್ತು ಐಫೋನ್ ಮುಂದಿನ ತಲೆ ಮಾರಿನ ಆಯ್ಕೆಗಳನ್ನು ಹೊಂದಿರಲಿದ್ದು, ಈ ಬಾರಿ ಐಫೋನ್ ಹೊಸ ಬಣ್ಣದಲ್ಲಿ ಲಾಂಚ್ ಆಗುವ ಸಾಧ್ಯತೆಯ ಬಗ್ಗೆಯೂ ಮಾಹಿತಿ ಲೀಕ್ ಆಗಿದೆ. ಪ್ರತಿ ಬಾರಿಯೂ ಮಾರುಕಟ್ಟೆಯಲ್ಲಿ ಹೊಸತನವನ್ನು ಪರಿಚಯಿಸುವ ಆಪಲ್ ಈ ಬಾರಿಯೂ ಹೊಸದೊಂದು ಆಯ್ಕೆಯನ್ನು ಖಂಡಿತವಾಗಿಯೂ ನೀಡಲಿದೆ.

ಸೆಪ್ಟೆಂಬರ್ 12ಕ್ಕೆ ಲಾಂಚ್:
ಪ್ರತಿ ಬಾರಿಯೂ ವರ್ಷದ ಕೊನೆಯಲ್ಲಿ ಹೊಸ ಐಫೋನ್ ಅನ್ನು ಪರಿಚಯ ಮಾಡುವ ಆಪಲ್, ಬಳಕೆದಾರರಿಗೆ ಸರ್ಪೈಸ್ ಅನ್ನು ನೀಡಲಿದೆ. ಇದೇ ಮಾದರಿಯಲ್ಲಿ 2018ರ ಸೆಪ್ಟೆಂಬರ್ 12ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಆಪಲ್ ನೂತನ ಐಫೋನ್ ಮತ್ತು ಆಪಲ್ ವಾಚ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಮುಂದಿನ ಐಫೋನ್:
ಈಗಾಗಲೇ ಮಾರುಕಟ್ಟೆಯಲ್ಲಿ ಮುಂದಿನ ಐಫೋನ್ ಯಾವುದು ಮತ್ತು ಅದರ ಹೆಸರೇನು ಎನ್ನುವ ಕುರಿತು ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಲೀಕ್ ಆಗಿರುವ ಮಾಹಿತಿಯ ಪ್ರಕಾರ ಮುಂದಿನ ಐಫೋನ್ ಹೆಸರು ಐಫೋನ್ XS ಎನ್ನಲಾಗಿದೆ. ಇದು ಹೊಸ ಮಾದರಿಯ ವಿನ್ಯಾಸದಲ್ಲಿ ಕಾಣಿಸಿಕೊಳ್ಳಲಿದೆ.

ಎರಡು ಮಾದರಿಯಲ್ಲಿ:
ಆಪಲ್ ಐಫೋನ್ XS ಮಾರುಕಟ್ಟೆಗೆ ಎರಡು ಮಾದರಿಯಲ್ಲಿ ಲಾಂಚ್ ಆಗಲಿದೆ. 5.8 ಇಂಚಿನ ಆವೃತ್ತಿಯಲ್ಲಿ ಒಂದು 6.5 ಇಂಚಿನ ಆವೃತ್ತಿಯಲ್ಲಿ ಮತ್ತೊಂದು ಕಾಣಿಸಿಕೊಳ್ಳಲಿದೆ. ಈ ಹೊಸ ಐಫೋನ್ XS ಬಳಕೆದಾರರಿಗೆ ಹೊಸ ಮಾದರಿಯ ಬಳಕೆಯ ಅನುಭವನ್ನು ನೀಡಲಿದೆ ಎನ್ನಲಾಗಿದೆ.

ವಿಶೇಷತೆ:
ಆಪಲ್ ಐಫೋನ್ XSನಲ್ಲಿ ಐಫೋನ್ X ಮಾದರಿಯ ನೋಚ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಫೇಸ್ ID ಸೇರಿದಂತೆ ಹೊಸ ಮಾದರಿಯ ಎಲ್ಲಾ ಆಯ್ಕೆಗಳನ್ನು ಕಾಣಬಹುದಾಗಿದೆ. ಜೊತೆಗೆ A12 ಪ್ರೋಸೆಸರ್ ಅನ್ನು ಆಪಲ್ ಮೊದಲ ಬಾರಿಗೆ ತನ್ನ ಐಫೋನಿನಲ್ಲಿ ಅಳವಡಿಸಿದೆ ಎನ್ನಲಾಗಿದೆ. ಅಲ್ಲದೇ ಈ ಬಾರಿ ಪ್ಯೂರ್ ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ.

ಆಪಲ್ ವಾಚ್ 4:
ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್ ವಾಚ್ 3 ಲಾಂಚ್ ಆಗಿದ್ದು, ಭಾರಿ ಪ್ರಮಾಣದ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಇದೇ ಮಾದರಿಯಲ್ಲಿ ಆಪಲ್ ವಾಚ್ 3ಗಿಂತಲೂ ಅಡ್ವಾನ್ಸ್ ಆಗಿರುವ ಆಪಲ್ ವಾಚ್ 4 ಅನ್ನು ಆಪಲ್ ಲಾಂಚ್ ಮಾಡಲಿದೆ. ಇದರಿಂದಾಗಿ ಬಳಕೆದಾರರು ಇನ್ನಷ್ಟು ಆಡ್ವಾನ್ಸ್ ಟೆಕ್ನಾಲಜಿಯನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications



