ಭಾರತದಲ್ಲಿ ಆರಂಭವಾಯ್ತು ಐಫೋನ್ XS, ಐಫೋನ್ XS Max ಪ್ರೀ ಬುಕ್ಕಿಂಗ್
ಹೊಸ ಆಪಲ್ ಐಫೋನ್ ಗಳಾದ ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಸೆಪ್ಟೆಂಬರ್ 28 ರಿಂದ ಭಾರತದಲ್ಲಿ ಮಾರಾಟವಾಗಲಿದೆ. ಆದರೆ ಒಂದು ವೇಳೆ ಬಿಡುಗಡೆಗೊಂಡ ದಿನವೇ ಹೊಸ ಐಫೋನ್ ನಿಮ್ಮ ಕೈಯಲ್ಲಿರಬೇಕು ಎಂದು ಇಚ್ಛಿಸಿದರೆ ಪ್ರೀಬುಕ್ ಮಾಡಬೇಕಾಗುತ್ತದೆ. ಐಫೋನ್ ಎಕ್ಸ್ ಎಸ್ ಮತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನ ಎಲ್ಲಾ ವೇರಿಯಂಟ್ ಫೋನ್ ಗಳ ಪ್ರೀಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.

ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಗಳು ಈಗಾಗಲೇ ಪ್ರೀಬುಕ್ಕಿಂಗ್ ಆರ್ಡರ್ ಗಳನ್ನು ಸ್ವೀಕರಿಸಲು ಆರಂಭಿಸಿದ್ದು ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ವೆಬ್ ಸೈಟ್ ಗಳಲ್ಲಿ ಕ್ರಮವಾಗಿ ಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶವಿದೆ. ಆದರೆ ಸಂಪೂರ್ಣ ಮೊತ್ತವನ್ನು ಪಾವತಿಸಿದರೆ ಮಾತ್ರ ನಿಮ್ಮ ಇಚ್ಛೆಯ ಮಾಡೆಲ್ ನಿಮ್ಮ ಕೈಸೇರಲಿದೆ. ಜೊತೆಗೆ ಕೆಲವು ಇಎಂಐ ಆಯ್ಕೆಗಳೂ ಕೂಡ ಇದೆ.

ಮೆಮೊರಿ ಮತ್ತು ಸಿಮ್
ಹೊಸ ಐಫೋನ್ ಎಕ್ಸ್ಎಸ್ ಮತ್ತು ಎಸ್ ಎಕ್ಸ್ ಮ್ಯಾಕ್ 64ಜಿಬಿ,256ಜಿಬಿ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಎರಡೂ ಫೋನ್ ಗಳು ಡುಯಲ್ ಸಿಮ್ ಗೆ ಬೆಂಬಲ ನೀಡುತ್ತದೆ. ಆದರೆ ಕೇವಲ ಒಂದೇ ಒಂದು ಫಿಸಿಕಲ್ ಸಿಮ್ ಸ್ಲಾಟ್ ಇರುತ್ತದೆ. ಎರಡನೇ ಸಿಮ್ eSIM ಆಗಿರಬೇಕಾಗುತ್ತದೆ. eSIM ಗಳ ಸಾಫ್ಟ್ ವೇರ್ ಬೆಂಬಲವು ಈ ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಭಾರತದಲ್ಲಿ eSIMಗಳಿಗೆ ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋಗಳು ಮಾತ್ರ ಬೆಂಬಲ ನೀಡುತ್ತದೆ.

ಬೆಲೆ :
ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 64 ಜಿಬಿ - Rs 1,09,900
ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 256ಜಿಬಿ - Rs 1,24,900
ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 512ಜಿಬಿ - Rs 1,44,900
ಐಫೋನ್ ಎಕ್ಸ್ ಎಸ್ 64ಜಿಬಿ - Rs 99,900
ಐಫೋನ್ ಎಕ್ಸ್ ಎಸ್ 256ಜಿಬಿ - Rs 1,14,900
ಐಫೋನ್ ಎಕ್ಸ್ ಎಸ್ 512ಜಿಬಿ - Rs 1, 34,900

ಆಫರ್ ಗಳು:
ಏರ್ ಟೆಲ್ ನಲ್ಲಿ ಬುಕ್ ಮಾಡಿದವರಿಗೆ 5% ಕ್ಯಾಷ್ ಬ್ಯಾಕ್ ಸೌಲಭ್ಯವಿದ್ದು 12 ಅಥವಾ 24 ತಿಂಗಳ ಸಿಟಿ ಅಥವಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಇಎಂಐ ಆಯ್ಕೆ ಪಡೆಯಬಹುದು. ಸೆಪ್ಟೆಂಬರ್ 27 ಪ್ರೀಬುಕ್ಕಿಂಗ್ ಗೆ ಕೊನೆಯ ದಿನಾಂಕವಾಗಿರುತ್ತದೆ.

ಬುಕ್ ಮಾಡುವುದು ಹೇಗೆ?
* Jio.com ಅಥವಾ www.airtel.in ವೆಬ್ ಸೈಟ್ ಗೆ ತೆರಳಿ
* ನಿಮ್ಮ ಇಚ್ಛೆಯ ಯಾವುದೇ ವೇರಿಯಂಟ್ ನ ಐಫೋನ್ ನ್ನು ಆಯ್ಕೆ ಮಾಡಿ.
* ಪಿನ್ ಕೋಡ್ ನ್ನು ಎಂಟರ್ ಮಾಡಿ.
* ಚೆಕ್ ಔಟ್ ನ್ನು ಮುಂದುವರಿಸಿ
* ನಿಮ್ಮ ವಯಕ್ತಿಕ ಮಾಹಿತಿಗಳನ್ನು ನೀಡಿ. ಹೆಸರು, ಇಮೇಲ್ ಐಡಿ ಮೊಬೈಲ್ ನಂಬರ್ ಇತ್ಯಾದಿ *ನಿಮ್ಮ ಇಚ್ಛೆಯ ಪೇಮೆಂಟ್ ಆಯ್ಕೆಯನ್ನು ಆರಿಸಿ ಮತ್ತು ಪಾವತಿ ಮಾಡಿ.
*ನೀವು ಇಮೇಲ್ ಮತ್ತು ಎಸ್ಎಂಎಸ್ ಮೂಲಕ ಪ್ರೀಆರ್ಡರ್ ನೋಟಿಫಿಕೇಷನ್ ನ್ನು ಪಡೆಯುತ್ತೀರಿ

ಫೋನಿನ ವೈಶಿಷ್ಟ್ಯತೆಗಳು:
ಫೋನ್ ಎಕ್ಸ್ ಎಸ್ ಮತ್ತು ಎಕ್ಸ್ಎಸ್ ಮ್ಯಾಕ್ಸ್ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಐಫೋನ್ ಎಕ್ಸ್ಎಸ್ 5.8-ಇಂಚಿನ OLED ಡಿಸ್ಪ್ಲೇ ಹೊಂದಿದ್ದರೆ ಐಫೋನ್ ಎಕ್ಸ್ಎಸ್ ಮ್ಯಾಕ್ ಸ್ವಲ್ಪ ದೊಡ್ಡದಾಗ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು ಒಂದೇ ರೀತಿಯ ವೈಶಿಷ್ಟ್ಯತೆಯನ್ನು ಹೊಂದಿದೆ. ಹಾರ್ಡ್ ವೇರ್ ವೈಶಿಷ್ಟ್ಯತೆಗಳು ಎರಡರಲ್ಲೂ ಒಂದೇ ಆಗಿದೆ.

ಕ್ಯಾಮೆರಾ
ಎರಡೂ ಫೋನ್ ಗಳು ಡುಯಲ್ ಲೆನ್ಸ್ ಗೆ ಬೆಂಬಲ ನೀಡುತ್ತದೆ 12MP +12MP (wide+telephoto) ಕ್ಯಾಮರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು ಸೆಲ್ಫೀ ಕ್ಯಾಮರಾವು 7MP ಸಾಮರ್ಥ್ಯದ್ದಾಗಿದೆ. ಎರಡೂ ಡಿವೈಸ್ ಗಳು ನೂತನ A12 ಬಯೋನಿಕ್ ಚಿಪ್ ಸೆಟ್ ನಿಂದ ಪವರ್ಡ್ ಆಗಿದೆ.

ಬ್ಯಾಟರಿ
ಐಫೋನ್ ಎಕ್ಸ್ ಎಸ್ ಮ್ಯಾಕ್ 3,174 mAh ಬ್ಯಾಟರಿಯನ್ನು ಹೊಂದಿದೆ ಮತ್ತು ಐಫೋನ್ ಎಕ್ಸ್ಎಸ್ ಮತ್ತು ಎಕ್ಸ್ ಆರ್ ಗಳು 2,658 mAh ಮತ್ತು 2,942 mAh ಬ್ಯಾಟರಿ ಸಾಮರ್ಥ್ಯವನ್ನು ಕ್ರಮವಾಗಿ ಹೊಂದಿದೆ. ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ನಲ್ಲಿ ದೊಡ್ಡ ಬ್ಯಾಟರಿ ಇದೆ. ಐಫೋನ್ ಎಕ್ಸ್ ಗೆ ಹೋಲಿಸಿದರೆ ಎಕ್ಸ್ಎಸ್ ನಲ್ಲಿ ಕಡಿಮೆ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.


Click it and Unblock the Notifications








