Home
ಮೊಬೈಲ್

ಭಾರತದಲ್ಲಿ 'ಐಫೋನ್ 8 'ಬಿಡುಗಡೆ ದಿನಾಂಕ ಫಿಕ್ಸ್!!..ಮೊದಲು ಬೆಂಗಳೂರಿನಲ್ಲಿ!!

ಸೆಪ್ಟೆಂಬರ್ 29 ರಂದು ಸಂಜೆ ಆರು ಗಂಟೆಗೆ ಭಾರತದಲ್ಲಿ ಐಫೋನ್ 8 ಬಿಡುಗಡೆಯಾಗಲಿದೆ.!!

By Bhaskar N J

ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ 'ಐಫೋನ್ 8' ಭಾರತೀಯ ಮಾರುಕಟ್ಟೆಲ್ಲಿ ಬಿಡುಗಡೆಯಾಗುವ ದಿನಾಂಕ ಫಿಕ್ಸ್ ಆಗಿದೆ.! ಇದೇ ಮೊದಲ ಬಾರಿಗೆ ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೆಲವೇ ದಿವಸಗಳಲ್ಲಿ ಭಾರತದಲ್ಲಿ ಐಫೋನ್ 8 ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 29 ರಂದು ಸಂಜೆ ಆರು ಗಂಟೆಗೆ ಭಾರತದಲ್ಲಿ ಐಫೋನ್ 8 ಬಿಡುಗಡೆಯಾಗಲಿದೆ.!!

ಐಫೋನ್ 8 ಮತ್ತು 8 ಪ್ಲಸ್, ಆಪಲ್ ವಾಚ್ ಮತ್ತು ಆಪಲ್ ಟಿವಿಗಳು ಸೆಪ್ಟೆಂಬರ್ 10,000 ಕ್ಕಿಂತ ಹೆಚ್ಚು ಚಿಲ್ಲರೆ ವ್ಯಾಪಾರಿಗಳಲ್ಲಿ ಲಭ್ಯವಾಗಲಿದೆ ಎಂದು ಆಪಲ್ ಕಂಪೆನಿ ಖಚಿತಪಡಿಸಿದೆ.! ಇನ್ನು ಸೆಪ್ಟೆಂಬರ್ 22 ರಿಂದಲೇ ಭಾರತದಲ್ಲಿ ಐಫೋನ್ 8 ಬುಕ್ ಮಾಡಬಹುದು ಎಂದು ಆಪಲ್ ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ.!!

ಸೆಪ್ಟೆಂಬರ್ 29 ರಂದು ಸಂಜೆ ಆರು ಗಂಟೆಗೆ ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ, ಪುಣೆ ಮತ್ತು ಹೈದರಾಬಾದ್ ಸೇರಿದಂತೆ ಒಟ್ಟು ಒಂಬತ್ತು ನಗರಗಳ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಐಫೋನ್ 8 ಬಿಡುಗಡೆಯಾಗುತ್ತಿದ್ದು, ಹಾಗಾದರೆ, ಆಪಲ್ ಐಫೋನ್ ಏನೆಲ್ಲಾ ವಿಶೇಷತೆ ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಅತ್ಯುತ್ತಮ ತಂತ್ರಜ್ಞಾನ

ಅತ್ಯುತ್ತಮ ತಂತ್ರಜ್ಞಾನ

ನೂತನ ಐಫೋನ್ 8 ನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಹಾಗೂ ಬಳಕೆದಾರರ ಮುಖವನ್ನು ಗುರುತಿಸಿ ಫೋನ್ ಆನ್ ಆಗುವಂಥ ವಿಶಿಷ್ಠ ಹಾಗೂ ಅಭೂತಪೂರ್ವ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ.!! ಇನ್ನು ಎಮೋಜಿಗಳ ಮೂಲಕ ಸಂದೇಶ ರೆಕಾರ್ಡ್ ಮಾಡಿ ಕಳುಹಿಸುವ ಆಯ್ಕೆಯ ಮೂಲಕ ಐಪೋನ್ ಎಲ್ಲರನ್ನು ಅಚ್ಚರಿಗೆ ದೂಡಿದೆ.!!

ಐಫೋನ್ 8 ಬಣ್ಣ ಮತ್ತು ಹೋಂ ಬಟನ್

ಐಫೋನ್ 8 ಬಣ್ಣ ಮತ್ತು ಹೋಂ ಬಟನ್

ನೂತನವಾಗಿ ಬಿಡುಗಡೆಯಾಗಿರುವ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಸ್ಮಾರ್ಟ್‌ಪೋನ್‌ಗಳು ಸಿಲ್ವರ್, ಸ್ಪೇಸ್‌ಗ್ರೇ ಮತ್ತು ಗೋಲ್ಡ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ.!! ಮೊದಲೇ ರೂಮರ್ಸ್ ಹಬ್ಬಿದಂತೆ ಐಫೋನ್ 8 ಸ್ಮಾರ್ಟ್ಗಫೋನ್‌ಗಳಲ್ಲಿ ಹೋಂ ಬಟನ್ ಆಯ್ಕೆಯನ್ನು ಕೊನೆಗೊಳಿಸಲಾಗಿದೆ.!!

ಬಯೋನಿಕ್ ಚಿಪ್ ಮತ್ತು ವೈರ್‌ಲೆಸ್‌ ಚಾರ್ಜಿಂಗ್!!

ಬಯೋನಿಕ್ ಚಿಪ್ ಮತ್ತು ವೈರ್‌ಲೆಸ್‌ ಚಾರ್ಜಿಂಗ್!!

ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಸ್ಮಾರ್ಟ್‌ಪೋನ್‌ಗಳು ನೂತನವಾಗಿ ಅಭಿವೃಧ್ದಿಪಡಿಸಿರುವ ಬಯೋನಿಕ್ ಚಿಪ್ ಅನ್ನು ಒಳಗೊಂಡಿದೆ ಎಂದು ಆಪಲ್ ಕಂಪೆನಿ ತಿಳಿಸಿದೆ.!! ಗ್ರಾಹಕರುಬಹುದಿನಗಳಿಂದ ಕಾಯುತ್ತಿದ್ದ ವೈರ್‌ಲೆಸ್ ಚಾರ್ಜಿಂಗ್ ಆಸೆಯನ್ನು ಐಫೋನ್ 8 ಪೂರೈಸಿದೆ.!!

ಎಡ್ಜ್ ಟು ಎಡ್ಜ್ ಸ್ಕ್ರೀನ್!!

ಎಡ್ಜ್ ಟು ಎಡ್ಜ್ ಸ್ಕ್ರೀನ್!!

ಐಫೋನ್ 8 4.7 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಐಫೋನ್ 8 ಪ್ಲಸ್‌ 5.5 ಇಂಚಿನ ರೆಟಿನಾ ಎಚ್‌ಡಿ ಡಿಸ್‌ಪ್ಲೇ ಹೊಂದಿವೆ.!! ಆಪಲ್ ಕಂಪೆನಿ ಹೇಳುವಂತೆ ಐಫೋನ್ 8ನಲ್ಲಿ ಬಳಕೆ ಮಾಡಿರುವ ಗ್ಲಾಸ್ ಹೆಚ್ಚು ಬಾಳಿಕೆ ಬರುವಂತೆ ರೂಪಿಸಲಾಗಿದೆ ಎಂದು ಹೇಳಿದೆ.! ಇನ್ನು ಎಡ್ಜ್ ಟು ಎಡ್ಜ್ ಸ್ಕ್ರೀನ್ ಮೂಲಕ ಭಾರಿ ಕ್ರೇಜ್ ಹುಟ್ಟಿಸಿದೆ.!!

   ಡ್ಯುಯಲ್ ಕ್ಯಾಮೆರಾ ಮತ್ತು 3ಡಿ ಸಪೋರ್ಟೆಡ್

ಡ್ಯುಯಲ್ ಕ್ಯಾಮೆರಾ ಮತ್ತು 3ಡಿ ಸಪೋರ್ಟೆಡ್

ಡಿಎಸ್ಎಲ್ಆರ್ ಕ್ಯಾಮೆರಾಗಳಲ್ಲಿ ಲಭ್ಯವಿರಬಹುದಾದ ಕ್ಯಾಮೆರಾ ಗುಣಮಟ್ಟವನ್ನು ಐಫೋನ್ 8 ಸ್ಮಾರ್ಟ್‌ಫೋನ್ ಒಳಗೊಂಡಿದೆ.!! ಇದಕ್ಕಾಗಿ ಐಫೋನ್ 8ನಲ್ಲಿ 12MP ಶಕ್ತಿಯ ಕ್ಯಾಮೆರಾಗಳು ಲಬಯವಿದ್ದು, ಅತ್ಯಾಧುನಿಕ ಲೆನ್ಸ್ ಬಳಸಲಾಗಿದೆ.!! ಇನ್ನು 3ಡಿ ಗೇಮ್‌ಗಳಿಗೆ ಸ್ಮಾರ್ಟ್ಗಫೋನ್ ಪೂರ್ಣ ಸಪೋರ್ಟ್ ಮಾಡಲಿದೆ.!!

Best Mobiles in India

English summary
apple is advancing the time of its India launch for the iPhone 8 and iPhone 8 Plus to 6 pm on September 29 to ensure the widest possible sales window.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+