ಲೀಕ್ ಆಗಿದೆ ಐಫೋನ್ 7ಎಸ್, ಐಫೋನ್ 7ಎಸ್ ಪ್ಲಸ್ ಮತ್ತು ಐಫೋನ್ 8 ವಿನ್ಯಾಸದ ಮಾಡಲ್..!!!!

By: Precilla Dias

ಭಾರತೀಯಾ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡುತ್ತಿದ್ದು, ಈ ವರ್ಷದಲ್ಲಿ ಒಟ್ಟು ಮೂರು ಐಫೋನ್ ಗಳನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಇದರಲ್ಲಿ ಎರಡು ಕಳೆದ ವರ್ಷ ಬಿಡುಗಡೆ ಮಾಡಿದ ಐಪೋನ್ 7 ಸರಣಿಯ ಐಫೋನ್ 7ಎಸ್ ಮತ್ತು ಐಫೋನ್ 7ಎಸ್ ಪ್ಲಸ್ ಮತ್ತೊಂದು ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಯಾಗುತ್ತಿರುವ ಐಫೋನ್ 8.

ಲೀಕ್ ಆಗಿದೆ ಐಫೋನ್ 7ಎಸ್, ಐಫೋನ್ 7ಎಸ್ ಪ್ಲಸ್ ಮತ್ತು ಐಫೋನ್ 8 ವಿನ್ಯಾಸದ ಮಾಡಲ್.!

ಸದ್ಯ ಈ ಐಫೋನ್ ಗಳ ಸದ್ದು ಜೋರಾಗಿದ್ದು, ದಿನಕ್ಕೊಂದು ರೂಮರ್ಸ್ ಕೇಳಿ ಬರುತ್ತಿದೆ. ಇಂದು ಹೊಸದೊಂದು ಸಾಕ್ಷಿ ಈ ಫೋನ್ ಗಳ ವಿನ್ಯಾಸದ ಕುರಿತು ಲಭ್ಯವಾಗಿದೆ. ಈ ಫೋನ್ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವ ಸ್ಲಾಷ್ ಲೀಕ್ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಕಾಣಿಸಿರುವ ಮಾಡಲ್ ಗಳು ಐಫೋನ್ ಹೊಸ ಸರಣಿ ಫೋನ್ ಗಳದ ಐಫೋನ್ 7ಎಸ್ ಮತ್ತು ಐಫೋನ್ 7ಎಸ್ ಪ್ಲಸ್ ಮತ್ತು ಐಪೋನ್ 8ನದ್ದು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಮಾಡಲ್ಸ್ ಗಳು:

ಐಫೋನ್ ಮಾಡಲ್ಸ್ ಗಳು:

ಸದ್ಯ ಲೀಕ್ ಆಗಿರುವ ಪಿಚ್ಚರ್ ನಲ್ಲಿ ದೊರೆತಿರುವ ಮಾಹಿತಿಯ ಪ್ರಕಾರ ಐಪೋನ್ 7ಎಸ್ ಈ ಮೂವರಲ್ಲಿ ಅತ್ಯಂತ ಚಿಕ್ಕದು ಎನ್ನಲಾಗಿದೆ. ಅದರಲ್ಲಿ ಸಿಂಗಲ್ ಕ್ಯಾಮೆರಾ ಸೆಸ್ಸರ್ ಇದ್ದು, ಇನ್ನು ಐಫೋನ್ 7ಎಸ್ ನಲ್ಲಿ ಡ್ಯುಯಲ್ ಕ್ಯಾಮೆರಾ ಲೆನ್ಸ್ ಅಳವಡಿಸಲಾಗಿದೆ.

ಇದೇ ಮಾದರಿಯಲ್ಲಿ ಐಫೋನ್ 8 5.8 ಇಂಚಿನ ಪರದೆಯನ್ನು ಹೊಂದಿರಲಿ ಎನ್ನುವುದಕ್ಕೆ ಸಾಕ್ಷಿ ಇದಾಗಿದೆ. ಈ ಮೂರರಲ್ಲಿ ಅದೇ ಅತೀ ದೊಡ್ಡ ಫೋನ್ ಆಗಿದೆ. ಆದರೆ ಮೂಲಗಳ ಪ್ರಕಾರಣ ಐಪೋನ್ 8 ನಲ್ಲಿ 5.15 ಇಂಚಿನ ಪರದೆ ಇರಲಿದ್ದು, ಇನ್ನು ಮಿಕ್ಕಿದ ಸ್ಥಳಗಳಲ್ಲಿ ಫಿಜಿಕಲ್ ಬಟನ್ ಗಳು ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಇಂದು ಶಿಯೋಮಿ ರೆಡ್‌ಮಿ4 ಫ್ಲಾಶ್‌ಸೇಲ್..ಖರೀದಿಸಲು ಹತ್ತಾರು ಲಾಂಚ್ ಆಫರ್!!

ವರ್ಟಿಕಲ್ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ವರ್ಟಿಕಲ್ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಈ ಮಾಡಲ್ ಗಳನ್ನು ನೋಡಿದರೆ ತಿಳಿಯುವುದೇನೆಂದರೆ ಐಫೋನ್ 8 ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ವರ್ಟಿಕಲ್ ಆಗಿ ನೀಡಲಾಗಿದೆ. ಇದೇ ಮಾದರಿಯಲ್ಲಿ ಐಫೋನ್ 7ಎಸ್ ಪ್ಲಸ್ ನಲ್ಲಿ ಹಾರಿಜಂಟಲ್ ಆಗಿ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ನೀಡಲಾಗಿದೆ. ಒಟ್ಟಿನಲ್ಲಿ ಐಫೋನ್ 8 ವರ್ಟಿಕಲ್ ಡ್ಯುಯಲ್ ಕ್ಯಾಮೆರಾ ಹೊಂದಿರುವುದಂತು ಸತ್ಯ.

ಐಫೋನ್ 8 ಪ್ರೀಮಿಯಮ್ ಬೆಲೆಯಲ್ಲಿ ಲಭ್ಯ:

ಐಫೋನ್ 8 ಪ್ರೀಮಿಯಮ್ ಬೆಲೆಯಲ್ಲಿ ಲಭ್ಯ:

ಮಾರುಕಟ್ಟೆ ತಜ್ಞರ ಪ್ರಕಾರ 2017ರಲ್ಲಿ ಬಿಡುಗಡೆಯಾಗುವ ಐಪೋನ್ ಗಳಲ್ಲಿ ಐಫೋನ್ 8 ಪ್ರಿಮಿಯಮ್ ಬೆಲೆಯಲ್ಲ ಮಾರಾಟವಾಗಲಿದೆ ಎನ್ನಲಾಗಿದೆ. ಈ ಫೋನ್ ಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಲಾಂಚ್ ಆಗಲಿದೆ. 10ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಯಾಗುತ್ತಿರುವ ಐಫೋನ್ ಬೆಲೆ $1000 ಇರಬಹುದೆಂದು ಊಹಿಸಲಾಗಿದೆ.

Source

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The leaked Apple molds show how the iPhone 8, iPhone 7s and iPhone 7s Plus will look like.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot