ಆಪಲ್ ಐ-ಫೋನ್:ವಿಶ್ವದ ಅತ್ಯಂತ ಪ್ರಸಿದ್ಧ ಮೊಬೈಲ್ ಫೋನ್

Posted By: Varun
ಆಪಲ್ ಐ-ಫೋನ್:ವಿಶ್ವದ ಅತ್ಯಂತ ಪ್ರಸಿದ್ಧ ಮೊಬೈಲ್ ಫೋನ್

ಗಾರ್ಟ್ನರ್ ಎಂಬ ಸಂಸ್ಥೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಈಗ ವಿಶ್ವದ ಅತ್ಯಂತ ಪ್ರಸಿದ್ದಿ ಪಡೆದ ಫೋನ್,ಆಪಲ್ ಐ-ಫೋನ್.2011 ರ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ 149 ಮಿಲಿಯನ್ ಸ್ಮಾರ್ಟ್ಫೋನ್ ಬಿಕರಿಯಾದವು. ಒಟ್ಟಾರೆಯಾಗಿ 472 ದಶಲಕ್ಷ ಮೊಬೈಲ್ ಫೋನ್ ವಿಶ್ವದಾದ್ಯಂತ ಮಾರಾಟವಾಗಿದ್ದು ಅದರಲ್ಲಿ ಐಫೋನ್ ಪಾಲು 19 %

ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೇರಿಕಾದ ಮಾರುಕಟ್ಟೆ , 2011 ರ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ಆಪಲ್ ನ ಸ್ಮಾರ್ಟ್ ಫೋನ್ ಬೆಳವಣಿಗೆಗೆ ಅತ್ಯಂತ ಕಾರಣವಾಯಿತು.

ಈಗಾಗಲೇ ಆಪಲ್ , ಆದಾಯದಲ್ಲಿ ಗೂಗಲ್ ಹಾಗು ಮೈಕ್ರೋ ಸಾಫ್ಟ್ ಅನ್ನೂ ಮೀರಿಸಿಮೈಲಿಗಲ್ಲು ಸ್ಥಾಪಿಸಿದ್ದು, ಈಗ ವಿಶ್ವದ ಅತ್ಯಂತ ಪ್ರಸಿದ್ದಿ ಪಡೆದ ಫೋನ್ ಆಗಿ ಹೊರಹೊಮ್ಮಿರುವುದು ಅದರ ಹಿರಿಮೆಗೆ ಸಾಕ್ಷಿ.

Please Wait while comments are loading...
Opinion Poll

Social Counting