Subscribe to Gizbot

2012ಕ್ಕೆ ಆಪಲ್ ನಿಂದ ಐಫೋನ್ 5

Posted By: Super
2012ಕ್ಕೆ ಆಪಲ್ ನಿಂದ ಐಫೋನ್ 5

 

ಆಪಲ್ ಯಾವಾಗಲೂ ತನ್ನ ಯೋಜನೆಗಳಲ್ಲಿ ಯಶಸ್ವಿ ಕಾಣುತ್ತಾ ಬಂದಿರುವ ಕಂಪನಿ. 2012ಕ್ಕೆ ಆಪಲ್ ಕಂಪನಿ ಯಾವ ಪರಿಷ್ಕರಣೆಗಳನ್ನು, ಹೊಸ ಸಾಧನಗಳ ಬಿಡುಗಡೆಗಳನ್ನು ಮಾಡುತ್ತಿದೆ ಎಂಬುದು 2011 ರಲ್ಲಿ ಭಾರೀ ಚರ್ಚೆಗೊಳಗಾಗಿತ್ತು. ಇದೇ ಸಮಯದಲ್ಲಿ ಮತ್ತೊಂದು ಸುದ್ದಿ ಬಂದಿದೆ. ಆಪಲ್ ಕಂಪನಿ ಐಫೋನ್ 5 ಎಂಬ ಮೊಬೈಲನ್ನು ಹೊರತರಲಿರುವುದೆಂದು ತಿಳಿದುಬಂದಿದೆ.

ಆಪಲ್ ಐಫೋನ್ 5 ಎಂಬ ಮೊಬೈಲ್ 2012ಕ್ಕೆ ತೆರೆಕಾಣಲಿದೆ ಎಂದು ಪ್ರಖ್ಯಾತ ವಿಶ್ಲೇಷಕ ಜೆನೆ ಮನ್ಸ್ ಟರ್ ತಿಳಿಸಿದ್ದಾರೆ. ಈ ಐಫೋನ್ 5 ಹೊಸ ವಿನ್ಯಾಸದಲ್ಲಿ ಹೊರಬರಲಿದೆ. ಇದು 2012 ರ ಬೇಸಿಗೆ ಕಾಲ, ಅಂದರೆ ಮೇ ಜೂನ್ ನಲ್ಲಿ ಬಿಡುಗಡೆಗೊಳ್ಳಲಿರುವ ಸೂಚನೆಯನ್ನು ನೀಡಿದ್ದಾರೆ.

ಈ ಐಫೋನ್ 5 ಅತ್ಯಾಕರ್ಷಕ ಫೋನಾಗಿದ್ದು, ಇದೀಗ ಇಂಟರ್ ನೆಟ್ ನಲ್ಲಿ ಐಫೋನ್ 5 ಸುದ್ದಿಯೇ ಹೆಚ್ಚು ಹರಿದಾಡುತ್ತಿದೆ. ಆದರೆ ಈ ಸುದ್ದಿಗಳಿಗೆ ಕಂಪನಿ ಯಾವುದೇ ಪ್ರತಿಕ್ರಯೆ ನೀಡಿಲ್ಲ.

ಆಪಲ್ ಕಂಪನಿಯ ಏಳಿಗೆಯಲ್ಲಿ ಈ ಐಫೋನ್ ಸಿರೀಸ್ ಮೊಬೈಲ್ ಗಳ ಪಾತ್ರ ಹೆಚ್ಚಿದೆ. ಹಿಂದಿನ ಐಫೋನ್ ಗಳಂತೆಯೇ ಈ ಮೊಬೈಲ್ ಕೂಡ ಹೆಚ್ಚು ಹೆಸರು ಮಾಡಲಿರುವ ನಿರೀಕ್ಷೆಯಿದೆ. 2013 ರ ಹೊತ್ತಿಗೆ 142 ಮಿಲಿಯನ್ ಮಾರಾಟವಾಗುವ ನಿರೀಕ್ಷೆಯನ್ನೂ ಕಂಪನಿ ಹೊತ್ತಿದೆ. ಇದು ಆಪಲ್ ಕಂಪನಿಯ ಆದಾಯವನ್ನು 18 ಶೇಕಡಾ ಹೆಚ್ಚಿಸುತ್ತದೆ ಎಂಬ ಭರವಸೆಯೂ ಇದೆ.

2012 ಮತ್ತು 2013 ರ ಅವಧಿಯಲ್ಲಿ ಬಿಡುಗಡೆಗೊಳ್ಳಲಿರುವ ಐಪ್ಯಾಡ್ ಸಿರೀಸ್ ಟ್ಯಾಬ್ಲೆಟ್ ಕೂಡ ಅತ್ಯಂತ ಯಶಸ್ವಿಯಾಗಲಿರುವ ಭರವಸೆಯಿದೆ. ಒಟ್ಟಿನಲ್ಲಿ 2012ಕ್ಕೆ ಆಪಲ್ ನಿಂದ ಗ್ರಾಹಕರಿಗೆ ಅನೇಕ ಉಡುಗೊರೆಗಳು ಕಾದಿವೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot