2020ಕ್ಕೆ ಆಪಲ್‌ನಿಂದ 5G ಐಫೋನ್ ಪಕ್ಕಾ ಅಂತೆ..!
ಮುಂದಿನ ವರ್ಷ ಆಪಲ್ ಕಂಪನಿ ನಾಲ್ಕು 5G ಐಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಖ್ಯಾತ ವಿಶ್ಲೇಷಕ ಮಿಂಗ್-ಚಿ ಕುವೊ ಹೇಳಿದ್ದಾರೆ. 5G ಸಂಬಂಧಿತ ಘಟಕಗಳು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದರೂ, ಆಪಲ್ 5G ಐಫೋನ್ ಬೆಲೆಯನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿದ್ದು, 5G ಹೊಂದಿದ ಹೊಸ ಐಫೋನ್‌ಗಳ ಉತ್ಪಾದನಾ ವೆಚ್ಚ 30 ಡಾಲರ್‌ನಿಂದ 100 ಡಾಲರ್‌ಗೆ ಹೆಚ್ಚುವ ನಿರೀಕ್ಷೆಯಿದೆ.

ಪೂರೈಕೆ ವೆಚ್ಚ ಕಡಿತ
ಆಪಲ್ ತನ್ನ ಪೂರೈಕೆ ಸರಪಳಿ ವೆಚ್ಚ ಕಡಿಮೆ ಮಾಡುವ ಮೂಲಕ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಉದ್ದೇಶಿಸಿದೆ ಎಂದು ಕುವೊ ಹೇಳುತ್ತಾರೆ.
ಮರುವಿನ್ಯಾಸಗೊಳಿಸಲಾದ ಲೋಹದ ಚಾಸಿಸ್ ಮತ್ತು 5G ಐಫೋನ್‌ಗಾಗಿ ಫ್ರೇಮ್ ಪೂರೈಕೆದಾರರಿಗೆ ಮರುಕಳಿಸಲಾಗದ ಇಂಜಿನಿಯರಿಂಗ್ ಪಾವತಿಯನ್ನು ಸಹ ಆಪಲ್ ಕೈಬಿಡುತ್ತಿದೆ ಎಂದು ಇತ್ತಿಚೆಗೆ ಐಮೋರ್ ನ್ಯೂಸ್ ಪೋರ್ಟಲ್ ವರದಿ ಮಾಡಿತ್ತು.

ಕಸ್ಟಮ್ ಬ್ಯಾಟರಿ ಸಂರಕ್ಷಣಾ ಮಾಡ್ಯೂಲ್
ಬಾಹ್ಯ ಸಂಶೋಧನೆ ಮತ್ತು ಅಭಿವೃದ್ಧಿಯ ಇತರ ಕ್ಷೇತ್ರಗಳೊಂದಿಗೆ 5G ಐಫೋನ್‌ನ್ನು ಆಂತರಿಕವಾಗಿಯೇ ತರಲು ಆಪಲ್ ಉದ್ದೇಶಿಸಿದೆ ಎಂದು ಕುವೊ ಹೇಳುತ್ತಾರೆ. ಇತ್ತೀಚಿನ ವರದಿಯ ಪ್ರಕಾರ, ಆಪಲ್ ಐಫೋನ್ 12 ನೊಂದಿಗೆ ಕಸ್ಟಮ್ ಬ್ಯಾಟರಿ ಸಂರಕ್ಷಣಾ ಮಾಡ್ಯೂಲ್ ಅನ್ನು ಸೇರಿಸಲು ಯೋಜಿಸುತ್ತಿದೆ.
ಇದು ಪ್ರಸ್ತುತ ಮತ್ತು ಹಳೆಯ ಐಫೋನ್‌ಗಳಲ್ಲಿ ಬಳಸುವುದಕ್ಕಿಂತ ಶೇ.50 ರಷ್ಟು ಚಿಕ್ಕದಾಗಿದೆ ಮತ್ತು ತೆಳ್ಳಗಿರುತ್ತದೆ ಎನ್ನಲಾಗಿದೆ.

ಬ್ಯಾಟರಿ ಸಾಮರ್ಥ್ಯ ಹೆಚ್ಚಳ
ಗಾತ್ರದಲ್ಲಿನ ಕಡಿತ ಬ್ಯಾಟರಿ ಸಾಮರ್ಥ್ಯದಲ್ಲಿ ಸ್ವಲ್ಪ ಹೆಚ್ಚಳ ಹಾಗೂ ಹೆಚ್ಚಿನ ಸ್ಥಳಾವಕಾಶಕ್ಕೆ ಕಾರಣವಾಗುತ್ತದೆ. 2020ರಲ್ಲಿ ಆಪಲ್ 5.4 ಇಂಚಿನ ಐಫೋನ್, 6.1 ಇಂಚಿನ ಎರಡು ಐಫೋನ್‌ಗಳು ಮತ್ತು 5G ಸಂಪರ್ಕದೊಂದಿಗೆ 6.7 ಇಂಚಿನ ಐಫೋನ್ ಬಿಡುಗಡೆ ಮಾಡಲಿದೆ ಎಂದು ಜೆ.ಪಿ.ಮೊರ್ಗಾನ್ ವಿಶ್ಲೇಷಕ ಸಮಿಕ್ ಚಟರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಎಂಎಂ ವೇವ್ ಬೆಂಬಲ
ಎಂಎಂ ವೇವ್ ಬೆಂಬಲದೊಂದಿಗೆ ಕಂಪನಿಯು ಎರಡು ಉನ್ನತ-ಮಟ್ಟದ ಮಾದರಿಗಳನ್ನು (6.1 ಇಂಚು ಮತ್ತು 6.7 ಇಂಚು) ಪರಿಚಯಿಸಬಹುದು, ಜೊತೆಗೆ ಟ್ರಿಪಲ್-ಲೆನ್ಸ್ ಕ್ಯಾಮೆರಾ ಮತ್ತು ಸುಧಾರಿತ ವರ್ಧಿತ ರಿಯಾಲಿಟಿ ಸಾಮರ್ಥ್ಯಗಳಿಗಾಗಿ "ವರ್ಲ್ಡ್ ಫೇಸಿಂಗ್" 3D ಸಂವೇದನೆಯನ್ನು ಪರಿಚಯಿಸಬಹುದು ಎಂದು ಚಟರ್ಜಿ ಭವಿಷ್ಯ ನುಡಿದಿದ್ದಾರೆ. ಎರಡು ಕಡಿಮೆ-ಮಟ್ಟದ ಮಾದರಿಗಳು (6.1 ಇಂಚು, 5.4 ಇಂಚು) ಎಂಎಂ ವೇವ್ ಅಥವಾ ವರ್ಲ್ಡ್ ಫೇಸಿಂಗ್ 3D ಸೆನ್ಸಾರ್ ಹೊಂದಿರುವುದಿಲ್ಲ ಮತ್ತು ಡ್ಯುಯಲ್-ಲೆನ್ಸ್ ಕ್ಯಾಮೆರಾ ಹೊಂದಿರುತ್ತವೆ.


Click it and Unblock the Notifications








