Subscribe to Gizbot

ರೂ, 19,000ಕ್ಕೆ ಐಫೋನ್ SE X ಲಾಂಚ್ ಮಾಡಲಿದೆ ಆಪಲ್: ಮೊಬೈಲ್ ಮಾರುಕಟ್ಟೆ ತಲ್ಲಣ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್‌ಗಳ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತದಲ್ಲಿಯೇ ತನ್ನ ಐಫೋನ್ ನಿರ್ಮಿಸಲು ಮುಂದಾದ ಆಪಲ್ ತನ್ನ ಸ್ಪೆಷಲ್ ಎಡಿಷನ್ ಐಫೋನ್ SE ನಿರ್ಮಾಣ ಮಾಡಿತ್ತು. ಇದೇ ಮಾದರಿಯಲ್ಲಿ ಈ ಬಾರಿ ಮಾರುಕಟ್ಟೆಯಲ್ಲಿ ಹೊಸ ಸಾಹಸಕ್ಕೆ ಆಪಲ್ ಮುಂದಾಗಿದೆ. ಮಾರುಕಟ್ಟೆಗೆ ಬಜೆಟ್ ಐಫೋನ್ ಪರಿಚಯ ಮಾಡಲಿದೆ.

ರೂ, 19,000ಕ್ಕೆ ಐಫೋನ್ SE X ಲಾಂಚ್ ಮಾಡಲಿದೆ ಆಪಲ್: ಮೊಬೈಲ್ ಮಾರುಕಟ್ಟೆ ತಲ್ಲಣ..

ಐಫೋನ್ SE X ಅಥವಾ ಐಫೋನ್ SE 2 ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿರುವ ಆಪಲ್, ಈ ಹೊಸ ಐಫೋನ್ ಭಾರತದಲ್ಲಿಯೇ ನಿರ್ಮಿಸಲಿದೆ ಎನ್ನುವ ಮಾಹಿತಿಯೂ ಲೀಕ್ಆಗಿದೆ. ಈ ಹೊಸ ಐಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನು ಎಬ್ಬಿಸುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಆಪಲ್ ಬಿಡುಗಡೆ ಮಾಡಲು ಮುಂದಾಗಿರುವ ಐಫೋನ್ SE 2 ಕುರಿತಂತೆ ಸಾಕಷ್ಟು ಸದ್ದು ಶುರುವಾಗಿದೆ. ದುಬಾರಿ ಬೆಲೆಯ ಐಫೋನ್ X ಮಾದರಿಯಲ್ಲಿ ಕಾಣಿಸಿಕೊಂಡಿರುವ ಐಫೋನ್ SE 2 ಬ್ರೆಜಿಲ್ ಲೈಸ್ ವಿನ್ಯಾಸವನ್ನು ಹೊಂದಿರಲಿದೆ. ಇನ್ನು ಭಾರತದಲ್ಲಿ ನಿರ್ಮಾಣವಾಗಲಿರುವ ಈ ಐಫೋನ್ ಬೆಲೆಯೂ ಭಾರತದಲ್ಲಿ ಕಡಿಮೆ ಇರುವ ಸಾಧ್ಯತೆ ಇದೆ. ಬಜೆಟ್ ಬೆಲೆಯ ಐಫೋನ್ SE 2 ಶೀಘ್ರವೇ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಐಫೋನ್ SE 2 ಬೆಲೆ ರೂ.19,000ರ ಆಸುಪಾಸಿನಲ್ಲಿರಲಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯನ್ನು ಸೆಳೆದುಕೊಳ್ಳಲು ಆಪಲ್‌ ಈ ಸ್ಪರ್ಧಾತ್ಮಕ ಬೆಲೆಯನ್ನು ನಿಗಧಿಪಡಿಸಲದೆ ಎನ್ನಲಾಗಿದೆ. ಒಟ್ಟು ಎರಡು ಆವೃತ್ತಿಯಲ್ಲಿ ಐಫೋನ್ SE 2 ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಐಫೋನ್ SE 2ನಲ್ಲಿ ಆಪಲ್ A10 ಪ್ರೋಸೆಸರ್ ಅನ್ನು ಅಳವಡಿಸುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ 2GB RAM ಮತ್ತು 32/128 GB ಇಂಟರ್ನಲ್ ಮೆಮೊರಿ ಸಹ ಇರಲಿದೆ.

Bike-Car ಜಾತಕ ಹೇಳುವ ಆಪ್..!

ಮಾರುಕಟ್ಟೆಯಲ್ಲಿ ಹೊಸ ಆಲೆಯನ್ನು ಹುಟ್ಟಿ ಹಾಕಲಿರುವ ಇದಲ್ಲದೇ ಐಫೋನ್ SE 2 ನಲ್ಲಿ ಆಪಲ್ 4.2 ಇಂಚಿನ ಪರದೆಯನ್ನು ಅಳವಡಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ 4 ಇಂಚಿನ ಡಿಸ್‌ಪ್ಲೇಯನ್ನು ನೀಡಬಹುದಾಗಿದೆ. ಬೆಲೆಯೂ ಕಡಿಮೆ ಇರುವ ಕಾರಣಕ್ಕಾಗಿ ಪರದೆ ಚಿಕ್ಕದಾಗಿರಲಿದೆ. ಇದಲ್ಲದೇ ಐಫೋನ್ X ನಲ್ಲಿ ನೀಡಲಾಗಿದ್ದ ಫೇಸ್‌ ಐಡಿ ಆಯ್ಕೆಯನ್ನು ಆಪಲ್ ಐಫೋನ್ SE 2 ನಲ್ಲಿಯೂ ನೀಡಲಿದೆ ಎನ್ನವ ಮಾಹಿತಿಯೂ ದೊರೆತಿದ್ದು, ಈ ಹಿಂದೆ ನೀಡುತ್ತಿದ್ದ ಟೆಚ್ ಐಡಿಯ ಬದಲಿಗೆ ಫೇಸ್‌ ಐಡಿಯನ್ನು ಬಳಕೆದಾರರಿಗೆ ನೀಡಲಿದೆ.

English summary
Apple’s ‘Made in India’ iPhone SE 2 launch. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot