ಐಫೋನ್‌ ಬೆಲೆಯಲ್ಲಿ ಭಾರೀ ಕಡಿತ: ಕಿಡ್ನಿ ಮಾರಬೇಕಾಗಿಲ್ಲ ಎಂದು ಟ್ರೋಲ್‌....!

|

ಮಾರುಕಟ್ಟೆಗೆ ಹೊಸ ಐಫೋನ್ ಕಾಣಿಸಿಕೊಂಡ ಸಂದರ್ಭದಲ್ಲಿ ಆಪಲ್ ತನ್ನ ಹಿಂದಿನ ಐಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯ, ಇದೇ ಮಾದರಿಯಲ್ಲಿ ಬುಧವಾರ ಜಾಗತಿಕ ಮಾರುಕಟ್ಟೆಗೆ ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ XRಗಳು ಪರಿಚಯವಾದ ಬೆನ್ನಿನಲ್ಲಿ ಹಿಂದಿನ ಐಫೋನ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆಯನ್ನು ಕಾಣಬಹುದಾಗಿದೆ.

ಐಫೋನ್‌ ಬೆಲೆಯಲ್ಲಿ ಭಾರೀ ಕಡಿತ: ಕಿಡ್ನಿ ಮಾರಬೇಕಾಗಿಲ್ಲ ಎಂದು ಟ್ರೋಲ್‌....!

ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ XRಗಳು ಲಾಂಚ್ ಆಗಿರುವ ಹಿನ್ನಲೆಯಲ್ಲಿ ಆಪಲ್ ಐಫೋನ್‌ಗಳ ಬೆಲೆ ಇಳಿಕೆಯಾದ ಸಂದರ್ಭದಲ್ಲಿ ಟ್ವಿಟರ್‌ ನಲ್ಲಿ ಐಫೋನ್‌ಗಾಗಿ ಕಿಡ್ನಿ ಮಾರಬೇಕಾಗಿಲ್ಲ ಎಂದು ಹಲವು ಮಂದಿ ಟ್ರೋಲ್ ಮಾಡಲು ಮುಂದಾಗಿದೆ. ಕೆಲವು ಐಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಇವುಗಳ ಕುರಿತು ಸಂಪೂರ್ಣ ಮಾಹಿತಿಯೂ ಮುಂದಿದೆ.

ಆಪಲ್ ಐಫೋನ್‌ X

ಆಪಲ್ ಐಫೋನ್‌ X

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಐಫೋನ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಐಫೋನ್‌ X 64 GB ಆವೃತ್ತಿ ರೂ.91,900ಕ್ಕೆ (ಹಿಂದಿನ ದರ ರೂ.95,390) ಹಾಗೂ ಐಫೋನ್‌ X 256 GB ಆವೃತ್ತಿ ರೂ.106,900ಕ್ಕೆ (ಹಿಂದಿನ ದರ ರೂ.108,930) ಮಾರಾಟವಾಗಲಿದೆ.

ಆಪಲ್ ಐಫೋನ್‌ 8

ಆಪಲ್ ಐಫೋನ್‌ 8

ಐಫೋನ್‌ 8 64 GB ಆವೃತ್ತಿ ರೂ. 59,900ಕ್ಕೆ (ಹಿಂದಿನ ದರ ರೂ.67,940) ಹಾಗೂ ಐಫೋನ್‌ 8 256 GB ಆವೃತ್ತಿ ರೂ.74,900ಕ್ಕೆ (ಹಿಂದಿನ ದರ ರೂ.81,500)ಕ್ಕೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಆಪಲ್ ಐಫೋನ್‌ 8 ಪ್ಲಸ್:

ಆಪಲ್ ಐಫೋನ್‌ 8 ಪ್ಲಸ್:

ಐಫೋನ್‌ 8 ಪ್ಲಸ್ 64 GB ಆವೃತ್ತಿ ರೂ.69,900ಕ್ಕೆ (ಹಿಂದಿನ ದರ ರೂ.77,560), ಇದರಂತೆ ಐಫೋನ್‌ 8 ಪ್ಲಸ್ 256 GB ಆವೃತ್ತಿ ರೂ.84,990ಕ್ಕೆ (ಹಿಂದಿನ ದರ ರೂ.91,110)ಕ್ಕೆ ಲಭ್ಯವಿರಲಿದೆ.

ಆಪಲ್ ಐಫೋನ್‌ 7

ಆಪಲ್ ಐಫೋನ್‌ 7

ಮಾರುಕಟ್ಟೆಯಲ್ಲಿ ಐಫೋನ್ 7 32 GB ಆವೃತ್ತಿಯೂ ರೂ.39,900ಕ್ಕೆ (ಹಿಂದಿನ ದರ 52,370 ರೂ.) ದೊರೆಯಲಿದ್ದು, ಐಫೋನ್‌ 7 128 GB ಆವೃತ್ತಿ ರೂ.49,990ಕ್ಕೆ (ಹಿಂದಿನ ದರ ರೂ.61,560) ಮಾರಾಟವಾಗಲಿದೆ.

ಆಪಲ್ ಐಫೋನ್‌ 7 ಪ್ಲಸ್:

ಆಪಲ್ ಐಫೋನ್‌ 7 ಪ್ಲಸ್:

ಐಫೋನ್‌ 7 ಪ್ಲಸ್ 32 GB ಆವೃತ್ತಿ ರೂ. 49,900ಕ್ಕೆ (ಹಿಂದಿನ ದರ 62,840 ರೂ.) ಹಾಗೂ ಐಫೋನ್‌ 7 ಪ್ಲಸ್ 128 GB ಆವೃತ್ತಿ ರೂ. 59,900ಕ್ಕೆ (ಹಿಂದಿನ ದರ ರೂ.72,060) ದೊರೆಯಲಿದೆ.

ಆಪಲ್ ಐಫೋನ್‌ 6S

ಆಪಲ್ ಐಫೋನ್‌ 6S

ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಅತೀ ಕಡಿಮೆ ಬೆಲೆಯ ಐಫೋನ್ ಎನ್ನಲಾಗಿದ್ದು, ಆಪಲ್ ಐಫೋನ್ 6S 32 GB ಆವೃತ್ತಿ ರೂ.29,900ಕ್ಕೆ (ಹಿಂದಿನ ದರ ರೂ.42,900) ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ ಐಫೋನ್‌ 6S 128 GB ಅವೃತ್ತಿ ರೂ.39,900ಕ್ಕೆ (ಹಿಂದಿನ ದರ ರೂ.52,100) ಮಾರಾಟವಾಗುತ್ತಿದೆ.

ಆಪಲ್ ಐಫೋನ್‌ 6S ಪ್ಲಸ್:

ಆಪಲ್ ಐಫೋನ್‌ 6S ಪ್ಲಸ್:

ಇದೇ ಮಾದರಿಯಲ್ಲಿ ಐಫೋನ್‌ 6S ಪ್ಲಸ್ 32 GB ಆವೃತ್ತಿ ರೂ.34,900ಕ್ಕೆ (ಹಿಂದಿನ ದರ ರೂ.52,240) ಮಾರಾಟವಾಗಲಿದ್ದು, ಇದರೊಂದಿಗೆ ಐಫೋನ್‌ 6S ಪ್ಲಸ್ 128 GB ಆವೃತ್ತಿ ರೂ.44,900ಕ್ಕೆ (ಹಿಂದಿನ ದರ ರೂ,61,450) ಲಭ್ಯವಿರಲಿದೆ.

Best Mobiles in India

English summary
Apple’s older iPhones get cheaper in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X