ಸೆಪ್ಟೆಂಬರ್ ಗೆ ಬರಲಿದೆ ಸ್ಮಾರ್ಟ್ ಫೋನುಗಳ ಧಮಾಕಾ

Posted By: Varun
ಸೆಪ್ಟೆಂಬರ್ ಗೆ ಬರಲಿದೆ ಸ್ಮಾರ್ಟ್ ಫೋನುಗಳ ಧಮಾಕಾ
ಸೆಪ್ಟೆಂಬರ್ 2012 ಈ ವರ್ಷದ ಅತ್ಯಂತ ಮಹತ್ವದ ತಿಂಗಳು ಎನಿಸಿದೆ. ಏಕೆಂದರೆ ವಿಶ್ವದ ದೈತ್ಯ ಮೊಬೈಲ್ ಕಂಪನಿಗಳಾದ ಆಪಲ್, ಸ್ಯಾಮ್ಸಂಗ್, ನೋಕಿಯಾ, ಮೋಟೊರೋಲಾ ಹಾಗು HTC ಕಂಪನಿಗಳು ತಮ್ಮ ಉತ್ಕೃಷ್ಟ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿವೆ. ನಿಮಗೆ ಆ ಸ್ಮಾರ್ಟ್ ಫೋನುಗಳು ಯಾವುವು ಅಂತಾ ತಿಳಿದುಕೊಳ್ಳೋಕೆ ಇಷ್ಟಾ ಇದ್ದರೆ ಈ ಕೆಳಗಿನ ಪಟ್ಟಿಯನ್ನು ನೋಡಿ:

1) ಆಪಲ್ ಐಫೋನ್ 5

ಕುಪರ್ಟೀನೋ ಮೂಲದ ಆಪಲ್ ಕಂಪನಿಯ ಅತಿ ನಿರೀಕ್ಷಿತ ಸ್ಮಾರ್ಟ್ ಫೋನ್ ಆದ ಐಫೋನ್ 5, ನಾಲ್ಕು ಇಂಚ್ ರೆಟಿನಾ ಡಿಸ್ಪ್ಲೇ ಜೊತೆ ಬರಲಿದೆ ಎಂಬ ಸುದ್ದಿ ಇದ್ದು, 4G ತಂತ್ರಜ್ಞಾನ, NFC,ಚಿಕ್ಕದಾದ ಡಾಕ್ ಕನೆಕ್ಟರ್, 8 ಮೆಗಾ ಪಿಕ್ಸೆಲ್ ಕ್ಯಾಮರಾ ಇರಲಿದೆ.

2) ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2

ಗ್ಯಾಲಕ್ಸಿ ನೋಟ್ ಫ್ಯಾಬ್ಲೆಟ್ ನ ಮುಂದುವರೆದ ಆವೃತ್ತಿ ಎಂದೇ ಹೇಳಲಾದ ಇದು 5.5 ಇಂಚ್ ಹೈ ಡೆಫಿನಿಶನ್ ಸೂಪರ್ AMOLED ಡಿಸ್ಪ್ಲೇ ಹೊಂದಲಿದ್ದು, 1280 x 800 ಪಿಕ್ಸೆಲ್ ರೆಸಲ್ಯೂಶನ್ ಇರಲಿದೆ. ಈ ಫ್ಯಾಬ್ಲೆಟ್ ಶಕ್ತಿಶಾಲಿ ಏಕ್ಷ್ಯ್ನೊಸ್ ಕ್ವಾಡ್ ಕೋರ್ ಪ್ರೋಸೆಸರ್ 1.5 GHz, 8 MP ಕ್ಯಾಮರಾ, ಆಂಡ್ರಾಯ್ಡ್ 4.0 ICS ತಂತ್ರಾಂಶ, ಈ ಸ್ಮಾರ್ಟ್ ಫೋನಿನ ವಿಶೇಷತೆ ಆಗಿದೆ.

3) ನೋಕಿಯಾ ಲುಮಿಯಾ ಸ್ಮಾರ್ಟ್ ಫೋನ್

ವಿಂಡೋಸ್ 8 ತಂತ್ರಾಂಶವನ್ನು ತನ್ನ ಲುಮಿಯಾ ಸ್ಮಾರ್ಟ್ ಫೋನುಗಳಿಗೆ ಅಪ್ಗ್ರೇಡ್ ಮಾಡಲು ನೋಕಿಯಾ ಸಜ್ಜಾಗಿದ್ದು ಸೆಪ್ಟೆಂಬರ್ 5 ಕ್ಕೆ ಇದನ್ನು ಮಾಡುವ ನಿರೀಕ್ಷೆ ಇದೆ. ಇದಷ್ಟೇ ಅಲ್ಲದೆ ವಿಂಡೋಸ್ ಫೋನ್ 8 ಆಧಾರಿತ 'ಫೈ' ಹೆಸರಿನ ಫೋನ್ ಅನ್ನು ತರಲಿದೆ.

4) ಮೋಟೊರೋಲಾ Droid Razr HD

4.5 ಇಂಚ್ HD ಡಿಸ್ಪ್ಲೇ, 1280 x 720 ಪಿಕ್ಸೆಲ್ ರೆಸಲ್ಯೂಶನ್, 8 ಮೆಗಾ ಪಿಕ್ಸೆಲ್ ಕ್ಯಾಮರಾ, 1.5 Ghz ಡ್ಯುಯಲ್ ಕೋರ್ ಕ್ವಾಲ್ಕಾಂ ಪ್ರೋಸೆಸರ್, 2350 mAh ಬ್ಯಾಟರಿ, ಹಾಗು ಆಂಡ್ರಾಯ್ಡ್ 4.0 ತಂತ್ರಾಂಶ ಇರಲಿದೆ.

5) HTC ವಿಂಡೋಸ್ 8 ಸ್ಮಾರ್ಟ್ ಫೋನ್

ತೈವಾನ್ ಮೂಲದ HTC ಕಂಪನಿ ಜೆನಿತ್ ಹೆಸರಿನ ವಿಂಡೋಸ್ 8 ಸ್ಮಾರ್ಟ್ ಫೋನ್ ಗಳ ಸರಣಿಯನ್ನೇ ಹೊರತರಲು ಯೋಚಿಸಿದ್ದು, ಜೆನಿತ್, ರಿಯೋ ಹಾಗು ಅಕಾರ್ಡ್ ಸ್ಮಾರ್ಟ್ ಫೋನುಗಳನ್ನು ತರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot