Subscribe to Gizbot

ಅಗ್ಗದ ಬೆಲೆಯಲ್ಲಿ ಹೊಸ ಐಫೋನ್

Written By:

ಅಂತು ಇಂತು ಆಪಲ್‌ ಕಂಪನಿಯ ಐಫೋನ್‌ಗಳ ಸಹ ಅಗ್ಗದ ಬೆಲೆಗೆ ಖರೀದಿಸುವ ಸಂದರ್ಭ ಬಂತು. ಜೋಕ್ ಮಾಡ್ತಿದ್ದೀರಾ ಅಂತ ಮಾತ್ರ ತಿಳಿದುಕೊಳ್ಭೇಡಿ. ಇದೇ ತಿಂಗಳ (ಮಾರ್ಚ್‌) 21 ರಂದು ಆಪಲ್‌ ಕಂಪನಿ ಹೊಸ ಐಫೋನ್ ಅನ್ನು ಲಾಂಚ್ ಮಾಡುತ್ತಿದೆ. ಆಪಲ್‌ ಕಂಪನಿಯ ಐಫೋನ್‌ಗಳಲ್ಲೇ ಅಗ್ಗದ ಬೆಲೆಯ ಐಫೋನ್‌ ಇದಾಗಿದೆ ಎಂದು ಉನ್ನತ ಮೂಲಗಳು ಈಗಾಗಲೇ ವರದಿ ಮಾಡಿವೆ. ಹಾಗಾದ್ರೆ ಆ ಐಫೋನ್ ಯಾವುದು, ಅದರ ಫೀಚರ್‌ಗಳೇನು, ಬೆಲೆ ಎಷ್ಟು ಎಂಬುದರ ಮಾಹಿತಿ ತಿಳಿಯಲು ಲೇಖನ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ನಿಂದ ಅಗ್ಗದ ಐಫೋನ್

ಆಪಲ್‌

ಪ್ರಖ್ಯಾತ ಆಪಲ್‌ ಕಂಪನಿ ಮಾರ್ಚ್‌ 21 ರಂದು ಅಗ್ಗದ ಐಫೋನ್ ಅನ್ನು ಅಮೇರಿಕ ಫೇಡರಲ್‌ ಅಧಿಕಾರಿಗಳ ಬೇಡಿಕೆಯೊಂದಿಗೆ ಲಾಂಚ್‌ ಮಾಡುತ್ತಿದೆ. ಅಲ್ಲದೇ ಆಪಲ್‌ ಪ್ರಾಡಕ್ಟ್‌ನ ಲಾಂಚ್‌ಗೆ ಮಾಧ್ಯಮಗಳಿಗೆ ಅಹ್ವಾನ ನೀಡಿದೆ.

ಸ್ಮಾಲ್‌ಸ್ಕ್ರೀನ್‌ ಐಫೋನ್‌

ಆಪಲ್‌

ಟೆಕ್‌ ಸಮುದಾಯವು ವ್ಯಾಪಕವಾಗಿ ಆಪಲ್‌ನ ಚಿಕ್ಕ ಆವೃತ್ತಿಯ ipad Pro ಬಿಡುಗಡೆಯನ್ನು 2013 ರಿಂದಲೂ ಸಹ ನೀರಿಕ್ಷಿಸಿತ್ತು ಅಂತೆಯೇ ಈಗ ಮಾರ್ಚ್‌ 21 ರ ಸೋಮವಾರ ಲಾಂಚ್ ಕಾರ್ಯಕ್ರಮ ಜರುಗುತ್ತಿದೆ.

ಆಪಲ್‌ನ ಅಗ್ಗದ ಐಫೋನ್‌ ಯಾವುದು ಗೊತ್ತೇ?

ಆಪಲ್‌

ಆಪಲ್‌ ಲಾಂಚ್‌ ಮಾಡುತ್ತಿರುವ ಐಫೋನ್‌ ಹೆಸರನ್ನು "iPhone SE"
ಎಂದು ಉನ್ನತ ಮಾಹಿತಿ ಮೂಲಗಳು ವರದಿ ಮಾಡಿವೆ.

ಐಫೋನ್‌ 6S ನಂತೆ iPhone SE

ಆಪಲ್‌

ಅಂದಹಾಗೆ ಮಾರ್ಚ್‌ 21 ಲಾಂಚ್‌ ಆಗುತ್ತಿರುವ iPhone SE ವಿಶೇಷ ಎಡಿಷನ್‌ದಾಗಿದ್ದು, 4 ಇಂಚಿನ ಸ್ಕ್ರೀನ್‌ ಹೊಂದಿದೆ. ಅಂತೆಯೇ ಇದು ಐಫೋನ್‌ 6S ನಂತೆ ನೋಟವನ್ನು ಹೊಂದಿದೆ ಎನ್ನಲಾಗಿದೆ. ಆಪಲ್‌ ಪೇ ನಂತೆಯೇ ಫೀಚರ್‌ಗಳು ಸಪೋರ್ಟ್ ಮಾಡಲಿದ್ದು, ಲೈಬ್‌ ಫೋಟೋಗಳ ಫೀಚರ್‌ ಇದೆ ಎನ್ನಲಾಗಿದೆ.

 iPhone SE ಬೆಲೆ $450 (ಸುಮಾರು 30188 ರೂಪಾಯಿ)

ಆಪಲ್‌

ಆಪಲ್‌ ಬಗ್ಗೆ ನಿಖರವಾಗಿ ಸಂಶೋಧನೆ ನಡೆಸುವ, KGI ಸುರಕ್ಷತೆ ವಿಶ್ಲೇಷಕರಾದ ಮಿಂಗ್‌ -ಛಿ ಕುವೋ ಈ ಹಿಂದೆ iPhone SE ಬೆಲೆ $450 (ಸುಮಾರು 30188 ರೂಪಾಯಿ) ಆಗಲಿದೆ ಎಂದು ಹೇಳಿದ್ದರು ಎನ್ನಲಾಗಿದೆ.

ಐಪ್ಯಾಡ್ ಹಲವು ಗಾತ್ರದಲ್ಲಿ ಬಿಡುಗಡೆ

ಆಪಲ್‌

ಆಪಲ್‌ ಮಾರ್ಚ್‌ 21 ರಂದು iPhone SE ಜೊತೆಗೆ ಐಪ್ಯಾಡ್‌ ಅನ್ನು ಹಲವು ಗಾತ್ರದಲ್ಲಿ ಮತ್ತು ಹಲವು ಮಾಡೆಲ್‌ನಲ್ಲಿ ಮಾರಾಟವನ್ನು ಅಧಿಕಗೊಳಿಸಲು ಯತ್ನಿಸುತ್ತಿದೆ. ಹೊಸ ಐಪ್ಯಾಡ್‌ 9.7 ಇಂಚು ಇರಲಿದ್ದು, ಐಪ್ಯಾಡ್‌ ಪ್ರೊ ವರ್ಸನ್‌ ಇರಲಿದೆ.

ಆಪಲ್‌ ಮಾಧ್ಯಮ ಅಹ್ವಾನ

ಆಪಲ್‌

ಆಪಲ್‌ ಮಾಧ್ಯಮ ಅಹ್ವಾನವು "Let us loop you in" ಎಂದು ಹೇಳಿದೆ. iPhone SE ಲಾಂಚ್‌ ಕಾರ್ಯಕ್ರಮವು ಮಾರ್ಚ್‌ 21 ರಂದು ಕ್ಯಾಲಿಫೋರ್ನಿಯಾದ ಆಪಲ್‌ ಕಂಪನಿ ಕ್ಯಾಂಪಸ್‌ ಕುಪರ್‌ಟಿನೊದಲ್ಲಿ ಜರುಗಲಿದೆ ಎನ್ನಲಾಗಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಪ್ರವಾಸಿ ತಾಣಕ್ಕಿಂತಲೂ ಸುಂದರ ಆಪಲ್‌ ಸ್ಪೇಸ್‌ಶಿಪ್‌ ಕ್ಯಾಂಪಸ್‌

ಬೆಂಗಳೂರು ಮಹಿಳೆ ಆಪಲ್‌ ಜಾಹೀರಾತಿನಲ್ಲಿ ಮಿಂಚಿದ್ದಾದರೂ ಹೇಗೆ?

ಟೆಕ್ ಲೋಕದಲ್ಲೇ ದಾಖಲೆ ಬರೆಯಲಿರುವ ಅತಿದೊಡ್ಡ ಡೀಲ್ ಏನು?

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple set to launch cheaper iPhone on March 21. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot