ಮಾರುಕಟ್ಟೆಯಲ್ಲಿ ಅಸುಸ್ ಫೋನ್‌ಗಳ ಮೋಡಿ

Posted By:

ತೈವಾನ್ ಮೂಲದ ಟ್ಯಾಬ್ಲೆಟ್/ಕಂಪ್ಯೂಟರ್ ತಯಾರಿಕಾ ಕಂಪೆನಿ ಅಸುಸ್ ಅಧಿಕೃತವಾಗಿ ಆಂಡ್ರಾಯ್ಡ್ ಚಾಲಿತ ಮೂರು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಜೆನ್‌ಪೋನ್ 4, ಜೆನ್‌ಫೋನ್ 5, ಜೆನ್‌ಫೋನ್ 6 ಹೆಸರಿನಲ್ಲಿ ಇದೀಗ ಭಾರತದಲ್ಲಿ ಲಾಂಚ್ ಆಗಿದೆ. ಜೆನ್‌ಫೋನ್ 5 ಕಲ್ಲಿದ್ದಲ್ಲು ಕಪ್ಪು, ಮುತ್ತಿನ ಬಿಳಿ, ಚೆರ್ರಿ ಕೆಂಪು, ನೇರಳೆ ಮತ್ತು ಗೋಲ್ಡ್ ಬಣ್ಣಗಳಲ್ಲಿ ಬರುತ್ತಿದ್ದು ಇದರ ಬೆಲೆ ರೂ. 12,999 ಆಗಿದೆ.

ಅಸುಸ್ ಜೆನ್‌ಫೋನ್ 6 ಕೂಡ ಕಲ್ಲಿದ್ದಲ್ಲು ಕಪ್ಪು, ಮುತ್ತಿನ ಬಿಳಿ, ಚೆರ್ರಿ ಕೆಂಪು, ನೇರಳೆ ಮತ್ತು ಗೋಲ್ಡ್ ಬಣ್ಣಗಳಲ್ಲಿ ಬರುತ್ತಿದ್ದು ಇದರ ಬೆಲೆ ರೂ. 17,999 ಎಂದು ನಿರ್ಧರಿಸಲಾಗಿದೆ. ಜೆನ್‌ಪೋನ್ 4 ನ ಬೆಲೆ ರೂ 5,999 ಆಗಿದೆ. ಈ ಹ್ಯಾಂಡ್‌ಸೆಟ್‌ಗಳು ಭಾರತದ ಮಾರುಕಟ್ಟೆಗೆ ಇತ್ತೀಚೆಗೆ ಆಗಮಿಸಿದ್ದು ಈ ಹ್ಯಾಂಡ್‌ಸೆಟ್ ಬಗೆಗಿನ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳೋಣ.

ಖರೀದಿಸಬಹುದಾದ ಅಸುಸ್ ಫೋನ್ಸ್ ಶ್ರೇಣಿ

ಅಸುಸ್ ಜೆನ್‌ಫೋನ್ 5: ಪ್ರಮುಖ ವೈಶಿಷ್ಟ್ಯತೆಗಳು
ಇದು 5-ಇಂಚಿನ (1280 x 720 ಪಿಕ್ಸೆಲ್‌ಗಳ) ಮಲ್ಟಿ ಟಚ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಗೋರಿಲ್ಲಾ ಗ್ಲಾಸ್ ಸುರಕ್ಷತೆ ಇದಕ್ಕಿದೆ. 2 GHz ಡ್ಯುಯೆಲ್ ಕೋರ್ ಇಂಟೆಲ್ ಆಟಮ್ Z2580 ಪ್ರೊಸೆಸರ್ ಇದರಲ್ಲಿದ್ದು 1ಜಿಬಿ RAM ನೊಂದಿಗೆ ಡಿವೈಸ್ ಬಂದಿದೆ. ಇದರಲ್ಲಿ ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ನೊಂದಿಗೆ Zen UI ಚಾಲನೆಯಾಗುತ್ತಿದ್ದು, ಇದನ್ನು ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್‌ಗೆ ನವೀಕರಿಸಬಹುದಾಗಿದೆ. ಇತರ ವಿಶೇಷತೆಗಳೆಂದರೆ ಡ್ಯುಯೆಲ್ ಸಿಮ್‌ನೊಂದಿಗೆ ಡ್ಯುಯೆಲ್ ಸ್ಟ್ಯಾಂಡ್‌ಬೈ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ, 8ಜಿಬಿ / 16ಜಿಬಿ ಆಂತರಿಕ ಮೆಮೊರಿ, ಇದನ್ನು ಮೈಕ್ರೋ ಎಸ್‌ಡಿ ಮೂಲಕ 64ಜಿಬಿ ಗೆ ವಿಸ್ತರಿಸಬಹುದಾಗಿದೆ. 3ಜಿ HSPA+, WiFi 802.11 b/g/n, ಬ್ಲ್ಯೂಟೂತ್ 4.0, GPS ಮತ್ತು ಬ್ಯಾಟರಿ ಸಾಮರ್ಥ್ಯ 2110 mAh ಆಗಿದೆ.

ಖರೀದಿಸಬಹುದಾದ ಅಸುಸ್ ಫೋನ್ಸ್ ಶ್ರೇಣಿ

ಅಸುಸ್ ಜೆನ್‌ಫೋನ್ 4:
ಇದು 4 ಇಂಚುಗಳ, WVGA 800x480, TFT ಯೊಂದಿಗೆ ಕ್ಯಪಸಿಟೀವ್ ಮಲ್ಟಿ ಟಚ್ ಪ್ಯಾನಲ್‌ನೊಂದಿಗೆ ಬರುತ್ತಿದೆ. ಇದರಲ್ಲಿ 1.2 GHz ಡ್ಯುಯೆಲ್ ಕೋರ್ ಇಂಟೆಲ್ ಆಟಮ್ Z2520 ಪ್ರೊಸೆಸರ್ ಇದ್ದು RAM 1ಜಿಬಿಯಾಗಿದೆ. ಇದು ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ಅನ್ನು ಚಾಲನೆ ಮಾಡುತ್ತಿದ್ದು ಇದನ್ನು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಅಪ್‌ಗ್ರೇಡ್ ಮಾಡಬಹುದಾಗಿದೆ. 5ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾನೊಂದಿಗೆ LED ಫ್ಲ್ಯಾಶ್ ಇದರಲ್ಲಿದ್ದು, ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಫೋನ್ ಹೊಂದಿದೆ. ಮೆಮೊರಿ ಸಾಮರ್ಥ್ಯ 8ಜಿಬಿ / 16ಜಿಬಿ ಇದ್ದು ಇದನ್ನು 64ಜಿಬಿಗೆ ವಿಸ್ತರಿಸಬಹುದಾಗಿದೆ. ಮೈಕ್ರೋ ಎಸ್‌ಡಿ, 3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS ಮತ್ತು 1600 mAh ಲಿಥಿಯಮ್ ಬ್ಯಾಟರಿ ಫೋನ್‌ನಲ್ಲಿದೆ.

ಅಸುಸ್ ಜೆನ್‌ಫೋನ್ 6:
ಅಸುಸ್ ಜೆನ್‌ಫೋನ್ 6 (1280 x 720 ಪಿಕ್ಸೆಲ್‌ಗಳ) 6 ಇಂಚಿನ ಮಲ್ಟಿ ಟಚ್ ಸ್ಕ್ರೀನ್‌ನೊಂದಿಗೆ ಬಂದಿದ್ದು ಇದರಲ್ಲಿ ಡ್ಯುಯೆಲ್ ಕೋರ್ ಇಂಟೆಲ್ ಆಟಮ್ Z2580 ಪ್ರೊಸೆಸರ್ ಇದೆ. 2ಜಿಬಿ RAM ಫೋನ್‌ನಲ್ಲಿದ್ದು ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ನೊಂದಿಗೆ ಬಂದಿದ್ದು ಇದನ್ನು ಕಿಟ್‌ಕ್ಯಾಟ್ ಓಎಸ್‌ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಡ್ಯುಯೆಲ್ ಸಿಮ್‌ನೊಂದಿಗೆ ಡ್ಯುಯೆಲ್ ಸ್ಟ್ಯಾಂಡ್‌ಬೈ, 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಮತ್ತು 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ. ಇದರ ಸಂಗ್ರಹಣಾ ಸಾಮರ್ಥ್ಯ 16ಜಿಬಿಯಾಗಿದ್ದು ಇದನ್ನು 64ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್‌ನಲ್ಲಿ ಮೈಕ್ರೋ ಎಸ್‌ಡಿ, 3ಜಿ HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS ಮತ್ತು 3300 mAh ಬ್ಯಾಟರಿ ಫೋನ್‌ನಲ್ಲಿದೆ.

Read more about:
English summary
This article tells that Asus enters Indian smartphones market with three device
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot