ಏಸಸ್ ಪ್ಯಾಡ್ ಫೋನ್ ಗೆ ಎನ್ವಿಡಿಯಾ ಟೆಗ್ರಾ 3 ಪ್ರೊಸೆಸರ್

Posted By: Staff
ಏಸಸ್ ಪ್ಯಾಡ್ ಫೋನ್ ಗೆ ಎನ್ವಿಡಿಯಾ ಟೆಗ್ರಾ 3 ಪ್ರೊಸೆಸರ್

ಇನ್ನೂ ತೆರೆಕಾಣಬೇಕಾದ ಮತ್ತು ಅಭಿವೃದ್ಧಿ ಹಂತದಲ್ಲಿರುವ ಸಾಧನಗಳ ಬಗ್ಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸುದ್ದಿ ಹಬ್ಬುವುದು ಸಾಮಾನ್ಯ. ಎಲೆಕ್ಟ್ರಾನಿಕ್ ಸಾಧನಗಳ ಬಗ್ಗೆ ಆಸಕ್ತಿ ಹೊಂದಿರುವವರಂತೂ ಇಂತಹ ಮಾಹಿತಿಗಳಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ.

ಅದೇ ರೀತಿ ಕೆಲವು ದಿನಗಳ ಹಿಂದಷ್ಟೇ, ಅಂದರೆ ನವೆಂಬರ್ ನಲ್ಲಿ ಏಸಸ್ ಪ್ಯಾಡ್ ಫೋನ್ ಬಗ್ಗೆ ಸುದ್ದಿ ಹಬ್ಬಿತ್ತು. ನೆಟ್ ಗಳಲ್ಲಿ ಏಸಸ್ ತರುತ್ತಿರುವ ಪ್ಯಾಡ್ ಫೋನ್ ಕ್ವಾಲ್ಕಂ MSM8960 ಪ್ರೊಸೆಸರ್ ಹೊಂದಿರುವುದಾಗಿ ಮಾಹಿತಿ ನೀಡಲಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದ ಹೇಳಿಕೆಯೊಂದು ಇದೀಗ ಹೊರಬಿದ್ದಿದೆ. ಏಸಸ್ ಪ್ಯಾಡ್ ಫೋನ್ ಎನ್ವಿಡಿಯಾ ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್ ಬಳಸಿರುವುದಾಗಿ ತಿಳಿದುಬಂದಿದೆ.

ನೆಟ್ ಬುಕ್ ನ್ಯೂಸ್ ಡಾಟ್ ಕಾಮ್ ನ ನಿಕೋಲ್ ಸ್ಕಾಟ್ ಅವರಿಂದ ಈ ಹೇಳಿಕೆ ಅಧೀಕೃತವಾಗಿ ದೊರೆತಿದ್ದು, ಈ ಹಿಂದಿನ ಹೇಳಿಕೆ ತಪ್ಪು ಎನ್ನಲಾಗಿದೆ. ಈ ಏಸಸ್ ಪ್ಯಾಡ್ ಫೋನನ್ನು ಬಾರ್ಸೆಲೊನಾದಲ್ಲಿ ಫೆಬ್ರುವರಿ 27 ರಿಂದ ಮಾರ್ಚ್ 1 ರವರೆಗೆ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿದುಬಂದಿದೆ. ಇದರ ಚಿತ್ರಣ ಮತ್ತು ಕೆಲವು ಮಾಹಿತಿ ಜನವರಿಯಲ್ಲೇ ಲಭಿಸಲಿದ್ದು, ಗ್ರಾಹಕರಿಗೆ ಇದು ನೆರವಾಗಲಿದೆ.

ಹಿಂದೆ ಬಿಡುಗಡೆಗೊಂಡಿದ್ದ ಏಸಸ್ ಟ್ರಾನ್ಸ್ ಫಾರ್ಮರ್ ಪ್ರೈಮ್ ಕೂಡ ಎನ್ವಿಡಿಯಾ ಪ್ರೊಸೆಸರ್ ಹೊಂದಿದ್ದು, ಗ್ರಾಹಕರಿಂದ ಈ ಫೋನ್ ಭಾರೀ ಮೆಚ್ಚುಗೆ ಗಳಿಸಿತ್ತು. ಈ ಎನ್ವಿಡಿಯಾ ಟೆಗ್ರಾ 3 ಪ್ರೊಸೆಸರ್ ಸಹಾಯದಿಂದ ಹಲವು ಉಪಯೋಗವನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಸಾಮಾನ್ಯ ಡ್ಯೂಯಲ್ ಕೋರ್ ಪ್ರೊಸೆಸರ್ ಗಿಂತ ಎರಡು ಪಟ್ಟು ಹೆಚ್ಚು ವೇಗವಾಗಿ ಎನ್ವಿಡಿಯಾ ಕಾರ್ಯ ನಿರ್ವಹಿಸಲಿದೆ.

ಬಹುನಿರೀಕ್ಷಿತ ಏಸಸ್ ಪ್ಯಾಡ್ ಫೋನ್ 2012 ರಲ್ಲಿ ತೆರೆಕಾಣಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot