Home
ಮೊಬೈಲ್

ASUS: ಸದ್ದಿಲ್ಲದೆ ರಗಡ್ ಫೋನ್ ಲಾಂಚ್; 32MP ಸೆಲ್ಫಿ ಕ್ಯಾಮೆರಾ.. 5500mAh ಬ್ಯಾಟರಿ.. ಬೆಲೆ ಇಷ್ಟೊಂದಾ?

ಆಸುಸ್‌ ಸಂಸ್ಥೆಯು ಸದ್ದಿಲ್ಲದೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದನ್ನು ಸುಮಾರು 78,000 ರೂ.ಗಳ ಬಜೆಟ್‌ನಲ್ಲಿ ಪರಿಚಯಿಸಲಾಗಿದೆ. ಹೌದು, ಆಸುಸ್ ರಾಗ್ ಫೋನ್ 9 FE (ASUS ROG Phone 9 FE) ಸ್ಮಾರ್ಟ್‌ಫೋನ್ ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಕಂಪನಿಯು ಈ ಮೂಲಕ ಕಳೆದ ವರ್ಷ 2024 ರಲ್ಲಿ ಬಿಡುಗಡೆಯಾದ ROG ಫೋನ್ 9 ಸರಣಿಗೆ ಈ ಹೊಸ ಫೋನನ್ನು ಸೇರಿಸಿದೆ. ಇದು ಹಿಂದಿನ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದ್ದು, ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಆಸುಸ್ ರಾಗ್ ಫೋನ್ 9 FE ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಮದಿಗೆ ಬಿಡುಗಡೆಯಾಗಿದೆ. ಈ ಫೋನಿನಲ್ಲಿ 50MP ಸೋನಿ ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 16GB RAM, 5500mAh ಬ್ಯಾಟರಿ ಮತ್ತು 65W ಫಾಸ್ಟ್‌ ಚಾರ್ಜಿಂಗ್ ಸೇರಿದಂತೆ ಹಲವು ಫೀಚರ್ಸ್ ಒಳಗೊಂಡಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ಮತ್ತಿತರ ವಿವರಗಳನ್ನು ತಿಳಿಯೋಣ.

ASUS: ಹೊಸ ಫೋನ್ ಲಾಂಚ್; 32MP ಸೆಲ್ಫಿ ಕ್ಯಾಮೆರಾ, 5500mAh ಬ್ಯಾಟರಿ; ಬೆಲೆ ನೋಡಿ

ಆಸುಸ್ ರಾಗ್ ಫೋನ್ 9 FE ಬೆಲೆ ಮತ್ತು ಲಭ್ಯತೆ

ಆಸುಸ್ ರಾಗ್ ಫೋನ್ 9 FE ಸ್ಮಾರ್ಟ್‌ಫೋನ್ 16GB RAM + 256GB ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ 77,500 ರೂ. ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ನೀವು, ಫ್ಯಾಂಟಮ್ ಕಪ್ಪು ಬಣ್ಣದಲ್ಲಿ ಮಾತ್ರ ಈ ಮೊಬೈಲ್ ಅನ್ನು ಖರೀದಿಸಬಹುದು.

ಆಸುಸ್ ರಾಗ್ ಫೋನ್ 9 FE ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಆಸುಸ್ ರಾಗ್ ಫೋನ್ 9 FE ಸ್ಮಾರ್ಟ್‌ಫೋನ್ 6.78 ಇಂಚಿನ ಸ್ಯಾಮ್‌ಸಂಗ್ ಅಮೋಲೆಡ್ LTPO ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್‌ ರೆಸಲ್ಯೂಶನ್ ಹೊಂದಿದೆ. ಈ ಡಿಸ್ಪ್ಲೇಯು 2500 ನಿಟ್ಸ್ ಬ್ರೈಟ್‌ನೆಸ್, HDR10+ ಸಪೋರ್ಟ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಇದು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಮತ್ತು ಸ್ಟೋರೇಜ್

ಹೊಸ ಆಸುಸ್ ರಾಗ್ ಫೋನ್ 9 FE ಮೊಬೈಲ್ ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಫೊನ್ ಆಂಡ್ರಾಯ್ಡ್ 15 ಆಧಾರಿತ ROG UI ಓಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 16GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಯ್ಕೆ ಹೊಂದಿದೆ.

ASUS: ಹೊಸ ಫೋನ್ ಲಾಂಚ್; 32MP ಸೆಲ್ಫಿ ಕ್ಯಾಮೆರಾ, 5500mAh ಬ್ಯಾಟರಿ; ಬೆಲೆ ನೋಡಿ

ಟ್ರಿಪಲ್ ಕ್ಯಾಮೆರಾ ಸೆಟಪ್

ಆಸುಸ್ ರಾಗ್ ಫೋನ್ 9 FE ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾ ಲಬ್ಯವಿದೆ. ಜೊತೆಗೆ 13 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾವೈಡ್) ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ತೃತೀಯ (ಮ್ಯಾಕ್ರೋ ಲೆನ್ಸ್) ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ನೂತನ ಆಸುಸ್ ರಾಗ್ ಫೋನ್ 9 FE ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 65W ವೈರ್ಡ್ ಚಾರ್ಜಿಂಗ್ ಮತ್ತು Qi 1.3 ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಆಸುಸ್ ರಾಗ್ ಫೋನ್ 9 FE ಮೊಬೈಲ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್‌ ಪಡೆದಿದೆ. ಹಾಗೆಯೇ ಕೂಲಿಂಗ್ ಸಿಸ್ಟಮ್, ಏರ್‌ಟ್ರಿಗ್ಗರ್ ಶೋಲ್ಡರ್ ಕಂಟ್ರೋಲ್‌ ಮತ್ತು AniMe ವಿಷನ್ ಮ್ಯಾಟ್ರಿಕ್ಸ್ ಸೇರಿದಂತೆ ಹಲವು ಗೇಮಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G/4G, ವೈ-ಫೈ 7, ಬ್ಲೂಟೂತ್ 5.4 ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
ASUS ROG Phone 9 FE with Snapdragon 8 Gen 3, 185Hz AMOLED Display Launched: Price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+