ASUS: ಶೀಘ್ರದಲ್ಲೇ 2 ಹೊಸ ಫೋನ್ ಲಾಂಚ್; 185Hz ರಿಫ್ರೆಶ್ ದರ.. 5800mAh ಬ್ಯಾಟರಿ ಖಚಿತ!
ಆಸುಸ್ (Asus) ಶೀಘ್ರದಲ್ಲೇ ತನ್ನ ಆಸುಸ್ ರಾಗ್ ಫೋನ್ 9 (ASUS ROG Phone 9) ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಎರಡು ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೌದು, ಕಂಪನಿಯು ಆಸುಸ್ ರಾಗ್ ಫೋನ್ 9 (ASUS ROG Phone 9) ಮತ್ತು ಆಸುಸ್ ರಾಗ್ ಫೋನ್ 9 ಪ್ರೊ (ASUS ROG Phone 9 Pro) ಸ್ಮಾರ್ಟ್‌ಫೋನ್‌ಗಳನ್ನು ಲೋಕಾರ್ಪಣೆಗೊಳಿಸಲಿದೆ. ಬನ್ನಿ, ಹೊಸ ಸರಣಿಯ ವಿಶೇಷತೆ ಮತ್ತು ಬಿಡುಗಡೆ ದಿನಾಂಕವನ್ನು ತಿಳಿಯೋಣ.
ಕಂಪನಿಯು ಇದೇ ನವೆಂಬರ್ 19 ರಂದು ಆಸುಸ್ ರಾಗ್ ಫೋನ್ 9 (ASUS ROG Phone 9) ಸರಣಿಯನ್ನು ಲಾಂಚ್ ಮಾಡಲಿದೆ. ಇದು ಹೊಸ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ (Qualcomm Snapdragon 8 Elite) ಪ್ರೊಸೆಸರ್ ಹೊಂದಿರುತ್ತದೆ. ವಿಶೇಷವೆಂದರೆ, ಈ ಎರಡೂ ಫೋನ್‌ಗಳು 185Hz ರಿಫ್ರೆಶ್ ದರದೊಂದಿಗೆ ಬರಲಿವೆ. ಇತ್ತೀಚೆಗೆ ಫೋನಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಸೋರಿಕೆಯಾಗಿದ್ದವು. ಇದೀಗ, ಟಿಪ್‌ಸ್ಟರ್ ಆಸುಸ್ ರಾಗ್ ಫೋನ್ 9 ಮೊಬೈಲ್‌ನ ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಿದೆ.

ವರದಿಯ ಪ್ರಕಾರ, ಆಸುಸ್ ರಾಗ್ ಫೋನ್ 9 ಸರಣಿಯು 185Hz ರಿಫ್ರೆಶ್ ದರವನ್ನು ಹೊಂದಿರಲಿದೆ. ಈ ತಂತ್ರಜ್ಞಾನವನ್ನು ವಿಶ್ವದಲ್ಲೇ ಮೊದಲ ಬಾರಿಗೆ ನೀಡಲಾಗುತ್ತಿದೆ. 185Hz ರಿಫ್ರೆಶ್ ದರವು ಗೇಮ್ ಜಿನೀ ಮೋಡ್‌ಗೆ ಸೀಮಿತವಾಗಿರಲಿದೆ. ಆಸುಸ್ ರಾಗ್ ಫೋನ್ 8 ಸರಣಿಯು 120Hz ರಿಫ್ರೆಶ್ ದರದೊಂದಿಗೆ LTPO ಡಿಸ್ಪ್ಲೇಯನ್ನು ಹೊಂದಿದೆ. ಇದು ಗೇಮಿಂಗ್ ಸಮಯದಲ್ಲಿ 165Hz ವರೆಗೆ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಎರಡೂ ಫೋನ್‌ಗಳು ಎಐ (AI) ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತವೆ.
ಆಸುಸ್ ರಾಗ್ ಫೋನ್ 9 ಸರಣಿಯ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಆಸುಸ್ ರಾಗ್ ಫೋನ್ 9 ಮತ್ತು ಆಸುಸ್ ರಾಗ್ ಫೋನ್ 9 ಪ್ರೊ ಮೊಬೈಲ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದರಲ್ಲಿ 1 ರಿಂದ 120Hz ಅಡಾಪ್ಟಿವ್ ರಿಫ್ರೆಶ್ ದರ, ಸಿಸ್ಟಮ್ ಸೆಟ್ಟಿಂಗ್‌ಗಳಲ್ಲಿ 165Hz ರಿಫ್ರೆಶ್ ದರ ಅಥವಾ ಗೇಮ್ ಜಿನೀ ಮೋಡ್‌ನಲ್ಲಿ 185Hz ವರೆಗೆ ಅಪ್‌ಸ್ಕೇಲಿಂಗ್, 2500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಪಡೆದಿರಲಿದೆ. ಜೊತೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಮುಂಬರುವ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಸರಣಿಯ ಶ್ರೇಣಿಯು 24GB RAM ಮತ್ತು 1TB ವರೆಗೆ ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿರಲಿದೆ. ಈ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ ROG UI ಮತ್ತು ಗೇಮ್ ಜಿನೀನಲ್ಲಿ ಕೆಲಸ ಮಾಡಲಿವೆ.
ಕ್ಯಾಮೆರಾ ಸೆಟಪ್
ಆಸುಸ್ ರಾಗ್ ಫೋನ್ 9 ಸರಣಿಯು 50 ಮೆಗಾಪಿಕ್ಸೆಲ್ ಸೋನಿ Lytia 700 ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ, 13 ಮೆಗಾಪಿಕ್ಸೆಲ್ 120 ಡಿಗ್ರಿ ಅಲ್ಟ್ರಾವೈಡ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಎರಡೂ ಫೋನ್‌ಗಳು 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿವೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಆಸುಸ್ ರಾಗ್ ಫೋನ್ 9 ಸರಣಿಯಲ್ಲಿ 5800mAh ಸಾಮರ್ಥ್ಯ ಬ್ಯಾಟರಿಯನ್ನು ಅಳವಡಿಸುವ ಸಾಧ್ಯತೆಯಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 65W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಆಸುಸ್ ರಾಗ್ ಫೋನ್ 9 ಸರಣಿಯು ಅತ್ಯುತ್ತಮ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ. ಈ ಫೋನ್‌ಗಳು ನೀರು ಮತ್ತು ಧೂಳಿನ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿವೆ.


Click it and Unblock the Notifications








