ASUS: 50MP ಕ್ಯಾಮೆರಾ.. ಬಿಗ್ ಬ್ಯಾಟರಿ.. 2 ಶಕ್ತಿಶಾಲಿ ಫೋನ್ ಅಬ್ಬರಿಸಲು ಸಿದ್ಧ! ಲಾಂಚ್ ಯಾವಾಗ?
ಪ್ರಸಿದ್ಧ ಆಸುಸ್ (Asus) ಕಂಪನಿಯು ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 19 ರಂದು ಆಸುಸ್ ರಾಗ್ ಫೋನ್ 9 (ASUS ROG Phone 9) ಸರಣಿಯನ್ನು ಅನಾವರಣಗೊಳ್ಳಲಿದೆ. ಇದರಲ್ಲಿ, ಆಸುಸ್ ರಾಗ್ ಫೋನ್ 9 (ASUS ROG Phone 9) ಮತ್ತು ಆಸುಸ್ ರಾಗ್ ಫೋನ್ 9 ಪ್ರೊ (ASUS ROG Phone 9 Pro) ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಫೋನಿನ ಪ್ರಮುಖ ವೈಶಿಷ್ಟ್ಯಗಳು ಬಿಡುಗಡೆಗೂ ಮೊದಲೇ ಬಹಿರಂಗಪಡಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಆಸುಸ್ ROG ಫೋನ್ 9 ಫೋನಿನ ವಿನ್ಯಾಸ ಮತ್ತು ಎಐ ಗೇಮಿಂಗ್ ವೈಶಿಷ್ಟ್ಯ ಸೇರಿದಂತೆ ಪ್ರಮುಖ ಫೀಚರ್ಸ್ ಸೋರಿಕೆಯಾಗಿದೆ. ಮುಂಬರುವ ಫೋನ್ ಈ ಹಿಂದೆ ಬಿಡುಗಡೆಯಾದ ರಾಗ್ ಫೋನ್ 8 (ASUS ROG Phone 8) ರೀತಿಯೇ ಕಾಣುತ್ತದೆ. ಇದು ರಾಗ್ ಚಿಹ್ನೆ ಆರ್‌ಜಿಬಿ ಲೈಟ್ ಹೊಂದಿಲ್ಲ. ಇದು ರಾಗ್ ಲೋಗೋವನ್ನು ಹೊಂದಿದೆ. ಫೋನಿನ ಅಂಚುಗಳು ಹೆಚ್ಚು ದುಂಡಾಗಿದೆ. ಇದು ಸ್ಟಾರ್ಮ್ ವೈಟ್ ಮತ್ತು ಫ್ಯಾಂಟಮ್ ಬ್ಲಾಕ್ ಬಣ್ಣಗಳಲ್ಲಿ ಬರಲಿದೆ.

ಫೋನಿನ ತೂಕ ಎಷ್ಟು ಗೊತ್ತಾ?
ಆಸುಸ್ ROG ಫೋನ್ 9 ಮೊಬೈಲ್ 163.8 × 76.8 × 8.9 ಎಂಎಂ ದಪ್ಪ ಮತ್ತು 227 ಗ್ರಾಂ ತೂಕ ಹೊಂದಿರಲಿದೆ. ಇದು ಆಸುಸ್ ರಾಗ್ ಫೋನ್ 8 ಫೋನನ್ನು ಹೋಲುತ್ತದೆ. ಫೋನಿನ ಬಾಕ್ಸ್‌ನಲ್ಲಿ ಕ್ಲಿಯರ್ ಕೇಸ್, ಯುಎಸ್‌ಬಿ ಸಿ ನಿಂದ ಯುಎಸ್‌ಬಿ ಸಿ ಕೇಬಲ್ (120 ಸೆಂ.ಮೀ), ಎಜೆಕ್ಟರ್ ಪಿನ್, 65W ಯುಎಸ್‌ಬಿ ಪವರ್ ಅಡಾಪ್ಟರ್ ಮತ್ತು ಡಾಕ್ಯುಮೆಂಟೇಶನ್ (ವಾರಂಟಿ ಕಾರ್ಡ್) ಪೇಪರ್ ಲಭ್ಯವಿರುತ್ತದೆ.
ಆಸುಸ್ ROG ಫೋನ್ 9 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಆಸುಸ್ ROG ಫೋನ್ 9 ಮೊಬೈಲ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 2400×1080 ಪಿಕ್ಸೆಲ್‌ಗಳ ರೆಸಲ್ಯೂಶನ್, 1 ರಿಂದ 120Hz ಅಡಾಪ್ಟಿವ್ ರಿಫ್ರೆಶ್ ದರ ಹೊಂದಿದೆ. ಈ ಫೋನ್ ಯಾವಾಗಲೂ ಆನ್ ಡಿಸ್ಪ್ಲೇ, 2500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಗೊರಿಲ್ಲಾ ಗ್ಲಾಸ್ ವಿಕ್ಟಸ್ ರೀಡರ್ ರೀಡರ್ ರಕ್ಷಣೆ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ಆಸುಸ್ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಜೊತೆಗೆ, ಅಡ್ರಿನೊ 830 ಜಿಪಿಯು ಕೂಡ ಲಭ್ಯವಿರಲಿದೆ. ಈ ಫೋನ್ 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್‌ನೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್
ಈ ಫೋನ್ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಲಿಟಿಯಾ 700 ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ, 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇರಲಿದೆ. ವೀಡಿಯೊಗ್ರಫಿಗಾಗಿ, 30fps ನಲ್ಲಿ 8K ಮತ್ತು 480fps ನಲ್ಲಿ 720P ವರೆಗೆ ಬೆಂಬಲವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮುಂಬರುವ ಆಸುಸ್ ಫೋನ್ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಜೊತೆಗೆ, 65W ಕ್ವಿಕ್ ಚಾರ್ಜ್ 5.0 ಮತ್ತು PD ಚಾರ್ಜಿಂಗ್ ಸೌಲಭ್ಯ ಇರಲಿದೆ.
ಇತರೆ ವೈಶಿಷ್ಟ್ಯಗಳು
ಈ ಫೋನ್ ಎಐ ಗೇಮಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. 'X' ಸೆನ್ಸ್ ವೈಶಿಷ್ಟ್ಯಗಳು ಮತ್ತು ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ 3.5 ಎಂಎಂ ಜ್ಯಾಕ್, ಆಸುಸ್ ಶಬ್ದ ಕಡಿತ ತಂತ್ರಜ್ಞಾನದೊಂದಿಗೆ ಟ್ರಿ ಮೈಕ್ರೋಫೋನ್, 6GHz ವರೆಗೆ ವೈ ಫೈ 7 ಮತ್ತು ಬ್ಲೂಟೂತ್ 5.3 ಸೌಲಭ್ಯ ಒಳಗೊಂಡಿರುತ್ತದೆ.


Click it and Unblock the Notifications








