ಭಾರತದಲ್ಲಿ 'ಆಸುಸ್ ROG' ಗೇಮಿಂಗ್ ಫೋನ್ ಲಾಂಚ್!..ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿವೆ!!

|

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೈವಾನ್ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಅಸೂಸ್, ದೇಶದಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ROG ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿದ್ದ ಗೇಮಿಂಗ್ ಫೋನ್ ಒಂದು ಈಗ ಭಾರತೀಯರ ಕೈಸೇರಲು ತಯಾರಾಗಿದೆ.

ಭಾರತದಲ್ಲೂ ಸಹ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಅಧಿಕವಾಗಿರುವುದನ್ನು ಗಮನಿಸಿರುವ ಆಸುಸ್ ಕಂಪೆನಿ ತನ್ನ ಅತ್ಯದ್ಬುತ 'ಆಸುಸ್ ROG' ಸ್ಮಾರ್ಟ್‌ಫೋನ್ ಅನ್ನು ಇಂದು ಬಿಡುಗಡೆ ಮಾಡಿದೆ. ಆಸುಸ್ ROG' ಸ್ಮಾರ್ಟ್‌ಫೋನ್ ಜೊತೆಗೆ ಪ್ರೊಫೆಷನಲ್ ಡಾಕ್, ಗೇಮ್‌ವೈಸ್ ಜಾಯ್‌ಸ್ಟಿಕ್‌ನಂತರ ಹಲವು ಗೇಮಿಂಗ್ ಅಸೆಸರಿಸ್‌ಗಳು ಸಹ ಬಿಡುಗಡೆಯಾಗಿವೆ.

ಭಾರತದಲ್ಲಿ 'ಆಸುಸ್ ROG' ಗೇಮಿಂಗ್ ಫೋನ್ ಲಾಂಚ್!..ಬೆಲೆ ಮತ್ತು ವೈಶಿಷ್ಟ್ಯಗಳು!!

ಪ್ರಮುಖವಾಗಿ ಗೇಮರ್‌ಗಳನ್ನು ಗುರಿಯಾಗಿಸಿಕೊಂಡು ತಯಾರಾಗಿರುವ ಈ ಸ್ಮಾರ್ಟ್‌ಫೋನ್ 6 ಇಂಚುಗಳ FHD + AMOLED ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ನಂತಹ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದರೆ, ಆಸುಸ್ ಬಿಡುಗಡೆ ಮಾಡಿರುವ 'ಆಸುಸ್ ROG' ಫೋನ್ ಹೇಗಿದೆ?, ಬೆಲೆ ಎಷ್ಟು?, ಎಂಬುದನ್ನು ಮುಂದೆ ಓದಿ ತಿಳಿಯಿರಿ.

6 ಇಂಚಿನ ಡಿಸ್‌ಪ್ಲೇ

6 ಇಂಚಿನ ಡಿಸ್‌ಪ್ಲೇ

ಗೇಮಿಂಗ್ ಅನುಭವನ್ನು ಇಮ್ಮಡಿಗೊಳಿಸುವ ಸಲುವಾಗಿ ಅಸುಸ್ ROG ಫೋನಿನಲ್ಲಿ 6 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದು ವಿಷ್ಯೂವಲ್ ಸ್ಮೂತಿಂಗ್ ಆಯ್ಕೆಯನ್ನು ಹೊಂದಿದ್ದು, HDR ಸಪೋರ್ಟ್ ಮಾಡಲಿದೆ. 90Hz ರಿಫ್ರೆಶ್ ರೇಟ್ AMOLED ಡಿಸ್‌ಪ್ಲೇ ಗೇಮಿಂಗ್ ಹಾಗೂ ಮಲ್ಟಿಮೀಡಿಯಾ ಪ್ರಿಯರಿಗೆ ಅತ್ಯುತ್ತಮ ಅನುಭವನ್ನು ನೀಡಲಿದೆ.

ಅತ್ಯುತ್ತಮ ಪ್ರೋಸೆಸರ್

ಅತ್ಯುತ್ತಮ ಪ್ರೋಸೆಸರ್

ಮೊದಲೇ ಗೇಮರ್‌ಗಳನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಬಂದಿರುವ ಈ ಅಸುಸ್ ROG ಸ್ಮಾರ್ಟ್‌ಫೋನಿನಲ್ಲಿ ಅತ್ಯುತ್ತಮವಾದ ಸ್ನ್ಯಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಆಡ್ರಿನೋ 630 GPU, ಗೇಮಿಂಗ್ ಮೋಡ್ ಆಯ್ಕೆಗಳ ತಂತ್ರಜ್ಞಾನವನ್ನು ಹೊಂದಿರುವ ಫೋನ್ ಪ್ರೊಸೆಸರ್ ಗೇಮಿಂಗ್ ಪ್ರಿಯರ ಸ್ವರ್ಗಕ್ಕೆ ದಾರಿ ಎನ್ನಬಹುದು.

ಮೆಮೊರಿ ಮತ್ತು RAM!

ಮೆಮೊರಿ ಮತ್ತು RAM!

ಸ್ನ್ಯಾಪ್ ಡ್ರಾಗನ್ 845 ಪ್ರೋಸೆಸರ್ ಅಳವಡಿಸಿರುವ ಸ್ಮಾರ್ಟ್‌ಫೋನಿನಲ್ಲಿ 8GB RAM ಇಲ್ಲದಿದ್ದರೆ ಹೇಗೆ ಹೇಳಿ?. ನೀವು ಅಂದುಕೊಂಡಂತೆ ಈ ಅಸುಸ್ ROG ಸ್ಮಾರ್ಟ್‌ಫೋನಿನಲ್ಲಿ 8GB LPDD4 RAM ಅನ್ನು ಅಳವಡಿಸಲಾಗಿದೆ. 128GB ಆಂತರಿಕ ಸ್ಟೋರೆಜ್ ಅನ್ನು ಹೊಂದಿರುವ ಹೈ ಎಂಡ್ ಸ್ಮಾರ್ಟ್‌ಫೋನ್ ವೇಗವ ಕಾರ್ಯಾಚರಣೆಗೆ ಹೇಳಿ ಮಾಡಿಸಿದ ಶಕ್ತಿಯನ್ನು ಹೊಂದಿದೆ.

ಗೇಮಿಂಗ್ ಕೂಲ್ ಸಿಸ್ಟಮ್

ಗೇಮಿಂಗ್ ಕೂಲ್ ಸಿಸ್ಟಮ್

ದೊಡ್ಡ ಗಾತ್ರದ ತ್ರಿಡಿ ಗೇಮ್‌ಗಳನ್ನು ನಿರಾಯಾಸವಾಗಿ ಆಡಬಹುದಾದ ಈ ಸ್ಮಾರ್ಟ್‌ಫೋನಿನಲ್ಲಿ ವಿಶೇಷವಾಗಿ ಗೇಮಿಂಗ್ ಕೂಲ್ ಸಿಸ್ಟಮ್ ಅನ್ನು ನೀಡಲಾಗಿದೆ. ಇದು ಗೇಮ್ ಆಡುವ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಬಿಸಿಯಾಗದಂತೆ ತಡೆಯಲಿದೆ. ಇದರಿಂದ ಬಳಕೆದಾರರಿಗೆ ಯಾವುದೇ ರೀತಿಯಲ್ಲಿಯೂ ಸ್ಲೋ ಅನುಭವವಾಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಗೇಮಿಂಗ್ ಪ್ರಿಯರಿಗೆ ಹೆಚ್ಚು ಹೊತ್ತು ಬ್ಯಾಟರಿ ಬಾಳಿಕೆಯನ್ನು ನೀಡುವ ಸಲುವಾಗಿ ಈ ಫೋನಿನಲ್ಲಿ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಹೆಚ್ಚಿನ ಸಮಯ ಗೇಮ್ ಆಡಲು ಹೇಳಿ ಮಾಡಿಸಿದಂತೆ ಇರುವ ಈ ಸ್ಮಾರ್ಟ್‌ಪೋನ್ ಹೈಪರ್ ಚಾರ್ಜ್ ತಂತ್ರಜ್ಞಾನವನ್ನು ಹೊಂದಿದ್ದು, 33 ನಿಮಿಷಗಳಲ್ಲಿ ಶೇ.60 ರಷ್ಟು ಚಾರ್ಜ್ ಆಗಲಿದೆ ಎಂದು ಆಸುಸ್ ಕಂಪೆನಿ ಹೇಳಿಕೊಂಡಿದೆ.

ಗೇಮಿಂಗ್ ಅಸೆಸರಿಸ್‌ಗಳು!

ಗೇಮಿಂಗ್ ಅಸೆಸರಿಸ್‌ಗಳು!

'ಆಸುಸ್ ROG' ಸ್ಮಾರ್ಟ್‌ಫೋನ್ ಜೊತೆಗೆ ಪ್ರೊಫೆಷನಲ್ ಡಾಕ್, ಗೇಮ್‌ವೈಸ್ ಜಾಯ್‌ಸ್ಟಿಕ್‌ನಂತರ ಹಲವು ಗೇಮಿಂಗ್ ಅಸೆಸರಿಸ್‌ಗಳು ಬಿಡುಗಡೆಯಾಗಿವೆ. ಪ್ರೊಫೆಷನಲ್ ಡಾಕ್: 5,499 ರೂ., ಗೇಮ್‌ವೈಸ್ ಜಾಯ್‌ಸ್ಟಿಕ್: 5,999 ರೂ., ಟ್ವಿನ್‌ವ್ಯೂ ಡಾಕ್: 21,999 ರೂ., ಡೆಸ್ಟ್‌ಟಾಪ್ ಡಾಕ್: 12,999 ರೂ.ಗಳೆಲ್ಲವೂ ಅಸುಸ್ ROG ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಲಭ್ಯವಿವೆ.

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ನವೆಂಬರ್ 29 ರಿಂದಲೇ ಫ್ಲಿಪ್‌ಕಾರ್ಟ್ ಜಾಲತಾಣದಲ್ಲಿ ಲಭ್ಯವಿದ್ದು, ಸ್ಮಾರ್ಟ್‌ಫೋನ್ ಬೆಲೆ 69,999 ರೂಪಾಯಿಗಳಾಗಿವೆ. ಈ ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಇಎಮ್‌ಐ ಮೂಲಕವೂ ಖರೀದಿಸಬಹುದಾಗಿದ್ದು, ಪ್ರತಿ ತಿಂಗಳು 5,999 ರೂ.ಗಳನ್ನು ಪಾವತಿಸಿ ಈ ಗೇಮಿಂಗ್ ಸ್ಮಾರ್ಟ್‌ಪೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Best Mobiles in India

English summary
After a bit of delay against its promised arrival timeline in India, Asus has today launched the highly-anticipated ROG Phone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X