ಭಾರತೀಯ ಮಾರುಕಟ್ಟೆಗೆ ಅಸುಸ್ ROG ಫೋನ್: ಗೇಮಿಂಗ್ ಗಾಗಿಯೇ ವಿಶೇಷವಾಗಿದೆ..!

|

ಸದ್ಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸದೊಂದು ಅಲೆಯನ್ನು ಕಾಣಬಹುದಾಗಿದ್ದು, ಅದೇ ಗೇಮಿಂಗ್ ಸ್ಮಾರ್ಟ್ ಫೋನ್ ಗಳು. ದಿನದಿಂದ ದಿನಕ್ಕೇ ಸ್ಮಾರ್ಟ್ ಫೋನ್ ಗಳಲ್ಲಿ ಗೇಮ್ ಆಡುವವರ ಸಂಖ್ಯೆಯೂ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೊಸ ಹೊಸ ಗೇಮಿಂಗ್ ಸ್ಮಾರ್ಟ್ ಫೋನ್ ಗಳು ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಆಸುಸ್ ಕಂಪನಿ ಲಾಂಚ್ ಮಾಡಿರುವ ROG ಫೋನ್ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಭಾರತೀಯ ಮಾರುಕಟ್ಟೆಗೆ ಅಸುಸ್ ROG ಫೋನ್: ಗೇಮಿಂಗ್ ಗಾಗಿಯೇ ವಿಶೇಷವಾಗಿದೆ..!

ಈಗಾಗಲೇ ಜಾಗತಿಕವಾಗಿ ಹಲವು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಸುಸ್ ROG ಫೋನ್ ಸ್ಮಾರ್ಟ್ ಫೋನ್ ಗೇಮಿಂಗ್ ಪ್ರಿಯರನ್ನು ಸಾಕಷ್ಟು ರಂಜಿಸಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದಾರೆ. ಇದಕ್ಕಾಗಿ ಆಸುಸ್ ಭಾರತದಲ್ಲಿಯೂ ಗೇಮಿಂಗ್ ಸ್ಮಾರ್ಟ್ ಫೋನ್ ಬೇಡಿಕೆಯೂ ಅಧಿಕವಾಗಿರುವುದನ್ನು ಗಮನಿಸಿ, ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧೀಸುವ ಸಲುವಾಗಿ ಅಸುಸ್ ROG ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

6 ಇಂಚಿನ ಡಿಸ್ ಪ್ಲೇ:

6 ಇಂಚಿನ ಡಿಸ್ ಪ್ಲೇ:

ಗೇಮಿಂಗ್ ಅನುಭವನ್ನು ಇಮ್ಮಡಿಗೊಳೀಸುವ ಸಲುವಾಗಿ ಅಸುಸ್ ROG ಫೋನಿನಲ್ಲಿ 6 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಅಳವಡಿಸಲಾಗಿದ್ದು, ಇದು ವಿಷ್ಯೂವಲ್ ಸ್ಮೂತಿಂಗ್ ಆಯ್ಕೆಯನ್ನು ಹೊಂದಿದೆ ಎನ್ನಲಾಇದೆ. ಅಲ್ಲದೇ ಇದು HDR ಸಪೋರ್ಟ್ ಮಾಡಲಿದ್ದು, ಬಳಕೆದಾರರಿಗೆ ಸಾಕಷ್ಟು ಉತ್ತಮವಾದ ಗೇಮಿಂಗ್ ಅನುಭವನ್ನು ನೀಡಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಹೆಚ್ಚಿನ ವೇಗವನ್ನು ಬೇಡುವ ಗೇಮ್ ಗಳನ್ನು ಆಡುವ ಸಲುವಾಗಿಯೇ ರೂಪಿತವಾಗಿರುವ ಅಸುಸ್ ROG ಫೋನ್ ನಲ್ಲಿ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಬಳಕೆದಾರರಿಗೆ ಗೇಮಿಂಗ್ ಕೂಲ್ ಸಿಸ್ಟಮ್ ಅನ್ನು ಇದರಲ್ಲಿ ನೀಡಲಾಗಿದೆ. ಅಲ್ಲದೇ ಆಡ್ರಿನೋ 630 GPUವನ್ನು ಕಾಣಬಹುದಾಗಿದೆ.

8 GB RAM:

8 GB RAM:

ದೊಡ್ಡ ಗಾತ್ರದ ತ್ರಿಡಿ ಗೇಮ್ ಗಳನ್ನು ಆಡುವ ಸಲುವಾಗಿ 8 GB LPDD4 RAM ಅನ್ನು ಅಳವಡಿಸಲಾಗಿದ್ದು, ಇದು ವೇಗವ ಕಾರ್ಯಚರಣೆಗೆ ಮತ್ತು ಹೆಚ್ಚಿನ ಸಮಯದ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಬಳಕೆದಾರರಿಗೆ ಯಾವುದೇ ರೀತಿಯಲ್ಲಿಯೂ ಸ್ಲೋ ಅನ್ನು ಅನುಭವನ್ನು ಅಸುಸ್ ROG ಫೋನ್ ನೀಡುವುದಿಲ್ಲ ಎನ್ನುವುದು ಕಂಪನಿಯ ಮಾತಾಗಿದೆ.

ಗೇಮ್ ಕೂಲ್:

ಗೇಮ್ ಕೂಲ್:

ಸ್ಮಾರ್ಟ್ ಫೋನಿನಲ್ಲಿ ಒಂದೇ ಸಮನೆ ಆಟವಾಡಿದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗುವ ಸಾಧ್ಯತೆ ಇದೆ. ಇದಕ್ಕಾಗಿಯೇ ಅಸುಸ್ ROG ಫೋನ್ ನಲ್ಲಿ ವಿಶೇಷವಾಗಿ ಗೇಮಿಂಗ್ ಕೂಲ್ ಸಿಸ್ಟಮ್ ಅನ್ನು ನೀಡಲಾಗಿದ್ದು, ಇದು ಗೇಮ್ ಆಡುವ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಬಿಸಿಯಾಗದಂತೆ ತಡೆಯಲಿದೆ.

ಹೆಚ್ಚಿನ ಬ್ಯಾಟರಿ:

ಹೆಚ್ಚಿನ ಬ್ಯಾಟರಿ:

ಅಸುಸ್ ROG ಫೋನ್ ಗೇಮ್ ಆಡಲು ಹೆಚ್ಚು ಹೊತ್ತು ಬಳಕೆ ಮಾಡಬೇಕಾದ ಸಂದರ್ಭ ನಿರ್ಮಾಣವಾಗಲಿದೆ. ಇದಕ್ಕಾಗಿಯೇ ಈ ಫೋನಿನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಹೆಚ್ಚಿನ ಸಮಯ ಗೇಮ್ ಆಡಲು ಹೇಳಿ ಮಾಡಿಸಿದಂತೆ ಇದೆ. ಅಸುಸ್ ROG ಫೋನ್ ಈ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Best Mobiles in India

English summary
Asus ROG Phone India Launch Confirmed: Powerful Gaming Smartphone Packs 8GB RAM And 2.96GHz SoC. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X