Home
ಮೊಬೈಲ್

ಹೊಸ ASUS ಫೋನ್ ಬಿಡುಗಡೆ: 50MP + 32MP + 32MP ಕ್ಯಾಮೆರಾಗಳು.. 512GB ಸ್ಟೋರೇಜ್.. ಬೆಲೆ ನೋಡಿ

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಫೆಬ್ರವರಿ ತಿಂಗಳು ಹಬ್ಬವೇ ಸರಿ! ವಿವಿಧ ಕಂಪನಿಗಳ ಹೊಸ ಫೋನ್‌ಗಳು ಒಂದರ ಹಿಂದೆ ಒಂದರಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದರಂತೆ, ಆಸುಸ್ ಸದ್ದಿಲ್ಲದೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಹೌದು, ಕಂಪನಿಯು ಆಸುಸ್ ಝೆನ್‌ಫೋನ್ 12 ಅಲ್ಟ್ರಾ (ASUS Zenfone 12 Ultra) ಫೋನನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್‌ ನೀಡಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಮೊಬೈಲ್ ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ ಎಲ್ಲಾ ವೈಶಿಷ್ಟ್ಯಗಳು ಅತ್ಯುತ್ತಮವಾಗಿವೆ. ಬಹುತೇಕ ಕಳೆದ ವರ್ಷ ಬಿಡುಗಡೆಯಾದ ಆಸುಸ್ ರಾಗ್ ಫೋನ್ 9 ಸರಣಿಯಂತೆಯೇ ಈ ಫೋನಿನ ಫೀಚರ್ಸ್ ಇವೆ. ಈ ಸ್ಮಾರ್ಟ್‌ಫೋನ್ ಎಬೊನಿ ಬ್ಲಾಕ್, ಸಕುರಾ ವೈಟ್ ಮತ್ತು ಸೇಜ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಆಸುಸ್ ಝೆನ್‌ಫೋನ್ 12 ಅಲ್ಟ್ರಾ ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ASUS: ಹೊಸ ಫೋನ್ ಲಾಂಚ್; 50MP ಕ್ಯಾಮೆರಾ, 5500mAh ಬ್ಯಾಟರಿ; ಬೆಲೆ ನೋಡಿ

ಡಿಸ್ಪ್ಲೇ ವಿವರ

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಸ್ಮಾರ್ಟ್‌ಫೊನ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರುತ್ತದೆ. ಹಾಗೆಯೇ 120Hz (ಗೇಮಿಂಗ್‌ಗಾಗಿ 144Hz) ರಿಫ್ರೆಶ್ ದರ, 2500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ಝೆನ್ ಯುಐ ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಈ ಫೋನ್, ಅಡ್ರಿನೊ 830 ಜಿಪಿಯು ಸಹ ಹೊಂದಿದೆ.

RAM ಮತ್ತು ಸ್ಟೋರೇಜ್ ಆಯ್ಕೆ

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಫೋನ್ 12GB ಮತ್ತು 16GB RAM ಹೊಂದಿದೆ. ಜೊತೆಗೆ 256GB ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಸ್ಮಾರ್ಟ್‌ಫೊನ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಇದು 6 ಆಕ್ಸಿಸ್ ಗಿಂಬಲ್ ಸ್ಟೆಬಿಲೈಸೇಶನ್ ಬೆಂಬಲದೊಂದಿಗೆ ಬರುತ್ತದೆ. ಜೊತೆಗೆ 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು OIS ಬೆಂಬಲದೊಂದಿಗೆ 32 ಮೆಗಾಪಿಕ್ಸೆಲ್ 3x ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಕಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 65W ಹೈಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ ಕ್ವಿಕ್ ಚಾರ್ಜ್ 5.0, PD ಚಾರ್ಜಿಂಗ್ ಮತ್ತು 15W Qi ವೈರ್‌ಲೆಸ್ ಚಾರ್ಜಿಂಗ್‌ ಸಹ ಲಭ್ಯವಿದೆ.

ಇತರೆ ವೈಶಿಷ್ಟ್ಯಗಳು

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಹಾಗೆಯೇ 3.5mm ಆಡಿಯೋ ಜ್ಯಾಕ್, ಡ್ಯುಯಲ್ ಸ್ಪೀಕರ್‌ಗಳು, 5 ಮ್ಯಾಗ್ನೆಟ್ ಸ್ಟೀರಿಯೊ ಸ್ಪೀಕರ್ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಡ್ಯುಯಲ್ ಸಿಮ್, 5G SA/NSA, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಬೆಲೆ

ಆಸುಸ್ ಝೆನ್‌ಫೋನ್ 12 ಅಲ್ಟ್ರಾ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 79,910 ರೂ. ಆಗಿದೆ. ಹಾಗೆಯೇ 16GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ 85,240 ರೂ.ಗೆ ಬಿಡುಗಡೆಯಾಗಿದೆ. ಇದು ಪ್ರಸ್ತುತ, ಜಾಗತಿಕ ಮಾರುಕಟ್ಟೆಯಲ್ಲಿ (ತೈವಾನ್) ಮಾತ್ರ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಭಾರತ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಲಾಂಚ್ ಆಗಲಿದೆ.

Best Mobiles in India

English summary
ASUS Zenfone 12 Ultra with 6.78 AMOLED display, Snapdragon 8 Elite Launched: price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+