Home
ಮೊಬೈಲ್

'ರೆಡ್‌ಮಿ ನೋಟ್ 4' ಹಿಂದಿಕ್ಕುವ 'ಜೆನ್‌ಪೋನ್ 3 ಮ್ಯಾಕ್ಸ್' ಬೆಲೆ ಇದೀಗ 9,200ರೂ.!!

ರೆಡ್‌ಮಿ ನೋಟ್ 4 ಅನ್ನು ಹಿಂದಿಕ್ಕುವ ಫೀಚರ್ಸ್‌ಗಳಿಂದ ಎಲ್ಲರ ಗಮನ ಸೆಳೆದಿರುವ 'ಆಸುಸ್ ಜೆನ್‌ಪೋನ್ 3 ಮ್ಯಾಕ್ಸ್'' ಸ್ಮಾರ್ಟ್‌ಫೋನ್ ಇದೀಗ ಕೇವಲ 9,200 ರೂಪಾಯಿಗಳಿಗೆ ಲಭ್ಯವಿದೆ.!!

By Bhaskar N J

ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗದೆ ಸೊರಗುತ್ತಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಎಂದರೆ ಆಸಸ್ ಫೋನ್‌ಗಳು! ಹೌದು, ಥೈವಾನ್ ಮೂಲದ ಆಸುಸ್ ಕಂಪೆನಿಯ ಫೋನ್‌ಗಳು ಗುಣಮಟ್ಟ ಮತ್ತು ಬಾಳಿಕೆಗೆ ಹೆಚ್ಚು ಹೆಸರಾಗಿವೆ.ಆದರೆ, ಬೆಲೆ ಸ್ವಲ್ಪ ಹೆಚ್ಚಿರುವುದರಿಂದ ಇವು ಮಾರಾಟದಲ್ಲಿ ಹಿಂದೆ ಬಿದ್ದಿವೆ ಎನ್ನಬಹುದು.!!

ಆದರೆ, ನಿಮಗೆ ಗೊತ್ತಾ? ಆಸಸ್ ಕಂಪೆನಿಯ ಅತ್ಯುತ್ತಮ ಫೀಚರ್ ಹೊಂದಿರುವ ಫೋನ್ ಬೆಲೆ ಭಾರಿ ಕಡಿಮೆಯಾಗಿದೆ.! ರೆಡ್‌ಮಿ ನೋಟ್ 4 ಅನ್ನು ಹಿಂದಿಕ್ಕುವ ಫೀಚರ್ಸ್‌ಗಳಿಂದ ಎಲ್ಲರ ಗಮನ ಸೆಳೆದಿರುವ 'ಆಸುಸ್ ಜೆನ್‌ಪೋನ್ 3 ಮ್ಯಾಕ್ಸ್'' ಸ್ಮಾರ್ಟ್‌ಫೋನ್ ಇದೀಗ ಕೇವಲ 9,200 ರೂಪಾಯಿಗಳಿಗೆ ಲಭ್ಯವಿದೆ.!!

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಮೊದಲ ಸ್ಥಾನದಲ್ಲಿರುವ 'ಆಸುಸ್ ಜೆನ್‌ಪೋನ್ 3 ಮ್ಯಾಕ್ಸ್ ಫೋನ್ ಅನ್ನು ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 9,200 ರೂ.ಗೆ ಮಾರಾಟಕ್ಕಿಡಲಾಗಿದ್ದು, ಹಾಗಾದರೆ, ಜೆನ್‌ಪೋನ್ 3 ಮ್ಯಾಕ್ಸ್ ಫೋನ್ ಫೀಚರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

 4100mAh ಬ್ಯಾಟರಿ ಸಾಮಾರ್ಥ್ಯ

4100mAh ಬ್ಯಾಟರಿ ಸಾಮಾರ್ಥ್ಯ

ಜೆನ್‌ಪೋನ್ 3 ಮ್ಯಾಕ್ಸ್ ಸ್ಮಾರ್ಟ್‌ಪೋನ್ 4100mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಕಂಪನಿ ಹೇಳುವಂತೆ ನಿರಂತರ ಡೇಟಾ ಬಳಕೆಗೆ 48 ಗಂಟೆಗಳ ಕಾಲ ಸ್ಟಾಂಡ್‌ಬೈ ನೀಡಲಿದೆ. ದೀರ್ಘಕಾಲದ ವಿಡಿಯೋ ವೀಕ್ಷಣೆಗೆ ಈ ಫೋನ್ ಸಹಾಯಕಾರಿಯಾಗಿದೆ.

Xiaomi Redmi Y1 : ಶಿಯೋಮಿಯ ಮೊದಲ ಸೆಲ್ಪಿ ಫೋನ್ ರೆಡ್‌ಮಿ Y1
HD ಡಿಸ್‌ಪ್ಲೇ ಮತ್ತು ವಿನ್ಯಾಸ

HD ಡಿಸ್‌ಪ್ಲೇ ಮತ್ತು ವಿನ್ಯಾಸ

5.2 ಇಂಚಿನ IPS HD ಡಿಸ್‌ಪ್ಲೇ ಈ ಪೋನ್‌ನಲ್ಲಿದ್ದು, ಇದರೊಂದಿಗೆ 2.5D ಗ್ಲಾಸ್ ಇದೆ. ಕಲರ್ ಫುಲ್ ಆಗಿರುವ ಜೆನ್‌ಪೋನ್ 3 ಮ್ಯಾಕ್ಸ್ ಡಿಸ್‌ಪ್ಲೇಯನ್ನು ಗೇಮಿಂಗ್‌ಗಾಗಿಯೇ ರೂಪಿಸಿರುವುದು ವಿಶೇಷ.!!

ಅತ್ಯಂತ ವೇಗದ ಪ್ರೋಸೆಸರ್

ಅತ್ಯಂತ ವೇಗದ ಪ್ರೋಸೆಸರ್

64 ಬಿಟ್ ಕ್ವಾಡ್‌ಕೋರ್, ಮಿಡಿಯಾ ಟೆಕ್ MT6750 ಪ್ರೋಸೆಸರ್ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. ಆಂಡ್ರಾಯ್ಡ್ 6.0.1 ನ್ಯೂಗಾ ಮತ್ತು ಆಸಸ್ ZenUI 3.1ನಲ್ಲಿ ಈ ಪೋನ್ ವರ್ಕ್ ಆಗಲಿದ್ದು, ವೇಗಕ್ಕಾಗಿ 3GB RAM ಇದರಲಿದೆ.

ಕ್ಯಾಮೆರಾ ಗುಣಮಟ್ಟ

ಕ್ಯಾಮೆರಾ ಗುಣಮಟ್ಟ

ಈ ಸ್ಮಾರ್ಟ್‌ಪೋನಿನಲ್ಲಿ 13 MP ಹಿಂಬದಿ ಕ್ಯಾಮೆರಾ ಇದ್ದು, f/2.0 ಆಪರ್ಚರ್ ಮತ್ತು LED ಫ್ಲಾಷ್ ಜೊತೆಗೆ ಆಟೋ ಪೋಕಸ್ ಸಹ ಇದೆ. ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ಅಳಡಿಸಲಾಗಿದೆ. ಗುಣಮಟ್ಟದ ಪೋಟೋಗಾಗಿ ಇದರೊಂದಿಗೆ ಪಿಕ್ಸಲ್ ಮಾಸ್ಟರ್ ಟೆಕ್ನಾಲಜಿಯನ್ನು ಹೊಂದಿದೆ.

ಇತರೆ ವಿಶೇಷತೆಗಳು!!

ಇತರೆ ವಿಶೇಷತೆಗಳು!!

4G VoLTE, Wi-Fi 802.11, GPS, ಬ್ಲೂಟೂತ್ 4.0, ಮೈಕ್ರೊ-USB ಜೊತೆಗೆ ಫಿಂಗರ್ ಪ್ರಿಂಟ್‌ಸ್ಕ್ಯಾನರ್‌ನಂತರ ಬಹುತೇಕ ಎಲ್ಲಾ ಫೀಚರ್‌ಗಳು ಸಹ ಜೆನ್‌ಪೋನ್ 3 ಮ್ಯಾಕ್ಸ್ ಸ್ಮಾರ್ಟ್‌ಪೋನ್‌ನಲ್ಲಿ ಲಭ್ಯವಿದ್ದು, ಗುಣಮಟ್ಟದ ಈ ಫೋನ್ ಅನ್ನು ಖರೀದಿಸಲು ಉತ್ತಮ ಎಂದು ಹೇಳಬಹುದು.!!

Best Mobiles in India

English summary
Asus has reduced the price of its popular smartphone. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+