ಆಸುಸ್ ಜೇನ್ ಫೋನ್ 4 ಮ್ಯಾಕ್ಸ್ ಲಾಂಚ್: ಇಲ್ಲಿದೇ ವಿಶೇಷತೆಗಳ ಕುರಿತ ಮಾಹಿತಿ..!!

ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಹಾಗೂ ಹೆಚ್ಚಿನ ಬ್ಯಾಟರಿ ಬ್ಯಾಕಪ್ ಇರುವ ಜೆನ್ ಫೋನ್ 4 ಮ್ಯಾಕ್ಸ್ ಅನ್ನು ರಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಜೆನ್ ಫೋನ್ 4 ಸರಣಿಯ ಮೊದಲನೇಯ ಸ್ಮಾರ್ಟ್ ಫೋನ್ ಇದಾಗಿದೆ.

By Precilla Dias
|

ನಿರೀಕ್ಷೆಯಂತೆ ಅಸುಸ್ ನೂತನ ಸ್ಮಾರ್ಟ್ ಫೋನ್ ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಹಾಗೂ ಹೆಚ್ಚಿನ ಬ್ಯಾಟರಿ ಬ್ಯಾಕಪ್ ಇರುವ ಜೆನ್ ಫೋನ್ 4 ಮ್ಯಾಕ್ಸ್ ಅನ್ನು ರಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಜೆನ್ ಫೋನ್ 4 ಸರಣಿಯ ಮೊದಲನೇಯ ಸ್ಮಾರ್ಟ್ ಫೋನ್ ಇದಾಗಿದೆ.

ಆಸುಸ್ ಜೇನ್ ಫೋನ್ 4 ಮ್ಯಾಕ್ಸ್ ಲಾಂಚ್: ಇಲ್ಲಿದೇ ವಿಶೇಷತೆಗಳ ಕುರಿತ ಮಾಹಿತಿ..!!

ಜೆನ್ ಫೋನ್ 4 ಮ್ಯಾಕ್ಸ್ ಬೆಲೆ ಸರಿ ಸುಮಾರು ರೂ.15,000ಕ್ಕೆ ದೊರೆಯಲಿದೆ ಎನ್ನಲಾಗಿದೆ. ಈ ಫೋನಿನ ವಿನ್ಯಾಸಕ್ಕೆ ಮತ್ತು ವಿಶೇಷತೆಗೆ ಈ ಬೆಲೆ ತೀರಾ ಹೆಚ್ಚೇನು ಅನ್ನಿಸುವುದಿಲ್ಲ ಎನ್ನಲಾಗಿದೆ. ಈ ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಡಿಸ್ ಪ್ಲೇ:

ಡಿಸ್ ಪ್ಲೇ:

ಜೆನ್ ಫೋನ್ 4 ಮ್ಯಾಕ್ಸ್ ಫೋನಿನಲ್ಲಿ 5.5 ಇಂಚಿನ FHD IPS ಡಿಸ್ ಪ್ಲೇ ಕಾಣಬಹುದಾಗಿದೆ. ಇದಕ್ಕೆ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ.

ಸಾಫ್ಟ್ ವೇರ್:

ಸಾಫ್ಟ್ ವೇರ್:

ಜೆನ್ ಫೋನ್ 4 ಮ್ಯಾಕ್ಸ್ ನಲ್ಲಿ ಎರಡು ಆವೃತ್ತಿಯನ್ನು ಕಾಣಬಹುದಾಗಿದೆ. ಒಂದು ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430 ಪ್ರೊಸೆಸರ್ ಹಾಗೂ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 425 ನಲ್ಲಿ ದೊರೆಯಲಿದೆ. ಅಲ್ಲದೇ 4GB RAM ಮತ್ತು 16 GB/ 32GB/ 64GB ಆವೃತ್ತಿಗಳಲ್ಲಿ ದೊರೆಯಲಿದೆ. ಅಲ್ಲದೇ ಮೆಮೊರಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ‘

ಕ್ಯಾಮೆರಾಗಳು:

ಕ್ಯಾಮೆರಾಗಳು:

ಇದಲ್ಲದೇ ಜೆನ್ ಫೋನ್ 4 ಮ್ಯಾಕ್ಸ್ ನ ಹಿಂಭಾಗದಲ್ಲಿ 13 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ಒಂದು ವೈಡ್ ಅಂಗಲ್ ಲೆನ್ಸ್ ಆಗಿದೆ. ಒಂದು ಟೆಲಿ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಅಲ್ಲದೇ LED ಫ್ಲಾಷ್ ಕಾಣಬಹುದಾಗಿದೆ.

 ಬ್ಯಾಟರಿ:

ಬ್ಯಾಟರಿ:

ಜೆನ್ ಫೋನ್ 4 ಮ್ಯಾಕ್ಸ್ ಫೋನಿನ ಪ್ರಮುಖ ಆಕರ್ಷಣೆ ಎಂದರೆ ಇದರಲ್ಲಿರುವ 5000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಇದೆ. ಇದರಿಂದ ಬೇರೆ ಫೋನ್ ಅನ್ನು ಚಾರ್ಜ ಮಾಡಬಹುದಾಗಿದೆ.

ಆಂಡ್ರಾಯ್ಡ್:

ಆಂಡ್ರಾಯ್ಡ್:

ಜೆನ್ ಫೋನ್ 4 ಮ್ಯಾಕ್ಸ್ ನೂತನ ಆಂಡ್ರಾಯ್ಡ್ 7.0 ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜೆನ್ UI OS ಕಾಣಬಹುದಾಗಿದೆ. ಡ್ಯುಯಲ್ ನ್ಯಾನೋ ಸಿಮ್ ಕಾಣಬಹುದಾಗಿದೆ.

Best Mobiles in India

Read more about:
English summary
Asus yesterday unveiled a new handset with dual cameras and a 5000mAh battery in Russia.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X