ಅಸೂಸ್ ಜೆನ್‌ಫೋನ್ 5 ಪುನಃ ರೀಟೈಲ್ ತಾಣಗಳಲ್ಲಿ

Written By:

ತನ್ನ ಉತ್ತಮ ಸಾಮರ್ಥ್ಯವುಳ್ಳ ಪಿಸಿ ಮತ್ತು ಟ್ಯಾಬ್ಲೆಟ್‌ಗಳಿಗೆ ಹೆಸರುವಾಸಿಯಾಗಿರುವ ಅಸೂಸ್, ಇದೀಗ ಹೆಚ್ಚಿನ ಗಮನವನ್ನು ತನ್ನ ಸ್ಮಾರ್ಟ್‌ಫೋನ್‌ಗಳ ಕಡೆಗೆ ನೀಡುತ್ತಿದೆ. ಇತ್ತೀಚೆಗಷ್ಟೇ ಅತ್ಯಾಧುನಿಕ ಮಾದರಿಯ ಸ್ಮಾರ್ಟ್‌ಫೋನ್‌ಗಳಾದ ಜೆನ್‌ಫೋನ್ 6, ಜೆನ್‌ಫೋನ್ 5 ಮತ್ತು ಜೆನ್‌ಫೋನ್ 4 ಅನ್ನು ಲಾಂಚ್ ಮಾಡಿತ್ತು.

ಲಾಂಚ್ ಆದ ಕೆಲವೇ ವಾರಗಳಲ್ಲಿ ಕಂಪೆನಿ ತನ್ನ ಈ ಮಾದರಿಯ ಫೋನ್‌ಗಳ 40,000 ದಷ್ಟು ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಬಳಕೆದಾರರು ಅತ್ಯುತ್ತಮ ಅಭಿರುಚಿಯನ್ನು ಈ ಫೋನ್‌ನೆಡೆಗೆ ನೀಡಿದ್ದಾರೆ ಎಂಬುದು ಇದರಿಂದ ತಿಳಿದು ಬರುವಂತಹ ಅಂಶವಾಗಿದೆ.

ಇದೀಗ ಸುದೀರ್ಘ ವಿರಾಮದ ನಂತರ, ಅಸೂಸ್ ಜೆನ್‌ಫೋನ್ 5 ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುತ್ತಿದೆ. ಇದರ ಬೆಲೆ ರೂ 10,000 ಆಗಿದ್ದು ಇದು ನಿಜಕ್ಕೂ ಆಕರ್ಷಕ ಬೆಲೆಯಲ್ಲಿ ಕಣ್ಮನ ಸೆಳೆಯುತ್ತಿದೆ ಎಂದೇ ಹೇಳಬಹುದು.

ಅಸೂಸ್ ಜೆನ್‌ಫೋನ್ 5 ಸ್ಮಾರ್ಟ್‌ಫೋನ್‌ನ ವಿಶೇಷತೆಗಳನ್ನು ಹೇಳುವುದಾದರೆ ಇದು 5 ಇಂಚಿನ (1280 x 720 pixels) ಸಾಮರ್ಥ್ಯವುಳ್ಳ ಟಚ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಗೋರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಈ ಫೋನ್ ಬಂದಿದೆ. ಈ ಫೋನ್ 2 GHz ಡ್ಯುಯಲ್ ಕೋರ್ ಇಂಟೆಲ್ ಆಟಮ್ Z2580 ಪ್ರೊಸೆಸರ್ ಅನ್ನು ಹೊಂದಿದ್ದು ಫೋನ್‌ನ RAM 1 ಜಿಬಿಯಾಗಿದೆ. ಡಿವೈಸ್ ಆಂಡ್ರಾಯ್ಡ್ 4.3 (ಜೆಲ್ಲಿಬೀನ್) ಅನ್ನು ಚಾಲನೆ ಮಾಡುತ್ತಿದ್ದು ಇದನ್ನು ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್‌ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಇನ್ನು ಫೋನ್‌ನ ಇತರ ವಿಶೇಷತೆಗಳನ್ನು ನೋಡಹೊರಟಾಗ ಇದು ಡ್ಯುಯಲ್ ಸಿಮ್‌ನೊಂದಿಗೆ ಬಂದಿದ್ದು ಮೈಕ್ರೋ ಸಿಮ್ ಅನ್ನು ಒಳಗೊಂಡಿದೆ.

ಫೋನ್‌ನ ರಿಯರ್ ಕ್ಯಾಮೆರಾ 8MP ಆಗಿದ್ದು ಮುಂಭಾಗ ಕ್ಯಾಮೆರಾ 2MP ಆಗಿದೆ. ಇದರ ಆಂತರಿಕ ಮೆಮೊರಿ ಶಕ್ತಿ 8GB / 16GB ಆಗಿದ್ದು ಇದರ ಸಂಗ್ರಹಣಾ ಶಕ್ತಿಯನ್ನು 64GB ಗೆ ವಿಸ್ತರಿಸಬಹುದಾಗಿದೆ. ಇನ್ನು ಸಂಪರ್ಕ ವ್ಯವಸ್ಥೆಗಳೆಂದರೆ 3G HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS ಮತ್ತು ಫೋನ್ 2110 mAh ಬ್ಯಾಟರಿಯನ್ನು ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Asus ZenFone 5 Now Made Officially Available 5 Best Online Deals To Buy Smartphone In India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot