Subscribe to Gizbot

ಅಸೂಸ್ ಜೆನ್‌ಫೋನ್ 5 ಆಕರ್ಷಕ ವೀಡಿಯೋ ವಿಮರ್ಶೆ

Posted By:

ತೈವಾನ್ ಮೂಲದ ಟ್ಯಾಬ್ಲೆಟ್/ಕಂಪ್ಯೂಟರ್ ತಯಾರಿಕಾ ಕಂಪೆನಿ ಅಸುಸ್ ಅಧಿಕೃತವಾಗಿ ಆಂಡ್ರಾಯ್ಡ್ ಚಾಲಿತ ಮೂರು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಜೆನ್‌ಪೋನ್ 4, ಜೆನ್‌ಫೋನ್ 5, ಜೆನ್‌ಫೋನ್ 6 ಹೆಸರಿನಲ್ಲಿ ಇದೀಗ ಭಾರತದಲ್ಲಿ ಲಾಂಚ್ ಆಗಿದೆ.

ಜೆನ್‌ಫೋನ್ 5 ಕಲ್ಲಿದ್ದಲ್ಲು ಕಪ್ಪು, ಮುತ್ತಿನ ಬಿಳಿ, ಚೆರ್ರಿ ಕೆಂಪು, ನೇರಳೆ ಮತ್ತು ಗೋಲ್ಡ್ ಬಣ್ಣಗಳಲ್ಲಿ ಬರುತ್ತಿದ್ದು ಇದರ ಬೆಲೆ ರೂ. 12,999 ಆಗಿದೆ. ಅಸೂಸ್ ಜೆನ್‌ಫೋನ್ 6 ಕೂಡ ಕಲ್ಲಿದ್ದಲ್ಲು ಕಪ್ಪು, ಮುತ್ತಿನ ಬಿಳಿ, ಚೆರ್ರಿ ಕೆಂಪು, ನೇರಳೆ ಮತ್ತು ಗೋಲ್ಡ್ ಬಣ್ಣಗಳಲ್ಲಿ ಬರುತ್ತಿದ್ದು ಇದರ ಬೆಲೆ ರೂ. 17,999 ಎಂದು ನಿರ್ಧರಿಸಲಾಗಿದೆ. ಜೆನ್‌ಪೋನ್ 4 ನ ಬೆಲೆ ರೂ5,999 ಆಗಿದೆ. ಈ ಹ್ಯಾಂಡ್‌ಸೆಟ್‌ಗಳು ಭಾರತದ ಮಾರುಕಟ್ಟೆಗೆ ಇತ್ತೀಚೆಗೆ ಆಗಮಿಸಿದ್ದು ಈ ಹ್ಯಾಂಡ್‌ಸೆಟ್ ಬಗೆಗಿನ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳೋಣ.

ಇದು 5-ಇಂಚಿನ (1280 x 720 ಪಿಕ್ಸೆಲ್‌ಗಳ) ಮಲ್ಟಿ ಟಚ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಗೋರಿಲ್ಲಾ ಗ್ಲಾಸ್ ಸುರಕ್ಷತೆ ಇದಕ್ಕಿದೆ. 2 GHz ಡ್ಯುಯೆಲ್ ಕೋರ್ ಇಂಟೆಲ್ ಆಟಮ್ Z2580 ಪ್ರೊಸೆಸರ್ ಇದರಲ್ಲಿದ್ದು 1ಜಿಬಿ RAM ನೊಂದಿಗೆ ಡಿವೈಸ್ ಬಂದಿದೆ. ಇದರಲ್ಲಿ ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ನೊಂದಿಗೆ Zen UI ಚಾಲನೆಯಾಗುತ್ತಿದ್ದು, ಇದನ್ನು ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್‌ಗೆ ನವೀಕರಿಸಬಹುದಾಗಿದೆ. ಇತರ ವಿಶೇಷತೆಗಳೆಂದರೆ ಡ್ಯುಯೆಲ್ ಸಿಮ್‌ನೊಂದಿಗೆ ಡ್ಯುಯೆಲ್ ಸ್ಟ್ಯಾಂಡ್‌ಬೈ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ, 8ಜಿಬಿ / 16ಜಿಬಿ ಆಂತರಿಕ ಮೆಮೊರಿ, ಇದನ್ನು ಮೈಕ್ರೋ ಎಸ್‌ಡಿ ಮೂಲಕ 64ಜಿಬಿ ಗೆ ವಿಸ್ತರಿಸಬಹುದಾಗಿದೆ. 3ಜಿ HSPA+, WiFi 802.11 b/g/n, ಬ್ಲ್ಯೂಟೂತ್ 4.0, GPS ಮತ್ತು ಬ್ಯಾಟರಿ ಸಾಮರ್ಥ್ಯ 2110 mAh ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಸೂಸ್ ಜೆನ್‌ಫೋನ್ 5

#1

ವಿನ್ಯಾಸ ಮತ್ತು ಆಪರೇಟಿಂಗ್ ಸಿಸ್ಟಮ್
10.34 ಎಮ್‌ಎಮ್, ಅಸೂಸ್ ಜೆನ್ ಫೋನ್ 5 ವಿಶ್ವದ ಸ್ಲಿಮ್ ಫೋನ್ ಎಂಬ ಟ್ಯಾಗ್ ಶಿಪ್ ಹೊಂದಿಲ್ಲದಿದ್ದರೂ, ಆಕರ್ಷಕ ಉತ್ಪನ್ನ ಎಂದು ಹೇಳುವಲ್ಲಿ ಯಾವುದೇ ಸಂದೇಹವಿಲ್ಲ. 5 ಇಂಚಿನ ಫ್ಯಾಬ್ಲೆಟ್ ಆಗಿದ್ದರೂ ಇದು ಲೈಟ್ ವೈಟ್ ಆಗಿದೆ. ಇದನ್ನು ಒಂದು ಕೈಯಲ್ಲಿ ಬಳಸಲು ಬಲು ಸುಲಭವಾಗಿದೆ. ಇದು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು ಬಲಯುತವಾದ ಯುಎಸ್‌ಪಿಯನ್ನು ಒಳಗೊಂಡಿದೆ. ಪವರ್ ಬಟನ್ ಮತ್ತು ವ್ಯಾಲ್ಯೂಮ್ ರಾಕರ್ ಕೀಗಳು ಬಲ ಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ.

ಅಸೂಸ್ ಜೆನ್‌ಫೋನ್ 5

#2

ಕ್ಯಾಮೆರಾ
ಇದು 8 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ ಮತ್ತು 3.5 ಎಮ್‌ಎಮ್‌ನ ಹೆಡ್‌ಫೋನ್ ಜಾಕ್ ಅನ್ನು ಮೇಲ್ಭಾಗದಲ್ಲಿ ಹೊಂದಿದೆ. ಮೈಕ್ರೋಯುಎಸ್‌ಬಿ ಚಾರ್ಗಿಂಗ್ ಪೋರ್ಟ್ ಕೆಳಭಾಗದಲ್ಲಿದೆ. ಪೋಲಿಕಾರ್ಬೊನೇಟ್ ಪ್ಲಾಸ್ಟಿಕ್‌ನಿಂದ ಈ ಫೋನ್ ಅನ್ನು ತಯಾರಿಸಲಾಗಿದೆ ಎಂಬುದನ್ನು ಹೊರತುಪಡಿಸಿ ಅಸೂಸ್ ಜೆನ್‌ಫೋನ್ 5 ನೋಡಲು ಅತ್ಯಾಕರ್ಷಕವಾಗಿದ್ದು ದುಬಾರಿ ಎಂಬಂತೆ ಕಾಣುತ್ತಿದೆ.

ಅಸೂಸ್ ಜೆನ್‌ಫೋನ್ 5

#3

ವೈಶಿಷ್ಟ್ಯ
ಅಸೂಸ್ ಜೆನ್‌ಫೋನ್ 5 ಆಂಡ್ರಾಯ್ಡ್ ಜೆಲ್ಲಿ ಬೀನ್ 4.3 ಯಲ್ಲಿ ಚಾಲನೆಯಾಗುತ್ತಿದೆ ಆದರೆ ಇದೇನೂ ಸಮಸ್ಯೆಯಲ್ಲ. ಇದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ನವೀಕರಣವನ್ನು ಕೂಡ ಸ್ವಲ್ಪ ಸಮಯದಲ್ಲೇ ಒದಗಿಸುತ್ತಿದೆ. ಇದರಲ್ಲಿ ಸಾಂಪ್ರದಾಯಿಕ ಮುಖ್ಯ ಪರದೆ ಇದ್ದು, ಅಧಿಸೂಚನೆ ಪಟ್ಟಿ ಮತ್ತು ಅಪ್ಲಿಕೇಶನ್ ಲಾಂಚರ್ ಇದೆ. ಅಸೂಸ್‌ನ ಸ್ಥಳೀಯ ಅಪ್ಲಿಕೇಶನ್ ಅಂದರೆ ಅಸೂಸ್ ವೆಬ್‌ಸ್ಟೋರೇಜ್ ಜೆನ್ ಲಿಂಕ್, ರಿಮೋಟ್ ಲಿಂಕ್ ಇತ್ಯಾದಿ.

ಅಸೂಸ್ ಜೆನ್‌ಫೋನ್ 5

#4

ಕಾರ್ಯಕ್ಷಮತೆ
ಜೆನ್‌ಫೋನ್ 5ನಲ್ಲಿ 1.6 GHZ ಡ್ಯುಯೆಲ್ ಕೋರ್ ಇಂಟೆಲ್ ಅಟೋಮ್ Z2560 ಪ್ರೊಸೆಸರ್ ಇದ್ದು 2 ಜಿಬಿ RAM ಇದರಲ್ಲಿ ಚಾಲನೆಯಾಗುತ್ತಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ 64ಜಿಬಿಗೆ ವಿಸ್ತರಿಬಹುದಾಗಿದೆ. ಇದು ಡ್ಯುಯೆಲ್ ಸಿಮ್ ಸೇವೆಯನ್ನು ಕೂಡ ಹೊಂದಿದೆ.

#5

ವೀಡಿಯೋ ನೋಟ
ನಾವು ಇಲ್ಲಿ ನೀಡಿರುವ ವೀಡಿಯೋದ ಮೂಲಕ ಫೋನ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

<center><iframe width="100%" height="510" src="//www.youtube.com/embed/khMtG7xAamg" frameborder="0" allowfullscreen></iframe></center>

English summary
This article tells that Asus Zenfone 5 smartphone hands on first look and review.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot