ಮಾರುಕಟ್ಟೆಗೆ ಆಸುಸ್ ಜೆನ್ ಫೋನ್ 5Z: ಬೆಲೆ ಕುರಿತ ಮಾಹಿತಿ ಲೀಕ್, ಒನ್ ಪ್ಲಸ್ ಬೇಡಿಕೆ ಕುಸಿತ..!

|

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್ ಪ್ಲಸ್ ಸ್ಮಾರ್ಟ್ ಫೋನ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಹೊಸದೊಂದು ಫಾಗ್ ಶಿಪ್ ಸ್ಮಾರ್ಟ್ ಫೋನ್ ಲಾಂಚ್ ಆಗುತ್ತಿದೆ. ಫ್ಲಿಪ್ ಕಾರ್ಟ್ ಜುಲೈ 4 ರಂದು ತೈವಾನ್ ಮೂಲದ ಆಸುಸ್ ಜೆನ್ ಫೋನ್ 5Z ಅನ್ನು ಲಾಂಚ್ ಮಾಡಲಿದ್ದು, ಹಲವು ಸ್ಮಾರ್ಟ್ ಫೋನ್ ಗಳು ಇದರಿಂದಾಗಿ ಸಾಕಷ್ಟು ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಆಸುಸ್ ಜೆನ್ ಫೋನ್ 5Z ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಮಾರುಕಟ್ಟೆಗೆ ಆಸುಸ್ ಜೆನ್ ಫೋನ್ 5Z: ಬೆಲೆ ಕುರಿತ ಮಾಹಿತಿ ಲೀಕ್..!

ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿರುವ ಆಸುಸ್ ಜೆನ್ ಫೋನ್ 5z ಬೆಲೆ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಸದ್ದು ಮಾಡಲಿದೆ. ಈಗಾಗಲೇ ಫ್ಲಿಪ್ ಕಾರ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸುಸ್, ಇದೇ ಮೊದಲ ಬಾರಿಗೆ ಟಾಪ್ ಎಂಡ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡುತ್ತಿದೆ. ಇದು ಮಾರುಕಟ್ಟೆಯಲ್ಲಿಯೂ ಹೊಸ ಸಾಧನೆಯನ್ನು ಮಾಡಲಿದೆ ಎನ್ನುವ ನಿರೀಕ್ಷೆ ಇದೆ.

ಇತರೆ ಫೋನ್ ಗಳಿಗೆ ಕಂಟಕ:

ಇತರೆ ಫೋನ್ ಗಳಿಗೆ ಕಂಟಕ:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನ ಬೆಲೆಯೂ ಆಗಲೇ ಲೀಕ್ ಆಗಿದ್ದು, ರೂ.29999ಕ್ಕೆ ಮಾರಾಟವಾಗಲಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸ್ಮಾರ್ಟ್ ಫೋನ್ ಗಳಿಗೆ ಕಂಟಕವಾಗಲಿದೆ. ಈಗಾಗಲೇ ಸದ್ದು ಮಾಡುತ್ತಿರುವ ಒನ್ ಪ್ಲಸ್ 6 ಮತ್ತು ಹಾನರ್ 10ಗಿಂತಲು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಎರಡು ಆವೃತ್ತಿ:

ಎರಡು ಆವೃತ್ತಿ:

ಆಸುಸ್ ಜೆನ್ ಫೋನ್ 5z ಮೂರು ಆವೃತ್ತಿಯಲ್ಲಿ ದೊರೆಯಲಿದೆ. 64GB, 128 GB ಮತ್ತು 256 GB ಆವೃತ್ತಿಯಲ್ಲಿ ಮಾರಾಟವಾಗಲಿದೆ. 64 GB ಆವೃತ್ತಿಯಲ್ಲಿ 6 GB RAM ಅನ್ನು ನೀಡಲಾಗಿದೆ. ಅದರೊಂದಿಗೆ 128 GB ಮತ್ತು 256 GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್ ಫೋನ್ 8 GB RAM ನೊಂದಿಗೆ ಮಾರಾಟವಾಗಲಿದೆ.

ಆಸುಸ್ ಜೆನ್ ಫೋನ್ 5z ಬೆಲೆ:

ಆಸುಸ್ ಜೆನ್ ಫೋನ್ 5z ಬೆಲೆ:

ಆಸುಸ್ ಜೆನ್ ಫೋನ್ 5z 64GB ಎಮೊರಿಯ ಸ್ಮಾರ್ಟ್ ಫೋನ್ ರೂ.29999ಕ್ಕೆ ಮಾರಾಟವಾಗಲಿದೆ. 128 GB ಆವೃತ್ತಿಯ ಸ್ಮಾರ್ಟ್ ಫೋನ್ ರೂ. 32999ಕ್ಕೆ ದೊರೆಯಲಿದೆ. ಇದರೊಂದಿಗೆ 256 GB ಆವೃತ್ತಿಯ ಸ್ಮಾರ್ಟ್ ಫೋನ್ 36999ಕ್ಕೆ ಮಾರಾಟವಾಗಲಿದೆ.

ಆಸುಸ್ ಜೆನ್ ಫೋನ್ 5z ಡಿಸ್ ಪ್ಲೇ:

ಆಸುಸ್ ಜೆನ್ ಫೋನ್ 5z ಡಿಸ್ ಪ್ಲೇ:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನಲ್ಲಿ 6.2 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, FHD+ ಗುಣಮಟ್ಟವನ್ನು ಹೊಂದಿದೆ. ಐಫೋನ್ X ಮಾದರಿಯಲ್ಲಿ ನೋಚ್ ಡಿಸ್ ಪ್ಲೇ ವಿನ್ಯಾಸವನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ. ಉತ್ತಮವಾದ ಪಿಚ್ಚರ್ ಕ್ವಾಲಿಟಿಯನ್ನು ಹೊಂದಿದ್ದು, ವಿಡಿಯೋ ನೋಡುವ ಮತ್ತು ಗೇಮ್ ಆಡುವ ಅನುಭವವು ಉತ್ತಮವಾಗಿದೆ.

ಆಸುಸ್ ಜೆನ್ ಫೋನ್ 5z ಪ್ರೋಸೆಸರ್:

ಆಸುಸ್ ಜೆನ್ ಫೋನ್ 5z ಪ್ರೋಸೆಸರ್:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನಲ್ಲಿ ಅತೀ ವೇಗದ ಪ್ರೋಸೆಸರ್ ಆಗಿರುವ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಅನ್ನು ಅಳವಡಿಲಾಗಿದ್ದು, ಇದರೊಂದಿಗೆ 8 GB RAM ಅನ್ನು ಸಹ ನೀಡಲಾಗಿದೆ. ಇದಲ್ಲದೇ 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಎಲ್ಲಾ ವಿಭಾಗದಲ್ಲಿಯೂ ಈ ಸ್ಮಾರ್ಟ್ ಫೋನ್ ಟಾಪ್ ಎಂಡ್ ಆಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 12 MP + 8 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಇದರಲ್ಲಿ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಹಲವು ಆಯ್ಕೆಯನ್ನು ನೀಡಲಾಗಿದೆ. ಇದ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದ್ದು, ಉತ್ತಮವಾದ ಸೆಲ್ಫಿಗಳನ್ನು ಸೆರೆಹಿಡಿಯಬಹುದಾಗಿದೆ.

ಬ್ಯಾಟರಿ:

ಬ್ಯಾಟರಿ:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನಲ್ಲಿ 3300mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದಲ್ಲದೇ ಆಂಡ್ರಾಯ್ಡ್ ಒರಿಯೋದೊಂದಿಗೆ ಜನ್ UI ಅನ್ನು ಅಳವಡಲಾಗಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಸಹಾಯವನ್ನು ಮಾಡಲಿದೆ. ಅಲ್ಲದೇ ಹೆಚ್ಚಿನ ಆಪ್ ಡೇಟ್ ಅನ್ನು ನೀಡಲಿದೆ.

Best Mobiles in India

English summary
Asus ZenFone 5z price leaked: Snapdragon 845 powers smartphone for just Rs 29,999. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X