Home
ಮೊಬೈಲ್

ಆಸುಸ್ ಜೆನ್ ಫೋನ್ 5Z Vs ಒನ್ ಪ್ಲಸ್ 6 : ಯಾವುದು ಬೆಸ್ಟ್..?

By Srinidhi

ಈಗಾಗಲೇ ಹಲವು ಮಂದಿ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಖರೀದಿ ಮಾಡಿದ್ದರೂ ಸಹ ಜೆನ್ ಫೋನ್ ಮೇಲೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಒಳ್ಳೆಯ ಸ್ಪರ್ಧೆಯನ್ನು ಹುಟ್ಟಿಹಾಕುತ್ತಿರುವ ಈ ಎರಡು ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಮುಂದಿದೆ.

ಆಸುಸ್ ಜೆನ್ ಫೋನ್ 5Z Vs ಒನ್ ಪ್ಲಸ್ 6 : ಯಾವುದು ಬೆಸ್ಟ್..?

ಬೆಲೆ ವಿಚಾರದಿಂದ ಹಿಡಿದು, ಡಿಸ್ ಪ್ಲೇ ವಿನ್ಯಾಗಳೆಲ್ಲೂ ಒಂದೇ ಮಾದರಿಯಲ್ಲಿದ್ದು, ಬಳಕೆದಾರರಿಗೆ ಎರಡರಲ್ಲೂ ಅಂತಹ ವ್ಯತ್ಯಾಸ ಕಾಣಿಸುವುದಿಲ್ಲ. ಆದರೆ ವಿಶೇಷತೆಯ ವಿಚಾರದಲ್ಲಿ ಹಲವು ಬದಲಾವಣೆಗಳಿದ್ದು, ಇದು ಹೆಚ್ಚಿನ ಪರಿಣಾಮವನ್ನು ಬಳಕೆದ ಮಾಡುವ ಸಂದರ್ಭದಲ್ಲಿ ಅನುಭವಕ್ಕೆ ಬರಲಿದೆ. ಈ ಹಿನ್ನಲೆಯಲ್ಲಿ ಆಸುಸ್ ಜೆನ್ ಫೋನ್ 5Z ಸ್ಮಾರ್ಟ್ ಫೋನ್ ಮತ್ತು ಒನ್ ಪ್ಲಸ್ 6 ಸ್ಮಾರ್ಟ್ ಫೋನಿನ ನಡುವಿನ ವ್ಯತ್ಯಾಸವೇನು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ವಿನ್ಯಾಸ:

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ವಿನ್ಯಾಸ:

ವಿನ್ಯಾಸದಲ್ಲಿ ಈ ಎರಡು ಸ್ಮಾರ್ಟ್ ಫೋನ್ ಕೊಂಚ ವ್ಯತ್ಯಾಸವನ್ನು ಹೊಂದಿವೆ. ಒನ್ ಪ್ಲಸ್ 6 ನಲ್ಲಿ ಕೆಲವು ಡಿಸೈನ್ ಮತ್ತು ಬಣ್ಣಗಳನ್ನು ಹೊಂದಿರುವುದು ಹೆಚ್ಚಿನ ಬೆಲೆಗೆ ಮಾರಾಟವಾದರೆ, ಜೆನ್ ಫೋನ್ Z5ನಲ್ಲಿ ಲಭ್ಯವಿರುವ ಎಲ್ಲಾ ಬಣ್ಣಗಳು ಎಲ್ಲಾ ಆವೃತ್ತಿಯಲ್ಲಿಯೂ ದೊರೆಯುತ್ತಿದೆ. ಜೆನ್ ಫೋನ್ Z5 ಕಡಿಮೆ ತೂಕದಿಂದ ಕೂಡಿದ್ದು, ನೋಡಲು ಸಣ್ಣದಾಗಿದೆ. ಆದರೆ ಒನ್ ಪ್ಲಸ್ 6 ಸ್ವಲ್ಪ ದೊಡ್ಡದಾಗಿ ಮತ್ತು ತೂಕವಾಗಿದೆ ಎನ್ನಬಹುದಾಗಿದೆ.

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ಡಿಸ್ ಪ್ಲೇ:

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ಡಿಸ್ ಪ್ಲೇ:

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ಎರಡರಲ್ಲೂ ನೋಚ್ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಎರಡೂ 19:9 ಅನುಪಾತ ದಿಂದ ಕೂಡಿದೆ. ಒನ್ ಪ್ಲಸ್ 6 ನಲ್ಲಿ ಅಮೊಲೈಡ್ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ಆಸುಸ್ ಜೆನ್ ಫೋನ್ 5Z ನಲ್ಲಿ IPS LCD ಡಿಸ್ ಪ್ಲೇ ಇದೆ. ಎರಡು ಸಹ ಉತ್ತಮ ಆಂಗಲ್ ವ್ಯೂವನ್ನು ಹೊಂದಿದೆ ಮತ್ತು ರಿಚ್ ಬಣ್ಣಗಳನ್ನು ಕಾಣಬಹುದಾಗಿದೆ. ಅಲ್ಲದೇ FHD + ಗುಣಮಟ್ಟವನ್ನು ಹೊಂದಿದೆ.

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ವಿಶೇಷತೆ:

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ವಿಶೇಷತೆ:

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ಎರಡರಲ್ಲಿಯೂ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಎರಡೂ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದರಲ್ಲಿ ಪ್ರಮುಖ ವ್ಯತ್ಯಾಸ ಎಂದರೆ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಎಕ್ಸಟನಲ್ ಮೆಮೊರಿಯನ್ನು ಸಪೋರ್ಟ್ ಮಾಡುವುದಿಲ್ಲ. ಆದರೆ ಆಸುಸ್ ಜೆನ್ ಫೋನ್ 5Z ಹೆಚ್ಚುವರಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಒನ್ ಪ್ಲಸ್ ಆಂಡ್ರಾಯ್ಡ್ 8 ಸಪೋರ್ಟ್ ಮಾಡಲಿದೆ. ಆದರೆ ಆಸುಸ್ ಜೆನ್ ಫೋನ್ 5Z ಈ ಕುರಿತು ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ಕ್ಯಾಮೆರಾ;

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ಕ್ಯಾಮೆರಾ;

ಆಸುಸ್ ಜೆನ್ ಫೋನ್ 5Z ಮತ್ತು ಒನ್ ಪ್ಲಸ್ 6 ಎರಡರಲ್ಲಿಯೂ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಎರಡು ಸ್ಮಾರ್ಟ್ ಫೋನ್ ಗಳು ಉತ್ತಮ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿವೆ. ಇದಲ್ಲದೇ ಸೆಲ್ಪಿ ತೆಗೆಯುವಲ್ಲಿಯೂ ಎರಡು ಕ್ಯಾಮೆರಾಗಳು ಗುಣಮಟ್ಟವನ್ನು ಹೊಂದಿದ್ದು, ಬಳಕೆದಾರರಿಗೆ ಉತ್ತಮವಾಗಿ ಚಿತ್ರಗಳನ್ನು ಕ್ಲಿಕಿಸಲು ಸುಲಭವಾಗುವಂತಹ ಸಾಫ್ಟ್ ವೇರ್ ಗಳನ್ನು ಒಳಗೊಂಡಿದೆ.

Best Mobiles in India

English summary
Asus ZenFone 5Z vs OnePlus 6. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+