‘ಝೆನ್​ಫೋನ್​ 6‘ ರಿಲೀಸ್!..ಇದರಲ್ಲಿ ಸೆಲ್ಫಿ ಮತ್ತು ಬ್ಯಾಕ್​ ಕ್ಯಾಮೆರಾ ಒಂದೇ!!

|

ಆಸುಸ್ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ಝೆನ್​ಫೋನ್​ 6' ವಿಶ್ವ ಮೊಬೈಲ್ ಮಾರುಕಟ್ಟೆಯನ್ನು ವಿಶಿಷ್ಟ ರೀತಿಯಲ್ಲಿ ಗಮನಸೆಳೆಯುವಲ್ಲಿ ಸಫಲವಾಗಿದೆ. ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಒಂದು ಫ್ಲಿಪ್​ ಕ್ಯಾಮೆರಾ​ವನ್ನು ಹೊತ್ತು ಬಂದಿದ್ದು, ಝೆನ್​ಫೋನ್​ 6'ಫೋನ್ ಕ್ಯಾಮೆರಾವು ಸೆಲ್ಫಿ ಮತ್ತು ಬ್ಯಾಕ್​ ಕ್ಯಾಮೆರಾವಾಗಿ ಮಾರ್ಪಾಡಾಗುತ್ತದೆ ಎಂದು ಆಸುಸ್ ತಿಳಿಸಿದೆ.

ಹೌದು, 'ಝೆನ್​ಫೋನ್​ 6' ಸ್ಮಾರ್ಟ್​ಫೋನಿನಲ್ಲಿ ಮೊದಲ ಬಾರಿಗೆ ಫ್ಲಿಪ್​ ಕ್ಯಾಮೆರಾ​ವನ್ನು ಅಳವಡಿಸಲಾಗಿದೆ. ಈ ಫೋನಿನಲ್ಲಿ ಸೆಲ್ಫಿಗಾಗಿಯೇ ಪ್ರತ್ಯೇಕ ಕ್ಯಾಮೆರಾವನ್ನು ಒದಗಿಸಿಲ್ಲ. ಏಕೆಂದರೆ, ಇದರಲ್ಲಿನ ಕ್ಯಾಮೆರಾವು ಏಕಕಾಲದಲ್ಲಿ ಸೆಲ್ಫೀ ಮತ್ತು ರಿಯರ್ ಕ್ಯಾಮೆರಾವಾಗಿ ಮಾರ್ಪಾಡಾಗಲಿದ್ದು, ಸೆಲ್ಫೀ ತೆಗೆಯುವಾಗ ಫೋನ್​ನಲ್ಲಿರುವ ಬ್ಯಾಕ್​ ಕ್ಯಾಮೆರಾವೇ ಮುಂಬದಿಗೆ ತಿರುಗುತ್ತದೆ.

‘ಝೆನ್​ಫೋನ್​ 6‘ ರಿಲೀಸ್!..ಇದರಲ್ಲಿ ಸೆಲ್ಫಿ ಮತ್ತು ಬ್ಯಾಕ್​ ಕ್ಯಾಮೆರಾ ಒಂದೇ!!

180 ಡಿಗ್ರಿಗಳಷ್ಟು ಕೋನದಲ್ಲಿ ಫ್ಲಿಪ್ ಮಾಡಬಹುದಾದ ಸೆಲ್ಫೀ ಕ್ಯಾಮೆರಾ ಜತೆಗೆ ಅತ್ಯಾಧುನಿಕ ಸ್ನ್ಯಾಪ್‌ಡ್ರ್ಯಾಗನ್ 855 ಪ್ರೊಸೆಸರ್ ಇರುವ ಅತ್ಯಂತ ಅಗ್ಗದ ಪ್ರೀಮಿಯಂ ಫೋನ್ ಎಂಬ ಹೆಗ್ಗಳಿಕೆಯೊಂದಿಗೆ ಝೆನ್‌ಫೋನ್ 6 ಅನ್ನು ಸ್ಪೇನ್‌ನಲ್ಲಿ ಘೋಷಿಸಲಾಗಿದೆ. ಹಾಗಾದರೆ, ಬಹುನಿರೀಕ್ಷಿತ 'ಝೆನ್​ಫೋನ್​ 6' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ಝೆನ್​​ಫೋನ್​ 6?

ಹೇಗಿದೆ ಝೆನ್​​ಫೋನ್​ 6?

​6.4 ಇಂಚಿನ ಐಪಿಎಸ್ ಫುಲ್ HD+ ಡಿಸ್​ಪ್ಲೇಯನ್ನು ಹೊಂದಿರುವ ಈ ಫೋನಿನಲ್ಲಿ ಎಲ್​ಸಿಡಿ ಮಾದರಿಯ ಸ್ಕ್ರೀನ್​ ಅಳವಡಿಸಲಾಗಿದೆ. ಪ್ರೀಮಿಯಂ ಲುಕ್‌ನಲ್ಲಿರುವ ಡಿಸ್​​ಪ್ಲೇ ಕರ್ವ್​ ಮಾದರಿಯಲ್ಲಿದ್ದು, ನೋಚ್ ಇಲ್ಲದ ಡಿಸ್‌ಪ್ಲೇಯನ್ನು ಆನಂದಿಸಬಹುದು. ಇನ್ನು ಗಾಜು ಮತ್ತು ಲೋಹದ ವಿನ್ಯಾಸದೊಂದಿಗೆ ಆಕರ್ಷಕವಾಗಿರುವ ಪ್ರೀಮಿಯಂ ಲುಕ್ ಆಕರ್ಷಿಸುವಂತಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಝೆನ್​​ಫೋನ್​ 6 ಸ್ಮಾರ್ಟ್​ಫೋನ್ ಸ್ನ್ಯಾಪ್​​ ಡ್ರಾಗನ್​​ 8555 ಪ್ರೊಸೆಸರ್ ಜೊತೆಗೆ 6 GB ಮತ್ತು 8 GB RAM ಮಾದರಿಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ. 6 ಜಿಬಿ ಮತ್ತು 8 ಜಿಬಿ RAM ಹಾಗೂ 64, 128 ಮತ್ತು 256 ಜಿಬಿ ಆಂತರಿಕ ಮೆಮೊರಿ ಇರುವ ಆವೃತ್ತಿಗಳು ಲಭ್ಯ ಇರಲಿವೆ. ಜೊತೆಗೆ ಆಂಡ್ರಾಯ್ಡ್ 9.0 ಪೈ ಒಎಸ್ಸ್‌ನಲ್ಲಿನ ಈ ಫೋನ್ ಆಂಡ್ರಾಯ್ಡ್ Qಗೆ ಅಪ್‌ಗ್ರೇಡ್ ಆಗಬಲ್ಲುದು.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಝೆನ್​​ಫೋನ್​ 6ನಲ್ಲಿ ಸೋನಿ IMX​586 ಸೆನ್ಸಾರ್​​ದೊಂದಿಗೆ 48 ಮೆಗಾಫಿಕ್ಸೆಲ್​​ ಕ್ಯಾಮೆರಾ ಹಾಗೂ ವೈಲ್ಡ್​​ ಆಂಗಲ್​ ಲೆನ್ಸ್​​ನೊಂದಿದೆ 13 ಮೆಗಾಫಿಕ್ಸೆಲ್​​​ ಸಾಮರ್ಥ್ಯದ ಸೆಕೆಂಡರಿ ಕ್ಯಾಮೆರಾವನ್ನು ನೀಡಲಾಗಿದೆ. 180 ಡಿಗ್ರಿಗಳಷ್ಟು ಕೋನದಲ್ಲಿ ಫ್ಲಿಪ್ ಮಾಡಬಹುದಾದ ಇದೇ ಕ್ಯಾಮೆರಾ ಸೆಲ್ಫಿ ಮತ್ತು ಬ್ಯಾಕ್​ ಕ್ಯಾಮೆರಾವಾಗಿ ಮಾರ್ಪಾಡಾಗುವುದು ಫೋನಿನ ಪ್ರಮುಖ ವಿಶೇಷತೆ ಎನ್ನಬಹುದು.

ಬ್ಯಾಟರಿ ಮತ್ತು ಫೀಚರ್ಸ್?

ಬ್ಯಾಟರಿ ಮತ್ತು ಫೀಚರ್ಸ್?

ಝೆನ್​ಫೋನ್ ​6 ಸ್ಮಾರ್ಟ್​ಫೋನಿನಲ್ಲಿ​​ ದೀರ್ಘಕಾಲದ ಬಳಕೆಗಾಗಿ 5000mAh​ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದರೊಂದಿದೆ 4.0 ವೇಗದ ಚಾಜಿಂಗ್​ ಸೌಲಭ್ಯವನ್ನು ನೀಡಲಾಗಿದೆ. ಸ್ಮಾರ್ಟ್‌ಪೋನಿನಲ್ಲಿ ಮೂರು ಕಾರ್ಡ್ ಸ್ಲಾಟ್‌ಗಳು ಮತ್ತು ಹಿಂಭಾಗದ ಕವಚದಲ್ಲೇ ಫಿಂಗರ್ ಪ್ರಿಂಟ್ ಆಯ್ಕೆಯನ್ನು ಅಳವಡಿಸಿರುವುದನ್ನು ನಾವು ಗಮನಿಸಬಹುದಾಗಿದೆ.

ಫೋನ್ ಬೆಲೆ ಎಷ್ಟು?

ಫೋನ್ ಬೆಲೆ ಎಷ್ಟು?

ಯೂರೋಪ್‌ನಲ್ಲಿ ಲಾಂಚ್ ಆಗಿರುವ ಫೋನ್ ಬೆಲೆ 499 ಯೂರೋಗಳಿಂದ ಆರಂಭವಾಗಿದೆ. ಅಂದರೆ ಭಾರತದಲ್ಲಿ ಸುಮಾರು 39 ಸಾವಿರ ರೂ.ಗಳಿಂದ ಫೋನ್ ಬೆಲೆ ಶುರುವಾಗಲಿದೆ. 6 RAM ಮತ್ತು 64GB ಮಾದರಿ ಫೋನ್​ ಬೆಲೆ 39,000 ರೂ.ಗಳಾಗಿದ್ದರೆ, 6GB ಮತ್ತು 128 ಮಾದರಿ ಬೆಲೆ 44,00 ರೂ. ಹಾಗೂ 8 GB ಮತ್ತು 256 GB ಮಾದರಿ ಬೆಲೆ 47,000 ರೂ. ಆಗಿರಬಹದು

Best Mobiles in India

English summary
The Zenfone 6 is Asus's most powerful smartphone, featuring a unique mechanicalflip camera, a Snapdragon 855 processor and a 5,000mAh battery. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X