ಕೊಡುವ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನೇ ಹೊಂದಿರುವ ಆಸುಸ್ ಜೆನ್‌ಫೋನ್ ಗೋ 5.5 : ಬೆಲೆ, ವಿಶೇಷತೆಗಳು

Written By:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ವಹಿವಾಟು ನಡೆಸುತ್ತಿರುವ ಕಾರಣ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್‌ಗಳ ನಿರ್ಮಾಣದ ಕಡೆಗೆ ಒಲವು ತೋರಿಸಿವೆ. ಇದೇ ಹಾದಿಯಲ್ಲಿ ಸಾಗಿರುವ ಆಸುಸ್ ಕಂಪನಿ ತನ್ನ ಜೆನ್ ಫೋನ್ ಸರಣಿಯನ ನೂತನ ಫೋನ್ ಜೆನ್‌ಫೋನ್ ಗೋ 5.5 ಲಾಂಚ್ ಮಾಡಿದೆ.

ಕೊಡುವ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನೇ ಹೊಂದಿರುವ ಆಸುಸ್ ಜೆನ್‌ಫೋನ್ ಗೋ 5.5

ಜೆನ್‌ಫೋನ್ ಗೋ 5.5 ರೂ. 8,499ಕ್ಕೆ ಮಾರಾಟವಾಗಲಿದ್ದು, ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್‌ನಲ್ಲಿ ಮಾತ್ರವೇ ಲಭ್ಯವಿದೆ. ಬ್ಲಾಕ್ ಮತ್ತು ರೆಡ್ ಬಣ್ಣದಲ್ಲಿ ಈ ಫೋನ್ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಜೆನ್‌ಫೋನ್ ಗೋ 5.5 ವಿಶೇಷತೆಗಳೇನು ಎಂಬುದನ್ನು ಮುಂದೆ ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚಿನ ಡಿಸ್‌ಪ್ಲೇ:

5.5 ಇಂಚಿನ ಡಿಸ್‌ಪ್ಲೇ:

ಜೆನ್‌ಫೋನ್ ಗೋ 5.5 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ IPS ಡಿಸ್‌ಪ್ಲೇ ಇದ್ದು, 720X1280 ಗುಣಮಟ್ಟವನ್ನು ಹೊಂದಿದೆ. ವಿಡಿಯೋ ನೋಡಲು, ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

2GB RAM:

2GB RAM:

ಜೆನ್‌ಫೋನ್ ಗೋ 5.5 ಸ್ಮಾರ್ಟ್‌ಫೋನಿನಲ್ಲಿ 2GB of RAM ಅಳವಡಿಸಲಾಗಿದ್ದು, ಇದರೊಂದಿಗೆ 16GB ಇಂಟರ್ನಲ್ ಮೆಮೊರಿ ಸಹ ಇದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಈ ಫೋನಿನಲ್ಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಜೆನ್‌ಫೋನ್ ಗೋ 5.5 ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 1.0 GHz ವೇಗದ ಕ್ವಾಡ್‌ಕೋರ್ ಕ್ವಾಲಕಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಅಳವಡಿಸಲಾಗಿದ್ದು, ಇದರೊಂದಿಗೆ ಗ್ರಾಫಿಕ್ಸ್ ಗಾಗಿ ಆಂಡ್ರಿನೋ 306 GPU ಸಹ ಇದರಲ್ಲಿದೆ.

13 MP/5 MP ಕ್ಯಾಮೆರಾ:

13 MP/5 MP ಕ್ಯಾಮೆರಾ:

ಜೆನ್‌ಫೋನ್ ಗೋ 5.5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ LED ಫ್ಲಾಷ್ ಲೈಟ್ ಸಹ ಇದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಉತ್ತಮ ಫೋಟೋಗಳನ್ನು ತೆಗೆಯುವ ಸಲುವಾಗಿಯೇ ಪಿಕ್ಸಲ್ ಮಾಸ್ಟರ್ ಆಪ್ ಅನ್ನು ನೀಡಿದೆ.

ಆಂಡ್ರಾಯ್ಡ್ 6.0:

ಆಂಡ್ರಾಯ್ಡ್ 6.0:

ಜೆನ್‌ಫೋನ್ ಗೋ 5.5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 6.0ದಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಲ್ಲದೇ ಇದರೊಂದಿಗೆ ZenUI 3.0 ಸಹ ಇದರಲ್ಲಿ ಇರಲಿದೆ. ಅಲ್ಲದೇ 3000mAh ಬ್ಯಾಟರಿ ಈ ಫೋನಿನಲ್ಲಿ ಅಳವಡಿಸಲಾಗಿದ್ದು, 4G VoLTE ಸಪೋರ್ಟ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Asus has added another member to its Zenfone series by launching an affordable Zenfone Go 5.5 (ZB552KL) smartphone in India. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot