ಕೇವಲ ₹5,999ಕ್ಕೆ ಹೊಸ ಆಸುಸ್‌ ಜೆನ್‌ಫೋನ್..! ಇಷ್ಟು ಕಮ್ಮಿ ಬೆಲೆಗೆ ಮತ್ಯಾವುದು ಇಲ್ಲ..!

|

ಭಾರತೀಯ ಸ್ಮಾರ್ಟ್‌ಫೋನ್‌ ಜಗತ್ತಿಗೆ ಆಸುಸ್‌ ಇಂದು ZenFone Max M1 (ZB556KL) ಮತ್ತು ZenFone Lite L1 (ZA551KL) ಎರಡು ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಮಧ್ಯಮ ವರ್ಗದ ಸ್ಮಾರ್ಟ್‌ಫೋನ್‌ ಗ್ರಾಹಕರನ್ನು ಆಕರ್ಷಿಸುತ್ತಿವೆ. ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ರಿಯರ್‌ ಕ್ಯಾಮೆರಾ ಹಾಗೂ ಸ್ನಾಪ್‌ಡ್ರಾಗನ್‌ 430 ಪ್ರೊಸೆಸರ್‌ ಹೊಂದಿದ್ದು, ನೋಚ್‌ ಇಲ್ಲದ ಸ್ಪೋರ್ಟ್ಸ್‌ ಡಿಸ್‌ಪ್ಲೇ ಹೊಂದಿವೆ. ಎರಡು ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯ ಜತೆಗೆ ಲಾಂಚಿಂಗ್‌ ಆಫರ್‌ಗಳನ್ನು ಹೊಂದಿದ್ದು, ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ದೊರೆಯಲಿವೆ.

ಕೇವಲ ₹5,999ಕ್ಕೆ ಹೊಸ ಆಸುಸ್‌ ಜೆನ್‌ಫೋನ್.! ಇಷ್ಟು ಕಮ್ಮಿ ಬೆಲೆಗೆ ಮತ್ಯಾವುದಿಲ್ಲ

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ದಿನಕ್ಕೊಂದು ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುತ್ತಿವೆ. ಈಗ ಆ ಪಟ್ಟಿಗೆ ಆಸುಸ್‌ನ ಎರಡು ಸ್ಮಾರ್ಟ್‌ಫೋನ್‌ಗಳು ಸೇರಿದ್ದು, ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ನೀಡುತ್ತಿವೆ. ಈ ಮೂಲಕ ಶಿಯೋಮಿ, ನೋಕಿಯಾ ಮತ್ತು ರಿಯಲ್‌ಮಿಯಂತಹ ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವ ಕಂಪನಿಗಳಿಗೆ ಭಾರೀ ತಲೆನೋವನ್ನು ತಂದಿಟ್ಟಿದೆ. ಆಗಿದ್ದರೆ ಎರಡು ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್‌ ಹೊಂದಿವೆ..? ಬೆಲೆ ಎಷ್ಟು..? ಎಂಬುದನ್ನು ಮುಂದೆ ನೋಡಿ.

ಆಸುಸ್‌ ಜೆನ್‌ಫೋನ್‌ ಮ್ಯಾಕ್ಸ್‌ M1 (ZB556KL)

ಆಸುಸ್‌ ಜೆನ್‌ಫೋನ್‌ ಮ್ಯಾಕ್ಸ್‌ M1 (ZB556KL)

ಹೊಸ ಜೆನ್‌ಫೋನ್‌ ಮ್ಯಾಕ್ಸ್‌ M1 ಸ್ಮಾರ್ಟ್‌ಫೋನ್‌ 5.45 ಇಂಚು HD+ IPS ಡಿಸ್‌ಪ್ಲೇ ಹೊಂದಿದ್ದು, 720 x 1440 ಪಿಕ್ಸೆಲ್ಸ್‌ನ 18:9 ಆಸ್ಪೆಕ್ಟ್‌ ರೇಷಿಯೋ ಸ್ಕ್ರೀನ್‌ ಹೊಂದಿದೆ. ಶೇ.82ರಷ್ಟು ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಹೊಂದಿದ್ದು, ಉತ್ತಮ ವೀಕ್ಷಣಾ ಅನುಭವವನ್ನು ನೀಡಲಿದೆ.

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ

ಜೆನ್‌ಫೋನ್‌ ಮ್ಯಾಕ್ಸ್‌ M1 ಆಂಡ್ರಾಯ್ಡ್‌ ಒರಿಯೋ ಆಧಾರಿತ ZenUI 5.0 ಒಎಸ್‌ನಿಂದ ಕಾರ್ಯನಿರ್ವಹಿಸಲಿದ್ದು, ಸ್ನಾಪ್‌ಡ್ರಾಗನ್‌ 430 ಕ್ವಾಡ್‌ ಕೋರ್‌ ಪ್ರೊಸೆಸರ್‌ ಹೊಂದಿದೆ. ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಆಗಿರುವ ಜೆನ್‌ಫೋನ್‌ ಮ್ಯಾಕ್ಸ್‌ M1 3GB RAM + 32GB ಆಂತರಿಕ ಮೆಮೊರಿಯನ್ನು ಹೊಂದಿರಲಿದೆ. ಮೆಮೊರಿಯನ್ನು ಮೈಕ್ರೋ SD ಕಾರ್ಡ್‌ ಮೂಲಕ 256GBವರೆಗೂ ವಿಸ್ತರಿಸುವ ಆಯ್ಕೆಯಿದೆ.

ಕ್ಯಾಮೆರಾ

ಕ್ಯಾಮೆರಾ

ಆಸುಸ್ ಜೆನ್‌ಫೋನ್‌ ಮ್ಯಾಕ್ಸ್‌ M1 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ 13MP ಸಿಂಗಲ್‌ ರಿಯರ್‌ ಕ್ಯಾಮೆರಾ ಇದೆ. f/2.0 ಅಪಾರ್ಚರ್ ಹಾಗೂ 1.12 um ಪಿಕ್ಸೆಲ್‌ ಗಾತ್ರ ಹೊಂದಿರುವ ಕ್ಯಾಮೆರಾ ವ್ಯವಸ್ಥೆ PDAF ಮತ್ತು LED ಫ್ಲಾಶ್‌ ಹೊಂದಿದೆ. ಇನ್ನು ಮುಂಭಾಗದಲ್ಲಿ 8MP ಕ್ಯಾಮೆರಾ ಇದ್ದು, f/2.2 ಅಪಾರ್ಚರ್ ಹಾಗೂ 1.12 um ಪಿಕ್ಸೆಲ್‌ ಗಾತ್ರದ ಜತೆಗೆ LED ಫ್ಲಾಶ್‌ ಹೊಂದಿದೆ. ಬ್ಯೂಟಿ ಫಿಲ್ಟರ್ಸ್‌, ಪೋರ್ಟರೇಟ್‌ ಮೋಡ್‌ ಮತ್ತು HDR ಮೋಡ್‌ಗಳನ್ನು ಕ್ಯಾಮೆರಾ ಫೀಚರ್ಸ್‌ ಪಟ್ಟಿಯಲ್ಲಿ ಕಾಣಬಹುದು.

ಬ್ಯಾಟರಿ ಮತ್ತೀತರ ಫೀಚರ್ಸ್‌

ಬ್ಯಾಟರಿ ಮತ್ತೀತರ ಫೀಚರ್ಸ್‌

ಜೆನ್‌ಫೋನ್‌ ಮ್ಯಾಕ್ಸ್‌ M1 4,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘಾವಧಿ ಬ್ಯಾಟರಿ ಅನುಭವವನ್ನು ನೀಡಲಿದೆ. ಅದಲ್ಲದೇ ವೇಗದ ಚಾರ್ಜಿಂಗ್‌ಗೆ ಸ್ಮಾರ್ಟ್‌ಫೋನ್‌ ಬೆಂಬಲಿಸುತ್ತಿದ್ದು, 10W ಅಡಾಪ್ಟರ್‌ ಜತೆ ಬರಲಿದೆ. ಇನ್ನು Wi-Fi 80211 b/g/n, Bluetooth v4.0, APGPS, GPS, GLONASS ಮತ್ತೀತರ ಸಂಪರ್ಕ ಸಾಧ್ಯತೆಗಳನ್ನು ಸ್ಮಾರ್ಟ್‌ಫೋನ್‌ ನೀಡುತ್ತದೆ.

ಬೆಲೆ ಎಷ್ಟು ಗೊತ್ತಾ..?

ಬೆಲೆ ಎಷ್ಟು ಗೊತ್ತಾ..?

ಕಪ್ಪು ಮತ್ತು ಚಿನ್ನದ ವರ್ಣಗಳ ಎರಡು ಆವೃತ್ತಿಯಲ್ಲಿ ದೊರೆಯುವ ಆಸುಸ್ ಜೆನ್‌ಫೋನ್‌ ಮ್ಯಾಕ್ಸ್‌ M1 ಸ್ಮಾರ್ಟ್‌ಫೋನ್‌ ಭಾರತದಲ್ಲಿ ₹ 8,999ಕ್ಕೆ ಲಭ್ಯವಾಗಲಿದೆ. ಆದರೆ, ಹಬ್ಬದ ಅವಧಿಯಾಗಿರುವುದರಿಂದ ನೀವು ಸ್ಮಾರ್ಟ್‌ಫೋನ್‌ನ್ನು ₹ 7,499ಕ್ಕೆ ಖರೀದಿಸಬಹುದಾಗಿದೆ. ಜಿಯೋದಿಂದ ₹ 2,200 ಕ್ಯಾಶ್‌ಬ್ಯಾಕ್‌ ಮತ್ತು 50GB ಹೆಚ್ಚುವರಿ ಡೇಟಾ ಆಫರ್‌ ಕೂಡ ಲಭ್ಯವಾಗಲಿದ್ದು, ₹ 399 ಮೌಲ್ಯದ ಸಂಪೂರ್ಣ ಮೊಬೈಲ್‌ ರಕ್ಷಣೆ (ಕಳ್ಳತನ ರಕ್ಷಣೆ) ಪ್ಲಾನ್‌ ಕೇವಲ ₹ 99ಕ್ಕೆ ಲಭ್ಯವಾಗಲಿದೆ. ಅದಲ್ಲದೇ ಫ್ಲಿಪ್‌ಕಾರ್ಟ್‌ 6 ತಿಂಗಳವರೆಗೆ No Cost EMI ಸೌಲಭ್ಯದ ಆಫರ್‌ ಕೂಡ ನೀಡಲಿದ್ದು, ಉತ್ತಮ ಬೆಲೆಗೆ ಆಸುಸ್ ಜೆನ್‌ಫೋನ್‌ ಮ್ಯಾಕ್ಸ್‌ M1 ನಿಮ್ಮದಾಗಲಿದೆ.

ಆಸುಸ್‌ ಜೆನ್‌ಫೋನ್‌ ಲೈಟ್‌ L1 (ZA551KL)

ಆಸುಸ್‌ ಜೆನ್‌ಫೋನ್‌ ಲೈಟ್‌ L1 (ZA551KL)

ಜೆನ್‌ಫೋನ್‌ ಮ್ಯಾಕ್ಸ್‌ M1 ಜತೆಗೆ ಆಸುಸ್ ಮತ್ತೊಂದು ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಿದೆ. ಹೊಸ ಜೆನ್‌ಫೋನ್‌ ಲೈಟ್‌ L1 ಸ್ಮಾರ್ಟ್‌ಫೋನ್‌ 13MP ರಿಯರ್‌ ಕ್ಯಾಮೆರಾ, 5.45 ಇಂಚು HD+ IPS ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್‌ ಒರಿಯೋ ಆಧಾರಿತ ZenUI 5.0 ಒಎಸ್‌, ಸ್ನಾಪ್‌ಡ್ರಾಗನ್‌ 430 ಕ್ವಾಡ್‌ ಕೋರ್‌ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹೀಗೆ ಹಲವು ಫೀಚರ್ಸ್‌ಗಳಲ್ಲಿ ಸಾಮ್ಯತೆಗಳನ್ನು ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಹೊಂದಿವೆ.

ಮತ್ತೀತರ ಫೀಚರ್ಸ್‌

ಮತ್ತೀತರ ಫೀಚರ್ಸ್‌

ಜೆನ್‌ಫೋನ್‌ ಲೈಟ್‌ L1 ಸ್ಮಾರ್ಟ್‌ಫೋನ್‌ ಮುಂಭಾಗದಲ್ಲಿ ಸ್ಪೋರ್ಟ್ಸ್‌ 5MP ಸೆನ್ಸಾರ್‌ ಕ್ಯಾಮೆರಾ ಹೊಂದಿದ್ದು, f/2.2 ಅಪಾರ್ಚರ್ ಹಾಗೂ 1.12 um ಪಿಕ್ಸೆಲ್‌ ಗಾತ್ರದ ಜತೆಗೆ LED ಫ್ಲಾಶ್‌ ಹೊಂದಿದೆ. 2GB RAM + 16GB ಆಂತರಿಕ ಮೆಮೊರಿ ಇದ್ದು, ಮೈಕ್ರೋ SD ಕಾರ್ಡ್‌ ಮೂಲಕ 256GBವರೆಗೆ ಮೆಮೊರಿಯನ್ನು ವಿಸ್ತರಿಸಬಹುದು. ಭದ್ರತೆಗಾಗಿ ಫೇಸ್‌ ಅನ್‌ಲಾಕ್‌ ಫೀಚರ್‌ ಇದ್ದು, 3,000 mAh ಬ್ಯಾಟರಿಯನ್ನು ಹೊಂದಿದೆ.

ಲೈಟ್‌ ಬೆಲೆ ಎಷ್ಟು..?

ಲೈಟ್‌ ಬೆಲೆ ಎಷ್ಟು..?

ಆಸುಸ್ ಜೆನ್‌ಫೋನ್‌ ಲೈಟ್‌ L1 ಸ್ಮಾರ್ಟ್‌ಫೋನ್‌ ಭಾರತದಲ್ಲಿ ₹ 6,999ಕ್ಕೆ ಲಭ್ಯವಾಗಲಿದೆ. ಆದರೆ, ಹಬ್ಬದ ಅವಧಿಯಾಗಿರುವುದರಿಂದ ನೀವು ಸ್ಮಾರ್ಟ್‌ಫೋನ್‌ನ್ನು ₹ 5,999ಕ್ಕೆ ಖರೀದಿಸಬಹುದಾಗಿದ್ದು, ಕಪ್ಪು ಮತ್ತು ಚಿನ್ನದ ವರ್ಣಗಳ ಎರಡು ಆವೃತ್ತಿಯಲ್ಲಿ ಲಭ್ಯವಾಗಲಿದೆ. ಜಿಯೋದಿಂದ ₹ 2,200 ಕ್ಯಾಶ್‌ಬ್ಯಾಕ್‌ ಮತ್ತು 50GB ಹೆಚ್ಚುವರಿ ಡೇಟಾ ಆಫರ್‌ ಕೂಡ ಲಭ್ಯವಾಗಲಿದ್ದು, ₹ 399 ಮೌಲ್ಯದ ಸಂಪೂರ್ಣ ಮೊಬೈಲ್‌ ರಕ್ಷಣೆ (ಕಳ್ಳತನ ರಕ್ಷಣೆ) ಪ್ಲಾನ್‌ ಕೇವಲ₹ 99ಕ್ಕೆ ಲಭ್ಯವಾಗಲಿದೆ. ಅದಲ್ಲದೇ ಫ್ಲಿಪ್‌ಕಾರ್ಟ್‌ 6 ತಿಂಗಳವರೆಗೆ No Cost EMI ಸೌಲಭ್ಯದ ಆಫರ್‌ ಕೂಡ ನೀಡಲಿವೆ.

ಯಾವಾಗ, ಎಲ್ಲಿ ಲಭ್ಯ..?

ಯಾವಾಗ, ಎಲ್ಲಿ ಲಭ್ಯ..?

ಆಸುಸ್‌ನ ZenFone Max M1 (ZB556KL) ಮತ್ತು ZenFone Lite L1 (ZA551KL) ಎರಡು ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನ ಧಮಾಕಾ ಸೇಲ್‌ನಲ್ಲಿ ಮಾರಾಟವಾಗಲಿವೆ. ಆದರೆ, ಧಮಾಕಾ ಸೇಲ್‌ ಯಾವಾಗ ಎಂದು ಫ್ಲಿಪ್‌ಕಾರ್ಟ್‌ ಇನ್ನು ಖಚಿತಪಡಿಸಿಲ್ಲ. ಈಗ ತಾನೇ ಬಿಗ್‌ ಬಿಲಿಯನ್‌ ಡೇ ಸೇಲ್‌ ಮುಗಿಸಿ ಯಶಸ್ವಿಯಾಗಿರುವ ಫ್ಲಿಪ್‌ಕಾರ್ಟ್‌ ಅತಿ ಶೀಘ್ರದಲ್ಲಿಯೇ ಧಮಾಕಾ ಸೇಲ್‌ ಕುರಿತು ಘೋಷಿಸಲಿದ್ದು, ಹೊಸ ಹೊಸ ಸ್ಮಾರ್ಟ್‌ಫೋನ್‌ಳು ಭಾರೀ ಆಫರ್‌ಗೆ ಸಿಗಲಿವೆ.

Best Mobiles in India

English summary
Asus ZenFone Max M1 (ZB556KL), ZenFone Lite L1 (ZA551KL) Launched in India: Price, Specifications. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X