Home
ಮೊಬೈಲ್

ಆಸುಸ್ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ ಎಂ1 ಇದೇ 26 ರಿಂದ ಭಾರತದಲ್ಲಿ ಲಭ್ಯ

By Gizbot Bureau

ಇಷ್ಟು ದಿನ ಯಾವಾಗ ಭಾರತದಲ್ಲಿ ಮಾರಾಟ ಆರಂಭವಾಗುತ್ತದೆ ಎಂಬ ಪ್ರಶ್ನೆಗಳಿಗೆ ಆಸೂಸ್ ಸಂಸ್ಥೆ ಅಂತಿಮ ತೆರೆ ಎಳೆದಿದೆ. ಹಲವು ದಿನಗಳಿಂದ ಕಾಯುತ್ತಿದ್ದ ಗ್ರಾಹಕರ ಕಾಯುವಿಕೆ ಇನ್ನು ನಿಲ್ಲಲಿದೆ. ಹೌದು ಜುಲೈ 26 ರಿಂದ ಆಸಸ್ 6ಜಿಬಿ ಮೆಮೊರಿಯ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ಭಾರತದಲ್ಲಿ ಬಿಡುಗಡೆಗೊಳ್ಳುವ ಬಗ್ಗೆ ಆಸಸ್ ತಿಳಿಸಿದೆ. 3ಜಿಬಿ ಮತ್ತು 4 ಜಿಬಿ ಮೆಮೊರಿಯ ಇದೇ ಫೋನ್ ಎಪ್ರಿಲ್ ನಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದೆ.

ಆಸುಸ್ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ ಎಂ1 ಇದೇ 26 ರಿಂದ ಭಾರತದಲ್ಲಿ ಲಭ್ಯ

ಆದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ವಿಚಾರ ಇದುವರೆಗೂ ಕೂಡ ತಿಳಿದಿರಲಿಲ್ಲ. ಆದರೆ ಈಗ ಅಂತಿಮವಾಗಿ ಜುಲೈ 26 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ಗಳು ಖರೀದಿಗೆ ಲಭ್ಯವಾಗುತ್ತಿದೆ ಎಂಬ ವಿಚಾರ ತಿಳಿದುಬಂದಿದೆ. ಯಾಕೆಂದರೆ ಬಿಡುಗಡೆಯ ಸಂದರ್ಬದಲ್ಲಿ ಲಭ್ಯತೆಯ ವಿಚಾರದ ಬಗ್ಗೆ ಯಾವುದೇ ಪ್ರಸ್ತಾಪ ಆಗಿರಲಿಲ್ಲ. ಕೈಗೆ ಬಂದರೂ ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು. ಆದರೆ ಈಗ ಅಂತಿಮವಾಗಿ ಫ್ಲಿಪ್ ಕಾರ್ಟ್ ನಲ್ಲಿ ಜುಲೈ 26 ರಿಂದ ಮಾರಾಟಕ್ಕೆ ಲಭ್ಯವಾಗುತ್ತಿದೆ. ಫ್ಲಿಪ್ ಕಾರ್ಟ್ ಕೂಡ ಅದನ್ನು ಖಾತ್ರಿಪಡಿಸಿದೆ.

5.99 ಇಂಚ್ ಡಿಸ್‌ಪ್ಲೇ

5.99 ಇಂಚ್ ಡಿಸ್‌ಪ್ಲೇ

ಇದು ಆಂಡ್ರಾಯ್ಡ್ 8.1 ಓರಿಯೋ ನಲ್ಲಿ ರನ್ ಆಗುತ್ತದೆ ಆಸುಸ್ ನ ಕಸ್ಟಮ್ ಝೆನ್ ಯುಐ ಸಾಫ್ಟ್ ವೇರ್ ನಲ್ಲಿ ಅಲ್ಲ ಎಂಬುದು ತಿಳಿದುಬಂದಿದೆ. ಡಿಸ್ಪ್ಲೇ ವಿಚಾರಕ್ಕೆ ಬಂದರೆ 5.99 ಇಂಚಿನ 1080 ಪಿಕ್ಸಲ್ + ಸಾಮರ್ಥ್ಯದ 18:9 ಅನುಪಾತದ ಡಿಸ್ಪ್ಲೇ ಹೊಂದಿದೆ ಮತ್ತು 1.8GHz ಆಕ್ಟಾ-ಕೋರ್-ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್ ನ್ನು ಇದು ಹೊಂದಿದ್ದು ಅದರ ಒಳಭಾಗದಲ್ಲಿ Adreno 509 GPU ಜೊತೆಗೆ ಕ್ಲಬ್ ಆಗಿದೆ. ಇದು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ ಆದರೆ ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ ಗ್ರಾಹಕರು 256ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದಾದ ಅವಕಾಶವೂ ಇದೆ. ಎರಡು ಸಿಮ್ ಗಳನ್ನು ಬಳಸಲು ಇದು ಅವಕಾಶ ನೀಡುತ್ತದೆ ಮತ್ತು . 4G LTE (VoLTE-ready) ನ್ನು ಬೆಂಬಲಿಸುತ್ತದೆ ಮತ್ತು USB OTG ಗು ಸಹಕಾರ ನೀಡುತ್ತದೆ.

5,000mAh ಬ್ಯಾಟರಿ

5,000mAh ಬ್ಯಾಟರಿ

5,000mAh ಸಾಮರ್ಥ್ಯದ ಬ್ಯಾಟರಿಯನ್ನು ಝೆನ್ಫೋನ್ ಮ್ಯಾಕ್ಸ್ ಪ್ರೋ ಎಂ1 ಒಳಗೊಂಡಿದ್ದು 4ಜಿಯಲ್ಲಿ ಸ್ಟ್ಯಾಂಡ್ ಬೈ ಆಗಿ 34.1 ದಿನಗಳವರೆಗೆ ಮತ್ತು 25.3 ಘಂಟೆಗಳವರೆಗೆ 1080 ಪಿಕ್ಸಲ್ ನಲ್ಲಿ ವೀಡಿಯೋ ಪ್ಲೇ ಬ್ಯಾಕ್ ಗೆ ಅವಕಾಶ ನೀಡುತ್ತದೆ. 35 ಘಂಟೆಗಳ 3ಜಿ ಟಾಕ್ ಟೈಮ್ ಗೆ ಇದು ಬೆಂಬಲ ಸೂಚಿಸುತ್ತದೆ.

ವೇಗದ ಚಾರ್ಜಿಂಗ್

ವೇಗದ ಚಾರ್ಜಿಂಗ್

ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿ ಇದ್ದು, ರೆಡ್ ಮಿ ನೋಟ್ 5 ಗಿಂತ 30 ನಿಮಿಷ ವೇಗವಾಗಿ ಚಾರ್ಚ್ ಮಾಡುವ ಕೆಪಾಸಿಟಿಯನ್ನು ಇದು ಹೊಂದಿದೆ. ರೆಡ್ ಮಿ ನೋಟ್ 5 4,000mAh ಬ್ಯಾಟರಿ ಸಾಮರ್ಥ್ಯವಿದೆ. ಆದರೆ ಬೇಸರದ ವಿಚಾರವೆಂದರೆ ಇದು ಯುಎಸ್ ಬಿ ಟೈಪ್ ಸಿ ಇಂದ ಆಲ್ಲ ಬದಲಾಗಿ ಸ್ಟ್ರ್ಯಾಂಡರ್ಡ್ ಮೈಕ್ರೋ ಯುಎಸ್ ಬಿ ಮುಖಾಂತರ ಚಾರ್ಜ್ ಆಗುತ್ತದೆ. ಆಸುಸ್ ಪ್ರಕಾರ ಈ ಫೋನಿನ ಆಡಿಯೋ ಅಧ್ಬುತವಾಗಿದೆ. 5-magnet ಸ್ಪೀಕರ್ ನ್ನು ಇದು ಒಳಗೊಂಡಿದೆ ಮತ್ತು ಎನ್ ಎಕ್ಸ್ ಪಿ ಸ್ಮಾರ್ಟ್ ಆಂಪ್ಲಿಫೈಯರ್ ಹೊಂದಿದೆ.

ಬೆಲೆಯು ಸಹ ಅಗ್ಗ

ಬೆಲೆಯು ಸಹ ಅಗ್ಗ

3ಜಿಬಿ ಮೆಮೊರಿ ಮತ್ತು 32ಜಿಬಿ ಯ ಸ್ಟೋರೇಜ್ ವರ್ಷನ್ ನ ಝೆನ್ ಫೋನ್ ಮ್ಯಾಕ್ ಪ್ರೋ ಎಂ1 10,999 ರುಪಾಯಿಗೆ ಮತ್ತು 4ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ವ್ಯವಸ್ಥೆಯ ಫೋನಿನ ಬೆಲೆ 12,999 ರುಪಾಯಿ ಆಗಿರಲಿದೆ. ನಿಮ್ಮ ಆಯ್ಕೆಯ ಫೋನ್ ಖರೀದಿಗೆ ಜಸ್ಟ್ ಇನ್ನು ಕೆಲವೇ ದಿನ ಕಾಯಬೇಕು.

6ಜಿಬಿ ಮೆಮೊರಿ ಆವೃತ್ತಿ 14,999 ರೂ.

6ಜಿಬಿ ಮೆಮೊರಿ ಆವೃತ್ತಿ 14,999 ರೂ.

ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 6ಜಿಬಿ ಮೆಮೊರಿಯ ವರ್ಷನ್ 14,999 ರುಪಾಯಿ ಬೆಲೆಗೆ ಮಾರಾಟಕ್ಕೆ ಲಭ್ಯವಿದೆ.ಅದರಲ್ಲಿ 64ಜಿಬಿ ಸ್ಟೋರೇಜ್ ಅವಕಾಶವಿರುತ್ತದೆ. ಹಿಂಭಾಗದಲ್ಲಿ 16ಎಂಪಿ+5 ಎಂಪಿಯ ಎರಡು ಕ್ಯಾಮರಾವಿರುತ್ತದೆ ಮತ್ತು ಮುಂಭಾಗದಲ್ಲಿ 16ಎಂಪಿ ಕ್ಯಾಮರಾವನ್ನು ಇದು ಒಳಗೊಂಡಿದೆ. ಕ್ಯಾಮರಾ ವಿಚಾರದಲ್ಲಿ ಎಲ್ಲರೂ ಗುರುತಿಸಬಹುದಾದ ಬದಲಾವಣೆಗಳನ್ನು ಇದರಲ್ಲಿ ಗಮನಿಸಲು ಸಾಧ್ಯವಿದೆ.

Best Mobiles in India

English summary
Asus ZenFone Max Pro M1 6GB RAM version will be available in India from July 26. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+