ಮಾರುಕಟ್ಟೆಯನ್ನು ನಡುಗಿಸಲು ಬಂದಿದೆ ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1…!
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಶಿಯೋಮಿ ಬಿಡುಗಡೆ ಮಾಡಿರುವ ರೆಡ್ ಮಿ ನೋಟ್ 5 ಪ್ರೋ ಸ್ಮಾರ್ಟ್ ಫೋನಿಗೆ ಸೆಡ್ಡು ಹೊಡೆಯುವ ಸಲುವಾಗಿ ಲಾಂಚ್ ಆಗಿರುವ ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟಿನಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. ಆದರೆ ಎಂದು ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿಲ್ಲ.

ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಟ್ಟಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳು ಹೊಡೆತವನ್ನು ತಿನ್ನಲಿವೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನಿನಲ್ಲಿ ವೇಗದ RAM ಸೇರಿದಂತೆ ಸಾಕಷ್ಟು ಹೊಸ ಆಯ್ಕೆಗಳನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಮುಂದಿನಂತಿದೆ.

ಎರಡು ಆವೃತ್ತಿಯಲ್ಲಿ ಲಭ್ಯ
ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. 3GB RAM + 32 GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಆವೃತ್ತಿ, 4GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ
ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 16 MP + 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿಯೂ ಉತ್ತಮ ಸೆಲ್ಫಿಗಾಗಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ಬೆಸ್ಟ್ ಕ್ಯಾಮೆರಾ ಬೇಕು ಎನ್ನುವವರಿಗೆ ಇದು ಒಳ್ಳೆಯ ಆಯ್ಕೆ.

ಉತ್ತಮ ಡಿಸ್ ಪ್ಲೇ
ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನಿನಲ್ಲಿ 5.99 FHD+ ಗುಣಮಟ್ಟದ ಡಿಸ್ ಪ್ಲೇಯನ್ನು ನೀಡಲಾಗಿದ್ದು, 18:9 ಅನುಪಾತದಿಂದ ಕೂಡಿದೆ. ಇದು ಗೇಮ್ ಆಡುವ ಅನುಭವ ಮತ್ತು ವಿಡಿಯೋ ನೋಡುವ ಅನುಭವನ್ನು ಉತ್ತಮ ಪಡಿಸಲಿದೆ.

ವೇಗದ ಪ್ರೋಸೆಸರ್:
ಇದಲ್ಲದೇ ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 636 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಫೆಸ್ ಅನ್ ಲಾಕ್ ಸೇವೆಯನ್ನು ನೀಡಲಾಗಿದೆ. ಇದರಿಂದಾಗಿ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಲು ಈ ಸ್ಮಾರ್ಟ್ ಫೋನ್ ಶಕ್ತವಾಗಿದೆ.

ಆಂಡ್ರಾಯ್ಸ್ ಓರಿಯೋ:
ಅಸುಸ್ ಜೆನ್ ಫೋನ್ ಮ್ಯಾಕ್ಸ್ ಪ್ರೋ M1 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 5000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಈ ಸ್ಮಾರ್ಟ್ ಫೋನ್ ಬ್ಯಾಕಪ್ ಅನ್ನು ಹೆಚ್ಚು ಮಾಡಲಿದೆ. ಮಾರುಕಟ್ಟೆಯಲ್ಲಿ ಬೆಸ್ಟ್ ಬ್ಯಾಟರಿ ಸ್ಮಾರ್ಟ್ ಫೋನ್ ಎನ್ನಿಸಿಕೊಳ್ಳಲಿದೆ.


Click it and Unblock the Notifications








