ಮಾರುಕಟ್ಟೆಯಲ್ಲಿ ಜೆನ್ ಫೋನ್ ಮ್ಯಾಕ್ ಪ್ರೋ M1 ಸ್ಮಾರ್ಟ್‌ಫೋನ್ ಅಬ್ಬರ
ತೈವಾನ್ ಮೂಲದ ಪಿಸಿ ತಯಾರಕ ಅಸುಸ್ ಭಾರತೀಯ ಮಾರುಕಟ್ಟೆಗೆ ಜೆನ್ ಫೋನ್ ಮ್ಯಾಕ್ ಪ್ರೋ M1 ಪರಿಚಯಿಸಿದ್ದು, ಮೇ.3ರಿಂದ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟವಾಗುವ ಈ ಸ್ಮಾರ್ಟ್ ಫೋನ್, ಎರಡು ಆವೃತ್ತಿಯಲ್ಲಿ ದೊರೆಯಲಿದೆ. 3GB RAM/32GB ಆವೃತ್ತಿಯೂ ರೂ.10,999ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ 4G RAM/64GB ಆವೃತ್ತಿಯೂ ರೂ.12,999ಕ್ಕೆ ಲಭ್ಯವಿರಲಿದೆ.

ಈಗಾಗಲೇ ಮೊದಲ ಸೇಲ್ ನಲ್ಲಿ ಜೆನ್ ಫೋನ್ ಮ್ಯಾಕ್ ಪ್ರೋ M1 ಸೋಲ್ಡ್ ಔಟ್ ಆಗಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಸೇಲ್ ನಲ್ಲಿ ಈ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದೆ. ಮೇ.10 ರಂದು ಮತ್ತೆ ಸೇಲ್ ನಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜೆನ್ ಫೋನ್ ಮ್ಯಾಕ್ ಪ್ರೋ M1 ಸ್ಮಾರ್ಟ್ ಫೋನ್ ಸಾಕಷ್ಟು ಬೇಡಿಕೆಯನ್ನು ಉಳಿಸಿಕೊಂಡಿದೆ.
ಇದಲ್ಲದೇ ಜೆನ್ ಫೋನ್ ಮ್ಯಾಕ್ ಪ್ರೋ M1 ಕೊಳ್ಳುವವರಿಗೆ ಫ್ಲಿಪ್ ಕಾರ್ಟ್ ಉತ್ತಮ ಆಫರ್ ಗಳನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಈ ಸ್ಮಾರ್ಟ್ ಫೋನ್ ನೋ ಕಾಸ್ಟ್ ಇಎಂಐ ಆಫರ್ ನಲ್ಲಿ ಇದು ದೊರೆಯಲಿದೆ ಎನ್ನಲಾಗಿದೆ. ಪ್ರತಿ ತಿಂಗಳು ರೂ.917ಕ್ಕೆ ದೊರೆಯಲಿದೆ.
ಇದಲ್ಲದೇ ವೊಡಾಫೋನ್ ಸಹ ತನ್ನ ಬಳಕೆದಾರರಿಗೆ ರೂ.3200ರ ವರೆಗೂ ಆಫರ್ ಅನ್ನು ನೀಡಲು ಮುಂದಾಗಿದೆ. ಇದಲ್ಲದೇ ರೂ.1000 ಕಡಿತವನ್ನು ಎಕ್ಸ್ ಚೇಂಚ್ ಮೇಲೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಲ್ಲದೇ ಡಿಸ್ಕೌಂಟ್ ಸೇಲ್ ನಲ್ಲಿ ರೂ. 49ಕ್ಕೆ ಬ್ಯಾಕ್ ಕವರ್ ಮತ್ತು ಟೆಂಪ್ ಗ್ಲಾಸ್ ಅನ್ನು ನೀಡಲಿದೆ.
ಜೆನ್ ಫೋನ್ ಮ್ಯಾಕ್ ಪ್ರೋ M1 ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. 13 ಎಂಪಿ + 5 ಎಂಪಿ ಲೆನ್ಸ್ ಗಳಿದೆ. ಜೊತೆಗೆ ಡ್ಯುಯಲ್ ಎಲ್ ಇಡಿ ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. 18:9 ಅನುಪಾತದ 5.99 ಡಿಸ್ ಪ್ಲೆಯನ್ನು ನೀಲಡಾಗಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ 636 ಪ್ರೋಸೆಸರ್ ನೊಂದಿಗೆ ಲಭ್ಯವಿದೆ. ಮತ್ತು 2TB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಸವನ್ನು ಮಾಡಿಕೊಡಲಿದೆ.



Click it and Unblock the Notifications