Home
ಮೊಬೈಲ್

6 ತಿಂಗಳಲ್ಲಿ ದಾಖಲೆ ಮಾರಾಟ!..ಸಂಭ್ರಮಕ್ಕೆ 'ಮ್ಯಾಕ್ಸ್ ಪ್ರೊ ಎಂ1' ಬೆಲೆ ಇಳಿಕೆ!!

ಕಳೆದ ವರ್ಷ ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆದು ನಿಂತಿದ್ದ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ದಾಖಲೆಯೊಂದನ್ನು ಸೃಷ್ಟಿಸಿದೆ. ಆರು ತಿಂಗಳ ಹಿಂದೆ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದ ಆಸುಸ್ ಮೊಬೈಲ್ ಕಂಪೆನಿಯ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಹತ್ತು ಲಕ್ಷ ಮಾರಾಟಗಳನ್ನು ಕಂಡಿದೆ ಎಂದು ಆಸುಸ್ ಕಂಪೆನಿ ತಿಳಿಸಿದೆ.

ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗೂ ಸೆಡ್ಡು ಹೊಡೆದು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದ 'ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಹತ್ತು ಲಕ್ಷ ಮಾರಾಟದ ಸಂಭ್ರಮದಲ್ಲಿ ಆಸುಸ್ ಮತ್ತೊಂದು ಸಿಹಿಸುದ್ದಿಯನ್ನು ಪ್ರಕಟಿಸಿದೆ. ಈ ಬಾರಿಯ ಫ್ಲಿಪ್‌ಕಾರ್ಟ್ 'ಬಿಗ್ ಬಿಲಿಯನ್ ಡೇಸ್' ಮೇಳದಲ್ಲಿ 'ಮ್ಯಾಕ್ಸ್ ಪ್ರೊ ಎಂ1' ಬೆಲೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದೆ.

6 ತಿಂಗಳಲ್ಲಿ ದಾಖಲೆ ಮಾರಾಟ!..ಸಂಭ್ರಮಕ್ಕೆ 'ಮ್ಯಾಕ್ಸ್ ಪ್ರೊ ಎಂ1' ಬೆಲೆ ಇಳಿಕೆ!!

5.99 ಇಂಚಿನ ಡಿಸ್‌ಪ್ಲೇ, ಪ್ರಬಲ ಸ್ನಾಪ್ಡ್ರಾಗನ್ 636 ಆಕ್ಟಾ-ಕೋರ್ ಪ್ರೊಸೆಸರ್, 5000mAh ಸಾಮರ್ಥ್ಯದ ಬ್ಯಾಟರಿಯಂತಹ ಫೀಚರ್ಸ್‌ಗಳನ್ನು ಹೊಂದಿದ್ದ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಈಗ ನಿಮಗೆ ಮತ್ತಷ್ಟು ಕಡಿಮೆ ಬೆಲೆಗೆ ಸಿಗಲಿದೆ. ಹಾಗಾದರೆ, ಸ್ಮಾರ್ಟ್‌ಫೋನಿನ ಬೆಲೆ ಎಷ್ಟಾಗಬಹುದು? ಈ ಪೋನಿನ ಇನ್ನಿತರ ಫೀಚರ್ಸ್ ಎಂಬ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ 18:9 ಅನುಪಾತದ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 2,160x1,080 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವುದು ಡಿಸ್‌ಪ್ಲೇಯ ಪ್ರಮುಖ ವಿಶೇಷವಾಗಿದೆ. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಪ್ರಬಲ ಸ್ನಾಪ್ಡ್ರಾಗನ್ 636 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ, ಇದು ರೆಡ್‌ ಮಿ ನೋಟ್ 5 ಫೋನಿನಲ್ಲಿ ಬಳಸಲಾಗಿರುವ ಸ್ನಾಪ್ಡ್ರಾಗನ್ 625 ಓಕ್ಟಾ-ಕೋರ್ ಪ್ರೊಸೆಸರ್ಗಿಂತ ವೇಗವಾಗಿದೆ. 3GB+32GB, 4GB+64GB ಮತ್ತು 6GB RAM+64GB ಮೆಮೊರಿಯ ಮೂರು ವೆರಿಯಂಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಓಮ್ನಿ ವಿಷನ್ ಸಂವೇದಕ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಆಳ ಸಂವೇದಕ ಕ್ಯಾಮೆರಾವನ್ನು ಹೊಂದಿದೆ. ಹಿಂಬಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಬೊಕೆ ಚಿತ್ರಗಳನ್ನು ತೆಗೆಯಲು ಹೊಂದುತ್ತದೆ. 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹೆಚ್‌ಡಿಆರ್, 9 ಫಿಲ್ಟರ್, ಬ್ಯೂಟಿ ಶಾಟ್, 9 ಸೀನ್ಸ್ ಮೂಡ್ ಮತ್ತು ಬೊಕೆ ಮೂಡ್ ತಂತ್ರಜ್ಞಾನಗಳು ಕ್ಯಾಮೆರಾ ಅಂದವನ್ನು ಹೆಚ್ಚಿಸಿವೆ.

5000mAh ಬ್ಯಾಟರಿ

5000mAh ಬ್ಯಾಟರಿ

35 ದಿಗಳು ಸ್ಟಾಂಡ್ ಬೈ ಕೆಪಾಸಿಟಿ ಇರುವಂತಹ 5000mAh ಸಾಮರ್ಥ್ಯದ ಬ್ಯಾಟರಿಯನ್ನು 'ಮ್ಯಾಕ್ಸ್ ಪ್ರೊ ಎಂ1 ಸ್ಮಾರ್ಟ್‌ಫೋನ್ ಹೊಂದಿದೆ. 3.0 ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಈ ಫೋನ್ 28 ಗಂಟೆಗಳ ಕಾಲ 28 ಗಂಟೆಗಳ ನಿರಂತರ ವೈಫೈ ವೆಬ್‌ ಬ್ರೌಸಿಂಗ್ ಮತ್ತು 199 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದೆ ಎಂದು ಆಸುಸ್ ಕಂಪೆನಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

5-ಮ್ಯಾಗ್ನೆಟ್ ಧ್ವನಿವರ್ಧಕ, 1080p ಎಫ್‌ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್, 802.11 b / g / n 2.4GHz WLAN , ಬ್ಲೂಟೂತ್ 4.2, Wi-Fi ಡೈರೆಕ್ಟ್ ಮತ್ತು ಆಂಡ್ರಾಯ್ಡ್ ಓರಿಯೊ 8.0 ಫೀಚರ್ಸ್‌ಗಳನ್ನು 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಹೊಂದಿದೆ. ಇದು ಈಗ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಪೋನ್‌ಗಳ ಫೀಚರ್ಸ್‌ಗೆ ಸಮ ಎನ್ನಬಹುದು.

ಮ್ಯಾಕ್ಸ್ ಪ್ರೊ ಎಂ1 ಬೆಲೆ ಎಷ್ಟು?

ಮ್ಯಾಕ್ಸ್ ಪ್ರೊ ಎಂ1 ಬೆಲೆ ಎಷ್ಟು?

3GB+32GB, 4GB+64GB ಮತ್ತು 6GB RAM+64GB ಮೆಮೊರಿಯ ಮೂರು ವೆರಿಯಂಟ್‌ಗಳಲ್ಲಿ ಈ ಮೊದಲು ಮಾರಾಟಕ್ಕಿದ್ದ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಸ್ಮಾರ್ಟ್‌ಪೋನ್ ಬೆಲೆಗಳು ಕ್ರಮವಾಗಿ, 10,999 (3GB+32GB), 12,999 (4GB+64GB) ಮತ್ತು 14,999 (6GB+64GB) ರೂಪಾಯಿಗಳಾಗಿದ್ದವು. ಈ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಆಫರ್‌ನಲ್ಲಿ ಇವುಗಳ ಎಲ್ಲಾ ವೆರಿಯಂಟ್‌ಗಳ ಬೆಲೆ ಕ್ರಮವಾಗಿ 1000 ಇಳಿಕೆಯಾಗಲಿದೆ ಎನ್ನಲಾಗಿದೆ.

Best Mobiles in India

English summary
Asus launched the ZenFone Max Pro M1 smartphone in India in April this year, and now the company has announced that one million units of the device have been sold.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+