ಆಸುಸ್ ಝೆನ್ಫೋನ್‌ಗಳ ಬಿಡುಗಡೆಗೆ ಬೆಚ್ಚಿಬಿತ್ತು ಭಾರತ!..ಖರೀದಿಗೆ ಕ್ಯೂ ನಿಲ್ಲಲೇಬೇಕು!!

|

ಭಾರತದ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಆಸುಸ್ ಕಂಪೆನಿ ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2 ಮತ್ತು ಆಸುಸ್ ಝೆನ್ಫೋನ್ ಮ್ಯಾಕ್ಸ್ ಎಂ2 ಸರಣಿಯ ಸ್ಮಾರ್ಟ್‌ಫೋನ್‌ಗಳು ನೆನ್ನೆ ದೇಶದಲ್ಲಿ ಬಿಡುಗಡೆಗೊಂಡಿವೆ. ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ1 ಯಶಸ್ಸಿನ ನಂತರ, ಇದೀಗ ಆಸುಸ್ ಅತ್ಯಂತ ಕಡಿಮೆ ಬೆಲೆಯಲ್ಲಿ ತನ್ನ ವಿನೂತನ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.

ಆಸುಸ್ ಕಂಪೆನಿಯ 'ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2' ಮತ್ತು 'ಝೆನ್ಫೋನ್ ಮ್ಯಾಕ್ಸ್ ಎಂ2' ಎರಡು ಬ್ರ್ಯಾಂಡ್‌ಗಳಲ್ಲಿ ಒಟ್ಟು ಐದು ಮಾದರಿಯ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ನೆನ್ನೆ ಎಂಟ್ರಿ ನೀಡಿ ಗಮನಸೆಳೆದಿವೆ. 'ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2' ಮೂರು ಮಾದರಿಗಳಲ್ಲಿ ಬಿಡುಗಡೆಯಾಗಿದ್ದರೆ, 'ಝೆನ್ಫೋನ್ ಮ್ಯಾಕ್ಸ್ ಎಂ2' ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದೆ.

ಆಸುಸ್ ಝೆನ್ಫೋನ್‌ಗಳ ಬಿಡುಗಡೆಗೆ ಬೆಚ್ಚಿಬಿತ್ತು ಭಾರತ!

'ಮ್ಯಾಕ್ಸ್ ಪ್ರೊ ಎಂ2' ಬೆಲೆಗಳು ಕ್ರಮವಾಗಿ, (3/32 ಮಾದರಿ) 12,999 ರೂ, (4/64 ಮಾದರಿ) 14,999 ರೂ. ಮತ್ತು 16,999. (6/64 ಮಾದರಿ) ರೂ.ಗಳಾಗಿದ್ದರೆ, 'ಮ್ಯಾಕ್ಸ್ ಎಂ2' ಬೆಲೆಗಳು ಕ್ರಮವಾಗಿ, (3/32 ಮಾದರಿ) 9,999 ರೂ. ಮತ್ತು (4/64 ಮಾದರಿ) 11,999 ರೂ.ಗಳಾಗಿವೆ. ಹಾಗಾಗಿ, ಇವು ಸೂಪರ್ ಬಜೆಟ್ ಸ್ಮಾರ್ಟ್‌ಫೋನ್‌ಗಳು ಎಂದು ಈಗಾಗಲೇ ಕರೆಸಿಕೊಂಡಿವೆ.

ಆಸುಸ್ ಝೆನ್ಫೋನ್‌ಗಳ ಬಿಡುಗಡೆಗೆ ಬೆಚ್ಚಿಬಿತ್ತು ಭಾರತ!

'ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2' ಮತ್ತು 'ಝೆನ್ಫೋನ್ ಮ್ಯಾಕ್ಸ್ ಎಂ2' ಎರಡು ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು ಕೂಡ ಮೊಬೈಲ್ ಪ್ರಿಯರ ಕಣ್ಣುಕುಕ್ಕುತ್ತಿದ್ದು, ಹಾಗಾದರೆ, 'ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2' ಮತ್ತು 'ಝೆನ್ಫೋನ್ ಮ್ಯಾಕ್ಸ್' ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್ ಹೊಂದಿವೆ?, ಖರೀದಿಸಲು ಯೋಗ್ಯವಾದ ಸ್ಮಾರ್ಟ್‌ಫೋನ್‌ಗಳೇ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಸಸ್ ಝೆನ್ಫೊನ್ ಮ್ಯಾಕ್ಸ್ ಪ್ರೊ M2 ಹೇಗಿದೆ?

ಆಸಸ್ ಝೆನ್ಫೊನ್ ಮ್ಯಾಕ್ಸ್ ಪ್ರೊ M2 ಹೇಗಿದೆ?

ಕ್ರಮವಾಗಿ (3/32 ಮಾದರಿ) 12,999 ರೂ, (4/64 ಮಾದರಿ) 14,999 ರೂ. ಮತ್ತು 16,999. (6/64 ಮಾದರಿ) ರೂಪಾಯಿಗಳಲ್ಲಿ ದೇಶದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಝೆನ್ಫೊನ್ ಮ್ಯಾಕ್ಸ್ ಪ್ರೊ M2 ಒಂದು ಅತ್ಯುತ್ತಮ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್ ಆಗಿದೆ ಎನ್ನಬಹುದು. ಅತಿ ಹೆಚ್ಚು ಫೀಚರ್ಸ್ ಹೊತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಮತ್ತೊಂದು ಹವಾ ಎಬ್ಬಿಸುವ ನಿರೀಕ್ಷೆ ಇದೆ.

ಮ್ಯಾಕ್ಸ್ ಪ್ರೊ M2 ಡಿಸ್‌ಪ್ಲೇ ಮತ್ತು ವಿನ್ಯಾಸ!

ಮ್ಯಾಕ್ಸ್ ಪ್ರೊ M2 ಡಿಸ್‌ಪ್ಲೇ ಮತ್ತು ವಿನ್ಯಾಸ!

ಆಸಸ್ ಝೆನ್ಫೊನ್ ಮ್ಯಾಕ್ಸ್ ಪ್ರೊ M2 ಸ್ಮಾರ್ಟ್‌ಫೋನ್ 2280 x 1080 ಪಿಕ್ಸೆಲ್ಸ್ ರೆಸಲ್ಯೂಶನ್ ಸಾಮರ್ಥ್ಯದ 6.3-ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯಲ್ಲಿ ನೋಚ್ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಲುಕ್ ಅತ್ಯದ್ಬುತವಾಗಿದೆ.ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಸಂಪೂರ್ಣವಾಗಿ ಪ್ರೀಮಿಯಂ ಗ್ಲಾಸ್ ಲುಕ್ ಅನ್ನು ಹೊಂದಿದೆ.

ಮ್ಯಾಕ್ಸ್ ಪ್ರೊ M2 ಪ್ರೊಸೆಸರ್ ಮತ್ತು RAM?

ಮ್ಯಾಕ್ಸ್ ಪ್ರೊ M2 ಪ್ರೊಸೆಸರ್ ಮತ್ತು RAM?

ಆಸಸ್ ಝೆನ್ಫೊನ್ ಮ್ಯಾಕ್ಸ್ ಪ್ರೊ M2 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 3/32, 4/64 ಮತ್ತು 6/64 RAM ಮತ್ತು ಆಂತರಿಕ ಸ್ಟೋರೆಜ್ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದೆ. ಸ್ಮಾರ್ಟ್‌ಫೋನ್ ಮೆಮೊರಿಯನ್ನು 2ಟಿಬಿ ವರೆಗೂ ವಿಸ್ತರಿಸಬಹುದಾದ ಆಯ್ಕೆ ನೀಡಿರುವುದು ಇದರ ಬಹುಮುಖ್ಯ ವಿಶೇಷತೆಗಳಲ್ಲಿ ಒಂದು ಎಂದು ಹೇಳಬಹುದು.

ಮ್ಯಾಕ್ಸ್ ಪ್ರೊ M2 ಕ್ಯಾಮೆರಾ ಮತ್ತು ಇತರೆ ಫೀಚರ್ಸ್?

ಮ್ಯಾಕ್ಸ್ ಪ್ರೊ M2 ಕ್ಯಾಮೆರಾ ಮತ್ತು ಇತರೆ ಫೀಚರ್ಸ್?

13MP + 12MP ಸೆನ್ಸಾರ ಡ್ಯುಯಲ್ ಕ್ಯಾಮರಾ ಮಾಡ್ಯೂಲ್ ಜೊತೆಗೆ 5MP ಸೆಲ್ಫಿ ಕ್ಯಾಮರಾವನ್ನು ಮ್ಯಾಕ್ಸ್ ಪ್ರೊ M2 ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇನ್ನು 3.5 ಮಿಮೀ ಹೆಡ್ಫೋನ್ ಜ್ಯಾಕ್, 5000mAh ಬ್ಯಾಟರಿ ಸೇರಿದಂತೆ ಪ್ಯೂರ್ ಆಂಡ್ರಾಯ್ಡ್ 8.1 ಓರಿಯೋದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ನೀಡಲಿದೆ. ಇನ್ನುಳಿದಂತೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ನಿಂದ ರಕ್ಷಣೆ ಪಡೆದಿರುವುದು ಈ ಸ್ಮಾರ್ಟ್‌ಫೋನಿನ ಪ್ರಮುಖ ವಿಶೇಷತೆಗಳಲ್ಲಿ ಒಂದು ಎನ್ನಬಹುದು.

ಆಸಸ್ ಝೆನ್ಫೊನ್ ಮ್ಯಾಕ್ಸ್ M2 ಹೇಗಿದೆ?

ಆಸಸ್ ಝೆನ್ಫೊನ್ ಮ್ಯಾಕ್ಸ್ M2 ಹೇಗಿದೆ?

ಕ್ರಮವಾಗಿ (3/32 ಮಾದರಿ) 9,999 ರೂ. ಮತ್ತು (4/64 ಮಾದರಿ) 11,999 ರೂಪಾಯಿಗಳಿಗೆ ದೇಶದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿರುವ 'ಝೆನ್ಫೊನ್ ಮ್ಯಾಕ್ಸ್ M2' 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ದೇಶದಲ್ಲಿ ಲಭ್ಯವಿರುವ ನಂ. ಒನ್ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ಮ್ಯಾಕ್ಸ್ ಪ್ರೊ M2 ಸ್ಮಾರ್ಟ್‌ಪೋನ್ ಸರಣಿ ಸ್ಮಾರ್ಟ್‌ಫೋನ್‌ಗಳಿಗಿಂತ ಅಷ್ಟೇನೂ ಭಿನ್ನವಾಗಿರದ ಈ ಝೆನ್ಫೊನ್ ಮ್ಯಾಕ್ಸ್ M2 ಸ್ಮಾರ್ಟ್‌ಫೋನ್ ಮಾತ್ರ ಬೆಲೆಯಲ್ಲಿ ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್ ಆಗಬಹುದು.

ಮ್ಯಾಕ್ಸ್  M2 ಡಿಸ್‌ಪ್ಲೇ ಮತ್ತು ವಿನ್ಯಾಸ!

ಮ್ಯಾಕ್ಸ್ M2 ಡಿಸ್‌ಪ್ಲೇ ಮತ್ತು ವಿನ್ಯಾಸ!

ಆಸಸ್ ಝೆನ್ಫೊನ್ ಮ್ಯಾಕ್ಸ್ M2 ಸ್ಮಾರ್ಟ್‌ಫೋನ್ 2280 x 1080 ಪಿಕ್ಸೆಲ್ಸ್ ರೆಸಲ್ಯೂಶನ್ ಸಾಮರ್ಥ್ಯದ 6.3-ಇಂಚಿನ HD ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕೂಡ ಡಿಸ್‌ಪ್ಲೇಯಲ್ಲಿ ನೋಚ್ ವಿನ್ಯಾಸವನ್ನು ಹೊಂದಿದ್ದು, ಸ್ಮಾರ್ಟ್‌ಫೋನ್ ಲುಕ್ ಅತ್ಯುತ್ತಮವಾಗಿದೆ ಎನ್ನಬಹುದು. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಕೂಡ ಸಂಪೂರ್ಣವಾಗಿ ಪ್ರೀಮಿಯಂ ಗ್ಲಾಸ್ ಲುಕ್ ಅನ್ನು ಹೊಂದಿದೆ.

ಮ್ಯಾಕ್ಸ್ M2 ಪ್ರೊಸೆಸರ್ ಮತ್ತು RAM?

ಮ್ಯಾಕ್ಸ್ M2 ಪ್ರೊಸೆಸರ್ ಮತ್ತು RAM?

ಆಸಸ್ ಝೆನ್ಫೊನ್ ಮ್ಯಾಕ್ಸ್ ಪ್ರೊ M2 ಸ್ಮಾರ್ಟ್‌ಫೋನಿನಲ್ಲಿ ಸಹ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 3 RAM/32 ಆಂತರಿಕ ಮೆಮೊರಿ ಹಾಗೂ 4RAM/64 ಆಂತರಿಕ ಮೆಮೊರಿಯ ಎರಡು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದೆ. ಈ ಸ್ಮಾರ್ಟ್‌ಫೋನಿನಲ್ಲೂ ಕೂಡ ಮೆಮೊರಿಯನ್ನು 2ಟಿಬಿ ವರೆಗೂ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಿರುವುದು ಆಶ್ಚರ್ಯವೇ ಸರಿ ಎಂದು ಹೇಳಬಹುದು.

ಮ್ಯಾಕ್ಸ್ M2 ಕ್ಯಾಮೆರಾ ಮತ್ತು ಇತರೆ ಫೀಚರ್ಸ್?

ಮ್ಯಾಕ್ಸ್ M2 ಕ್ಯಾಮೆರಾ ಮತ್ತು ಇತರೆ ಫೀಚರ್ಸ್?

13MP + 2MP ಸೆನ್ಸಾರ್ ಡ್ಯುಯಲ್ ಕ್ಯಾಮರಾ ಮಾಡ್ಯೂಲ್ ಜೊತೆಗೆ 8MP ಸೆಲ್ಫಿ ಕ್ಯಾಮರಾವನ್ನು ಮ್ಯಾಕ್ಸ್ ಪ್ರೊ M2 ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.ಮ್ಯಾಕ್ಸ್ ಪ್ರೊ M2 ಫೋನಿನ ಕ್ಯಾಮೆರಾಕ್ಕಿಂತ ಕಡಿಮೆ ಸಾಮರ್ಥ್ಯದಲ್ಲಿ ಈ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ( ಹಾಗಾಗಿಯೇ ಬೆಲೆ ಸ್ವಲ್ಪ ಕಡಿಮೆ). ಇನ್ನು 3.5 ಮಿಮೀ ಹೆಡ್ಫೋನ್ ಜ್ಯಾಕ್, 4000mAh ಬ್ಯಾಟರಿ ಸೇರಿದಂತೆ ಪ್ಯೂರ್ ಆಂಡ್ರಾಯ್ಡ್ 8.1 ಓರಿಯೋದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ನೀಡಲಿದೆ. ಇನ್ನುಳಿದಂತೆ, ಈ ಸ್ಮಾರ್ಟ್‌ಫೋನ್ ಕೂಡ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ನಿಂದ ರಕ್ಷಣೆ ಪಡೆದಿದೆ.

Best Mobiles in India

English summary
Asus ZenFone Max Pro M2 and the Asus ZenFone Max M2 have been launched in India. The ZenFone Max Pro M2 price in India is Rs. 12,999 for the 3/32 variant, Rs. 14,999 for the 4/64 variant, and Rs. 16,999 for the 6/64 variant. The ZenFone Max M2 price in India is Rs. 9,999 for the 3/32 variant and the 4/64 will be priced

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X