ಆಸುಸ್ ಝೆನ್ಫೋನ್ ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತಕ್ಕಿಂದು ಲಗ್ಗೆ!
ಬಹುತೇಕ ಎಲ್ಲಾ ಮೊಬೈಲ್ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ ಹೊಸ ಫೀಚರ್ಸ್‌ಗಳನ್ನು ಹೊತ್ತು ಬಿಡುಗಡೆಯಾಗುತ್ತಿವೆ. ಈಗ ಅದೇ ಸಾಲಿಗೆ ಆಸುಸ್ ಕಂಪೆನಿಯ ಹೊಸ ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಇಂದು ಕಾಲಿಡುತ್ತಿವೆ. ಕಳೆದ ವಾರ ರಷ್ಯಾದಲ್ಲಿ ಅನಾವರಣಗೊಂಡಿದ್ದ ಆಸುಸ್ ಕಂಪೆನಿಯ ಬಹುನಿರೀಕ್ಷಿತ ಝೆನ್ಫೋನ್ ಮ್ಯಾಕ್ಸ್ ಪ್ರೋ ಎಂ 2, ಝೆನ್ಫೋನ್ ಮ್ಯಾಕ್ಸ್ ಎಮ್ 2 ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇಂದು ಬಿಡುಗಡೆಯಾಗುತ್ತಿವೆ.
ಆಸುಸ್ ಕಂಪೆನಿಯ ಆಸುಸ್ ಝೆನ್ಫೋನ್ ಮ್ಯಾಕ್ಸ್ ಪ್ರೋ ಎಂ 2 ಮತ್ತು ಆಸುಸ್ ಝೆನ್ಫೋನ್ ಮ್ಯಾಕ್ಸ್ ಎಮ್ 2 ಮಾದರಿಯ ಸ್ಮಾರ್ಟ್‌ಫೋನ್‌ಗಳು ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಮೂಲಕ ಭಾರೀ ನಿರೀಕ್ಷೆಯನ್ನು ಮೂಡಿಸಿವೆ. ಈ ಎರಡು ಮಾದರಿಯ ಸ್ಮಾರ್ಟ್‌ಫೋನ್‌ಗಳು 5000mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಹೊಂದುವ ಮೂಲಕ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವ ಉದ್ದೇಶವನ್ನು ಹೊಂದಿವೆ.

ಭಾರತದ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆಯಾಗಿದ್ದು, ಹೊಸ ಮಾದರಿಯ ಎರಡು ಝೆನ್ಫೋನ್ ಸ್ಮಾರ್ಟ್‌ಫೋನ್‌ಗಳು ಇಂದು 12:30 PM ಕ್ಕೆ ಬಿಡುಗಡೆ ಯಾಗಲಿವೆ. ದೇಶಾದ್ಯಂತ ಇರುವ ಫ್ಯಾನ್ಸ್ ಗೊಸ್ಕರ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುವ ಕಾರ್ಯಕ್ರಮವನ್ನು ಲೈವ್ ಸ್ಟ್ರಿಮ್ ನಲ್ಲಿ ನೋಡಬಹುದಾದ ಅವಕಾಶವನ್ನು ಸಹ ಕಂಪೆನಿ ಮಾಡಿಕೊಟ್ಟಿದೆ. ಹಾಗಾಗಿ, ಪ್ರತಿ ಅಪ್‌ಡೆಟ್ ಅನ್ನು ನೀವು ಈಗ ಲೈವ್ ಮುಖಾಂತರ ವಿಕ್ಷಿಸಬಹುದು.
ಸ್ಮಾರ್ಟ್‌ಪೋನ್‌ಗಳ ನಿರೀಕ್ಷಿತ ಬೆಲೆ
ಭಾರತದಲ್ಲಿ ಆಸುಸ್ ಕಂಪೆನಿಯ ಝೆನ್ಫೋನ್ ಸರಣಿಯ ನೂತನ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗುವ ನಿರಿಕ್ಷೆಯನ್ನು ಹೊಂದಲಾಗಿದೆ. ಆಸುಸ್ ಝೆನ್ಫೋನ್ ಮ್ಯಾಕ್ಸ್ ಎಂ 2 ಬೆಲೆ ಸುಮಾರು 12,990 ರೂಪಾಯಿಗಳಿಂದ 14,000 ರೂ.ಗಳ ಆಸುಪಾಸಿನಲ್ಲಿ ಹಾಗೂ ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ 2 ಬೆಲೆ 12,990 ರೂಪಾಯಿಗಿಂದ ಸುಮಾರು ರೂ.19,500 ಗಳಿಗೆ ಬಿಡುಗಡೆಯಾಗಬಹುದು ಎಂದು ಹೇಳಬಹುದಾಗಿದೆ.
ಆಸಸ್ ಝೆನ್ಫೊನ್ ಮ್ಯಾಕ್ಸ್ ಪ್ರೋ M2 ಫೀಚರ್ಸ್
ಆಸುಸ್ ಝೆನ್ಫೋನ್ ಮ್ಯಾಕ್ಸ್ ಪ್ರೊ M2 ಒಂದು 6.3-ಇಂಚಿನ FHD ಡಿಸ್‌ಪ್ಲೇ
2280 x 1080 ಪಿಕ್ಸೆಲ್ಗಳ ರೆಸಲ್ಯೂಶನ್
ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 SoC
4GB RAM ಮತ್ತು 64GB ಸ್ಟೋರೆಜ್
13MP + 12MP ಸೆನ್ಸಾರ ಡ್ಯುಯಲ್ ಕ್ಯಾಮರಾ ಮಾಡ್ಯೂಲ್ ಜೊತೆಗೆ 5MP ಸೆಲ್ಫಿ ಕ್ಯಾಮರಾ
3.5 ಮಿಮೀ ಹೆಡ್ಫೋನ್ ಜ್ಯಾಕ್
5000mAh ಬ್ಯಾಟರಿ
ಆಸಸ್ ಝೆನ್ಫೋನ್ ಮ್ಯಾಕ್ಸ್ ಎಂ 2 ಫೀಚರ್ಸ್
6.3 ಇಂಚಿನ HD+ ಡಿಸ್‌ಪ್ಲೇ
1520 x 720 ಪಿಕ್ಸೆಲ್ ರೆಸೆಲ್ಯೂಷನ್
ಸ್ನಾಪ್ಡ್ರಾಗನ್ 632 SoC ಅನ್ನು 3GB RAM ಮತ್ತು 32GB ಸ್ಟೋರೆಜ್ ಮುಖಾಂತರ ಸಂಯೋಜಿಸುತ್ತದೆ
13MP + 2MP ಡ್ಯುಯಲ್ ಕ್ಯಾಮರಾ ಹಾಗೂ ಮುಂಭಾಗದಲ್ಲಿ 8MP ಕ್ಯಾಮರಾ.
ಬ್ಲೂಟೂತ್ 4.2, ವೈ-ಫೈ, 4 ಜಿ ಎಲ್ ಟಿಇ ಮತ್ತು 4000mAh ಬ್ಯಾಟರಿ.


Click it and Unblock the Notifications








