5000mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪೋನ್ ಪೆಗಾಸಸ್ 3ಎಸ್
ಸದ್ಯ ಜೆನ್‌ಪೋನ್ ಸರಣಿಯಲ್ಲಿ ಪೆಗಾಸಸ್ 3ಎಸ್ ಎಂಬ 5000mAh ಬ್ಯಾಟರಿ ಸಾಮಾರ್ಥ್ಯದ ಪೋನೊಂದನ್ನು ಪರಿಚಯಿಸಿದ್ದು, ದೀರ್ಘಕಾಲದ ಬ್ಯಾಟರಿ ಬ್ಯಾಕಪ್‌ಗಾಗಿ ಈ ಪೋನು ಹೇಳಿ ಮಾಡಿಸಿದಂತೆ. ಹಾಗಾಗಿ ಈ ಪೋನಿನ ವಿಶೇಷತೆಗಳೇನು ಎಂಬುದನ್ನು ನೋಡುವುದಾದರೆ.
ಸದ್ಯ ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಒಂದು ಕಡೆ 4G ಸ್ಮಾರ್ಟ್‌ಪೋನುಗಳ ಹಾವಳಿಯಾದರೆ ಇನ್ನೊಂದು ಕಡೆ ಹೆಚ್ಚಿನ ಬ್ಯಾಟರಿ ಸಾಮಾರ್ಥ್ಯದ ಪೋನುಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುತ್ತಿವೆ. ಈ ಸ್ಪರ್ಧೆಯಲ್ಲಿ ಆಸಸ್ ಸಹ ಭಾಗಿಯಾಗಿದೆ.

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!
ಸದ್ಯ ಜೆನ್‌ಪೋನ್ ಸರಣಿಯಲ್ಲಿ ಪೆಗಾಸಸ್ 3ಎಸ್ ಎಂಬ 5000mAh ಬ್ಯಾಟರಿ ಸಾಮಾರ್ಥ್ಯದ ಪೋನೊಂದನ್ನು ಪರಿಚಯಿಸಿದ್ದು, ದೀರ್ಘಕಾಲದ ಬ್ಯಾಟರಿ ಬ್ಯಾಕಪ್‌ಗಾಗಿ ಈ ಪೋನು ಹೇಳಿ ಮಾಡಿಸಿದಂತೆ. ಹಾಗಾಗಿ ಈ ಪೋನಿನ ವಿಶೇಷತೆಗಳೇನು ಎಂಬುದನ್ನು ನೋಡುವುದಾದರೆ.

5000mAh ಬ್ಯಾಟರಿ ಸಾಮಾರ್ಥ್ಯ
ಜೆನ್‌ಪೋನ್ ಪೆಗಾಸಸ್ 3ಎಸ್ ಸ್ಮಾರ್ಟ್‌ಪೋನು ಜೆನ್‌ಪೋನ್ ಸರಣಿಯಲ್ಲಿ ಅತೀ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಕಂಪನಿ ಹೇಳುವಂತೆ ಈ ಪೋನು 30 ದಿನಗಳ ಕಾಲ ಸ್ಟಾಂಡ್‌ಬೈ ಹೊಂದಿದೆಯಂತೆ. ದೀರ್ಘಕಾಲದ ವಿಡಿಯೋ ವೀಕ್ಷಣೆಗೆ ಸಹಾಯಕಾರಿಯಾಗಿದೆ.

HD ಡಿಸ್‌ಪ್ಲೇ
5.2 ಇಂಚಿನ IPS HD ಡಿಸ್‌ಪ್ಲೇ ಈ ಪೋನಿನಲ್ಲಿದ್ದು, ಇದರೊಂದಿಗೆ 2.5D ಗ್ಲಾಸ್ ಇದೆ. ಇದರಿಂದ ಉತ್ತಮ ಗುಣಮಟ್ಟದ ವಿಡಿಯೋವನ್ನು ನೋಡಬಹುದಾಗಿದೆ. ಕಲರ್ ಫುಲ್ ಆಗಿರುವ ಡಿಸ್‌ಪ್ಲೇಯಲ್ಲಿ ಗೇಮಿಂಗ್ ಸಹ ಉತ್ತಮವಾಗಿದೆ.

ಅತ್ಯಂತ ವೇಗದ ಪ್ರೋಸೆಸರ್
ಆಂಡ್ರಾಯ್ಡ್ 7.0 ನ್ಯಾಗಾ ಮತ್ತು ಆಸಸ್ ZenUI 3.1ನಲ್ಲಿ ಈ ಪೋನ್ ವರ್ಕ್ ಆಗಲಿದ್ದು, ವೇಗಕ್ಕಾಗಿ 3GB RAM ಇದರಲಿದೆ. ಕ್ವಾಡ್‌ಕೋರ್ ಮಿಡಿಯಾ ಟೆಕ್ MT6750 ಪ್ರೋಸೆರ್ ಇದೆ. ಎಸ್‌ಡಿ ಕಾರ್ಡ್ ಹಾಕುವ ಸಲುವಾಗಿ 2TB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ ಗುಣಮಟ್ಟ
ಈ ಸ್ಮಾರ್ಟ್‌ಪೋನಿನಲ್ಲಿ 13 MP ಹಿಂಬದಿ ಕ್ಯಾಮೆರಾ ಇದ್ದು, f/2.0 ಆಪರ್ಚರ್ ಮತ್ತು LED ಫ್ಲಾಷ್ ಜೊತೆಗೆ ಆಟೋ ಪೋಕಸ್ ಸಹ ಇದೆ. ಮುಂಭಾಗದಲ್ಲಿ ಸೆಲ್ಫಿಗಾಗಿಯೇ 8 MP ಕ್ಯಾಮೆರಾವನ್ನು ಅಳಡಿಸಲಾಗಿದೆ. ಗುಣಮಟ್ಟದ ಪೋಟೋಗಾಗಿ ಇದರೊಂದಿಗೆ ಪಿಕ್ಸಲ್ ಮಾಸ್ಟರ್ ಟೆಕ್ನಾಲಜಿಯನ್ನು ಹೊಂದಿದೆ.

ಇತರೆ ವಿಶೇಷತೆಗಳು
ಪೆಗಾಸಸ್ 3ಎಸ್ ಸ್ಮಾರ್ಟ್‌ಪೋನಿನಲ್ಲಿ 4G VoLTE, Wi-Fi 802.11, GPS, ಬ್ಲೂಟೂತ್ 4.0, ಮೈಕ್ರೊ-USB ಜೊತೆಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದ್ದು, ಇದರಲ್ಲಿ ಐದಕ್ಕೂ ಹೆಚ್ಚು ಫಿಂಗರ್‌ಗಳನ್ನು ಸ್ಕ್ಯಾನ್ ಮಾಡಿ ಇಡಬಹುದಾಗಿದೆ.


Click it and Unblock the Notifications








