ಸ್ಯಾಮ್ ಸಂಗ್ ಮೊಬೈಲ್ ಗಳಿಗೆ ಬಡಾ 2.0 ಪರಿಷ್ಕೃತ

|
ಸ್ಯಾಮ್ ಸಂಗ್ ಮೊಬೈಲ್ ಗಳಿಗೆ ಬಡಾ 2.0 ಪರಿಷ್ಕೃತ

ಸ್ವಲ್ಪ ಹಿಂದೆ ಸ್ಯಾಮ್ ಸಂಗ್ ಬಡಾ 2.0 ಪರಿಷ್ಕೃತವನ್ನು 2011 ಮುಗಿಯುವ ಮೊದಲು ಅಳವಡಿಸಲಿದೆ ಎಂಬ ಸುದ್ದಿ ಕೇಳಿ ಬರುತ್ತಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ಪರಿಷ್ಕೃತವನ್ನು ಅಳವಡಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ಬಡಾ 2.0 ಇರುವ ಸ್ಯಾಮ್ ಸಂಗ್ ವೇವ್ 3 ಬಿಡುಗಡೆಯಾದಾಗ ಇದರ ಬಳಕೆದಾರರ ಸಂಖ್ಯೆ ಹೆಚ್ಚಲಾಗಿದೆ ಎಂದು ಊಹಿಸಲಾಗಿತ್ತು. ಈ ಮೊಬೈಲ್ ನಲ್ಲೂ ಕೂಡ ಹೊಸ ಪರಿಷ್ಕೃತವನ್ನು ಅಳವಡಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಸ್ಪೈನ್ ಮತ್ತು ಇಟಲಿಯಲ್ಲಿ ಈ ಪರಿಷ್ಕೃತವನ್ನು ಅಳವಡಿಸುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಲಾಗಿದೆ. ಈ ಹೊಸ ಆಪರೇಟಿಂಗ್ ಸಿಸ್ಟಮ್ ಮಾರ್ಚ್ ನ ಮಾತ್ರ ಲಭ್ಯವಿದ್ದು ಅದುವರೆಗೂ ಸ್ಯಾಮ್ ಸಂಗ್ ಬಳಕೆದಾರರು ಕಾಯಬೇಕೆಂದು ಕಂಪನಿ ಹೇಳಿದೆ.

ಈ ಬಡಾ ಆಪರೇಟಿಂಗ್ ಸಿಸ್ಟಮ್ ಬಳಸಿ 4 ಸೆ.ಮಿನ ಒಳಗೆ 424 kbps ರೇಂಜ್ ನಲ್ಲಿಮಾಹಿತಿಗಳನ್ನು ರವಾನಿಸಬಹುದು. ಇದನ್ನು ಬಳಸಿ ಬಳಕೆದಾರರು ಸುಲಭವಾಗಿ ಆಪರೇಟಿಂಗ್ ಮಾಡಬಹುದಾಗಿದ್ದು , ವೈಫೈ ಹಾಟ್ ಸ್ಪಾಟ್ ಉಪಯೋಗಿಸದೆ ಕೂಡ ಒಂದಕ್ಕಿಂತ ಅಧಿಕ ವೈಫೈ ಸಾಧನಗಳ ನಡುವೆ ಸಂವಹನಕ್ಕೆ ಕೂಡ ಈ ಆಪರೇಟಿಂಗ್ ಸಿಸ್ಟಮ್ ಅನುಕೂಲಕರವಾಗಿದೆ

ಸ್ಯಾಮ್ ಸಂಗ್ ವೇವ್ 525 ಮತ್ತು 533 ಗೆ ಈ ಬಡಾ 2.0 ಪರಿಷ್ಕತವನ್ನು ನೀಡುತ್ತಿಲ್ಲ. ಬೇರೆ ಮಾಡಲ್ ಸ್ಯಾಮ್ ಸಂಗ್ ಗಳಿಗೆ ಈ ಪರಿಷ್ಕೃತ ಲಭ್ಯವಿದ್ದು ಸ್ಯಾಮ್ ಸಂಗ್ ಬಳಕೆದಾರರು ಮಾರ್ಚ್ ಒಳಗೆ ಈ ಪರಿಷ್ಕೃತದ ಸೌಲಭ್ಯ ಲಭ್ಯವಾದರೆ ಸಾಕು ಎಂದು ಕಾತುರದಿಂದ ಕಾಯುತ್ತಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X