ಬ್ಲಾಕ್‌ಬೆರ್ರಿ ರೂ.11,000 ದ ಫೋನ್ ಇಂಡಿಯಾಗೆ ಶೀಘ್ರದಲ್ಲಿ

Written By:

ಸ್ಮಾರ್ಟ್‌ಫೋನ್ ತಯಾರಿಕೆಗಳ ಹೆಸರಿನಲ್ಲಿ ಸ್ಯಾಮ್‌ಸಂಗ್ ಹಾಗೂ ಸೋನಿ ಹೆಸರುಗಳಿಸಿದಂತೆ ಬ್ಲಾಕ್‌ಬೆರ್ರಿ ಅಷ್ಟೊಂದು ಸಂತಸಕರವಾದ ಫೋನ್ ಆಗಿ ಬಳಕೆದಾರರನ್ನು ಸೆಳೆದಿಲ್ಲ. ಆದರೂ ಏನನ್ನಾದರೂ ಸಾಧಿಸುವ ತನ್ನ ಛಲವನ್ನು ಜೀವಂತವಾಗಿರಿಸಿಕೊಂಡು ಕಂಪೆನಿ ಈ ವರ್ಷದಲ್ಲಿ ಧಮಾಲ್ ಕೊಡುಗೆಯನ್ನು ನೀಡಹೊರಟಿದೆ. ಆ ಡಿವೈಸ್ ಹೆಚ್ಚುವದಂತಿಗಳಿಂದ ಖ್ಯಾತವಾಗಿರುವ ಬ್ಲಾಕ್‌ಬೆರ್ರಿ ಜೆಡ್3 ಆಗಿದೆ.

ಡಿವೈಸ್‌ನ ಜಾಗತಿಕ ಬಿಡುಗಡೆ ಅಂತಿಮಗೊಂಡಾಗ ಬ್ಲಾಕ್‌ಬೆರ್ರಿ ಜೆಡ್3 ಭಾರತವನ್ನು ಪ್ರವೇಶಿಸುತ್ತಿದೆ. ಮತ್ತು ಇದೀಗ ಇಂಡೋನೇಶ್ಯಾ ನಂತರ, ಬ್ಲಾಕ್‌ಬೆರ್ರಿ ಜೆಡ್3 ಭಾರತದಮಾರುಕಟ್ಟೆಯನ್ನು ಕೆಲವು ವಾರಗಳಲ್ಲೇ ಪ್ರವೇಶಿಸಲಿದ್ದು ಇದರ ದರ ರೂ.11,000 ಆಗಿದೆ.

ಬ್ಲಾಕ್‌ಬೆರ್ರಿಯಿಂದ ಬಜೆಟ್ ಸ್ಮಾರ್ಟ್‌ಫೋನ್ ಶೀಘ್ರದಲ್ಲಿ

ಇದೊಂದು ಪೂರ್ಣ ಟಚ್‌ಸ್ಕ್ರೀನ್ ಬಜೆಟ್ ಫೋನ್ ಆಗಿದ್ದು ಫೋನ್‌ನ ಜಕಾರ್ತ ಆವೃತ್ತಿ ಕೆಲವು ವಾರಗಳಲ್ಲೇ ಭಾರತದಲ್ಲಿ ಕೂಡ ದೊರೆಯಲಿದೆ. ಮೇ 16 ರಿಂದಲೇ ಇಂಡೋನೇಶ್ಯಾದಲ್ಲಿ ಫೋನ್‌ನ ಮಾರಾಟ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಬ್ಲಾಕ್‌ಬೆರ್ರಿ ಭಾರತ ಸೇರಿದಂತೆ ಇತರ ಏಳು ದೇಶಗಳಲ್ಲಿ ಕೂಡ ತನ್ನ ಜೆಡ್3 ಅನ್ನು ಬಿಡುಗಡೆ ಮಾಡಲಿದ್ದು ಫೋನ್‌ನ ಬಗೆಗಿನ ತುಮುಲವನ್ನು ಹೆಚ್ಚುವಂತೆ ಮಾಡಿದೆ. ಡಿವೈಸ್‌ನ ಬಗ್ಗೆ ಇನ್ನಷ್ಟು ವಿಶ್ಲೇಷಣಾತ್ಮಕವಾಗಿ ತಿಳಿದುಕೊಳ್ಳಬೇಕೆಂದರೆ, ಬ್ಲಾಕ್‌ಬೆರ್ರಿ ಜೆಡ್3 ಒಂದು ಮಧ್ಯಮ ಕ್ರಮಾಂಕದ ಹ್ಯಾಂಡ್‌ಸೆಟ್ ಆಗಿದೆ. ಇದು 5 ಇಂಚಿನ ಪೂರ್ಣ ಟಚ್  ಡಿಸ್‌ಪ್ಲೇಯನ್ನು ನೀಡಲಿದ್ದು 540x960 ರೆಸಲ್ಯೂಶನ್‌ನೊಂದಿಗೆ ಬರಲಿದೆ ಹಾಗೂ ಇದರಲ್ಲಿ ಬ್ಲಾಕ್‌ಬೆರ್ರಿಯ ಇತ್ತೀಚಿನ ಆವೃತ್ತಿ 10ಓಎಸ್ ಕೂಡ ಚಾಲನೆಗೊಳ್ಳಲಿದೆ.

ಬ್ಲಾಕ್‌ಬೆರ್ರಿ ಜೆಡ್3 ನಲ್ಲಿ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 SOC ಇದ್ದು ಇದರೊಂದಿಗೆ ಡ್ಯುಯೆಲ್ ಕೋರ್ ಪ್ರೊಸೆಸರ್ ಅನ್ವಯಿತವಾಗಿದ್ದು 1.5ಜಿಬಿ RAM ಫೋನ್‌ನಲ್ಲಿದೆ. ಇದು5ಎಂಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಫ್ರಂಟ್ ಫೇಸಿಂಗ್ ಕ್ಯಾಮೆರಾದ ಸಾಮರ್ಥ್ಯ 1.1 ಎಂಪಿ ಆಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಧಮಾಲ್ ಅನ್ನು ಮಾಡುತ್ತಿರುವ ಮೋಟೋ ಜಿ ಹಾಗೂ ನೋಕಿಯಾ ಲ್ಯೂಮಿಯಾ 630 ಯಂತಹ ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡಲು ಬ್ಲಾಕ್‌ಬೆರ್ರಿ ಜೆಡ್3 ನಿರ್ಧರಿಸಿದಂತಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot