ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿ ದೀಪಗಳ ಹಬ್ಬದ ಸಂಭ್ರಮ ಹೆಚ್ಚಿಸಿ..!
ಭಾರತದಲ್ಲಿ ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿದೆ. ಜನ ಹೀಗಾಗಲೇ ಫೀಚರ್ ಫೋನ್ ಬಿಟ್ಟು ಸ್ಮಾರ್ಟ್‌ಫೋನ್ ಕಡೆ ಮುಖ ಮಾಡಿದ್ದಾರೆ. ಮುಂದೆ ದೀಪಾವಳಿ ಸಂಭ್ರಮ ಎಲ್ಲರ ಮನೆಯಲ್ಲೂ ಮನೆ ಮಾಡುತ್ತೆ. ದೀಪಾವಳಿಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಕೊಂಡಿದ್ದರೆ ಅನೇಕ ಸ್ಮಾರ್ಟ್‌ಫೋನ್‌ಗಳು ನಿಮ್ಮ ಕಣ್ಣೆದರು ಬರುತ್ತವೆ. ಭಾರತದಂತಹ ಮಧ್ಯಮ ವರ್ಗದ ಜನರೇ ಹೆಚ್ಚಿರುವ ರಾಷ್ಟ್ರದಲ್ಲಿ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ದಿನಕ್ಕೊಂದು ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವಾಗ ಬಳಕೆದಾರರಿಗೆ ಯಾವ ಸ್ಮಾರ್ಟ್‌ಫೋನ್ ಕೊಳ್ಳಬೇಕು ಎನ್ನುವ ಗೊಂದಲ ಉಂಟಾಗುತ್ತದೆ.

ಯಾವ ಮೊಬೈಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಇದೆ..? ಬ್ಯಾಟರಿ ಸಾಮರ್ಥ್ಯ ಎಷ್ಟು..? ಕಾರ್ಯನಿರ್ವಹಣೆ ವೇಗ ಎಷ್ಟು..? ಹೈ ಫೀಚರ್‌ಗಳೇನು..? ಕೊಟ್ಟ ಬೆಲೆಗೆ ಉತ್ತಮ ಮೊಬೈಲ್ ಆಗುತ್ತದೆಯಾ ಎಂಬ ಗೊಂದಲಗಳು ನಿಮ್ಮನ್ನೂ ಕಾಡುತ್ತಿರುತ್ತವೆ. ಆದ್ದರಿಂದ ನಿಮ್ಮ ಗೊಂದಲ ನಿವಾರಿಸಲು ನಿಮಗೆ ಇಲ್ಲಿ ಬಜೆಟ್ ಬೆಲೆಯ ಬೆಸ್ಟ್ ಸ್ಮಾರ್ಟ್‌ಫೋನ್‌ಗಳನ್ನು ಪಟ್ಟಿ ಮಾಡಿ, ಅವುಗಳ ಫೀಚರ್‌ಗಳನ್ನು ನೀಡಲಾಗಿದೆ. ಈ ದೀಪಾವಳಿಗೆ ನಿಮಗೆ ಸರಿ ಹೊಂದುವ ಮೊಬೈಲ್ ಆಯ್ಕೆ ಮಾಡಿಕೊಂಡು ದೀಪಗಳ ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚಿಸಿ.

ಹಾನರ್ 7S
ಡಿಸ್‌ಪ್ಲೇ: 5.45 ಇಂಚ್ HD+ ಡಿಸ್‌ಪ್ಲೇ (720x1440 pixels)
ಪ್ರೊಸೆಸರ್: ಕ್ವಾಡ್‌ಕೋರ್ MediaTek MT6739
ಒಎಸ್: ಆಂಡ್ರಾಯ್ಡ್ 8.1 ಒರಿಯೋ ಬೆಂಬಲಿತ EMUI 8.1
ಮೆಮೊರಿ: 2GB RAM + 16GB ಮೆಮೊರಿ
ಕ್ಯಾಮೆರಾ: 13MP (ಹಿಂಬದಿ), 5MP(ಫ್ರಾಂಟ್) LED ಫ್ಲಾಶ್
ಬ್ಯಾಟರಿ: 3020 mAh
ಬೆಲೆ: ರೂ.6,999 /-

ರಿಯಲ್‌ಮಿ 2
ಡಿಸ್‌ಪ್ಲೇ: 6.2 ಇಂಚ್ HD+ ಡಿಸ್‌ಪ್ಲೇ (720x1520 pixels)
ಪ್ರೊಸೆಸರ್: ಒಕ್ಟಾ ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 450
ಒಎಸ್: ಆಂಡ್ರಾಯ್ಡ್ 8.1
ಮೆಮೊರಿ: 3GB RAM + 32GB/4GB RAM + 64GB
ಕ್ಯಾಮೆರಾ: 13MP+2MP ಡ್ಯುಯಲ್ ಕ್ಯಾಮೆರಾ (ಹಿಂಬದಿ), 8MP (ಫ್ರಾಂಟ್)
ಬ್ಯಾಟರಿ: 4230 mAh
ಬೆಲೆ: ರೂ.8,990 /-

ರೆಡ್‌ಮಿ Y2
ಡಿಸ್‌ಪ್ಲೇ: 5.99 ಇಂಚ್ HD+ ಡಿಸ್‌ಪ್ಲೇ
ಪ್ರೊಸೆಸರ್: ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 625
ಒಎಸ್: ಆಂಡ್ರಾಯ್ಡ್ 8.1
ಮೆಮೊರಿ: 3GB RAM + 32GB/4GB RAM + 64GB
ಕ್ಯಾಮೆರಾ: 12MP+5MP ಡ್ಯುಯಲ್ ಕ್ಯಾಮೆರಾ (ಹಿಂಬದಿ), 16MP (ಫ್ರಾಂಟ್)
ಬ್ಯಾಟರಿ: 3080 mAh
ಬೆಲೆ: ರೂ.9,999 /-

ಹಾನರ್ 7C
ಡಿಸ್‌ಪ್ಲೇ: 5.99 ಇಂಚ್ HD+ ಡಿಸ್‌ಪ್ಲೇ
ಪ್ರೊಸೆಸರ್: ಒಕ್ಟಾ ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 450
ಒಎಸ್: ಆಂಡ್ರಾಯ್ಡ್ 8.0 ಬೆಂಬಲಿತ EMUI 8.0
ಮೆಮೊರಿ: 3GB RAM + 32GB/4GB RAM + 64GB
ಕ್ಯಾಮೆರಾ: 13MP+2MP ಡ್ಯುಯಲ್ ಕ್ಯಾಮೆರಾ (ಹಿಂಬದಿ), 8MP (ಫ್ರಾಂಟ್) LED ಫ್ಲಾಶ್
ಬ್ಯಾಟರಿ: 3000 mAh
ಬೆಲೆ: ರೂ.9,999 /-

ರಿಯಲ್‌ಮಿ 1
ಡಿಸ್‌ಪ್ಲೇ: 6 ಇಂಚ್ HD+ IPS LCD ಡಿಸ್‌ಪ್ಲೇ
ಪ್ರೊಸೆಸರ್: MediaTek MT6771
ಒಎಸ್: ಆಂಡ್ರಾಯ್ಡ್ 8.1 ಬೆಂಬಲಿತ ColorOS 5.0
ಮೆಮೊರಿ: 6GB RAM + 128GB
ಕ್ಯಾಮೆರಾ: 13MP (ಹಿಂಬದಿ), 8MP (ಫ್ರಾಂಟ್)
ಬ್ಯಾಟರಿ: 3410 mAh
ಬೆಲೆ: ರೂ.9,999 /-

ನೋಕಿಯಾ 5.1 ಪ್ಲಸ್
ಡಿಸ್‌ಪ್ಲೇ: 5.86 ಇಂಚ್ HD+ IPS LCD ಡಿಸ್‌ಪ್ಲೇ
ಪ್ರೊಸೆಸರ್: 1.8 GHz ಒಕ್ಟಾ ಕೋರ್
ಒಎಸ್: ಆಂಡ್ರಾಯ್ಡ್ 8.1 ಬೆಂಬಲಿತ ColorOS 5.0
ಮೆಮೊರಿ: 3GB RAM + 32GB
ಕ್ಯಾಮೆರಾ: 13MP+5MP (ಹಿಂಬದಿ), 8MP (ಫ್ರಾಂಟ್)
ಬ್ಯಾಟರಿ: 3060 mAh
ಬೆಲೆ: ರೂ.10,499 /-

ಆಸುಸ್ ಜೆನ್‌ಫೋನ್ ಮ್ಯಾಕ್ಸ್ ಪ್ರೋ 1
ಡಿಸ್‌ಪ್ಲೇ: 5.99 ಇಂಚ್ HD+ ಡಿಸ್‌ಪ್ಲೇ (1080 x 2160)
ಪ್ರೊಸೆಸರ್: 1.8 GHz ಒಕ್ಟಾ ಕೋರ್, Qualcomm Snapdragon 636
ಒಎಸ್: ಆಂಡ್ರಾಯ್ಡ್
ಮೆಮೊರಿ: 3GB RAM + 32GB
ಕ್ಯಾಮೆರಾ: 13MP+5MP (ಹಿಂಬದಿ), 8MP (ಫ್ರಾಂಟ್)
ಬ್ಯಾಟರಿ: 5000 mAh
ಬೆಲೆ: ರೂ. 10,999 /-


Click it and Unblock the Notifications








