ನಿಮ್ಮ ಪೋಟೋಗ್ರಾಫಿ ಹವ್ಯಾಸಕ್ಕೆ ಹೇಳಿಮಾಡಿಸಿದ ಸ್ಮಾರ್ಟ್‌ಫೋನ್‌ಗಳು..!

By GizBot Bureau
|

ಪ್ರತಿಯೊಬ್ಬರೂ ಕೂಡ ತಮ್ಮ ಫೋನಿನಲ್ಲಿ ಕ್ಯಾಮರಾ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ಯಾವುದೇ ಮೊಬೈಲ್ ಆಗಿರಲಿ, ಅವರದ್ದು ಯಾವುದೇ ಬಜೆಟ್ ಆಗಿರಲಿ, ತಾವು ಖರೀದಿಸುವ ಮೊಬೈಲ್ ಉತ್ತಮ ಕ್ಯಾಮರಾವನ್ನು ಹೊಂದಿದೆಯೇ ಎಂದು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಸ್ಮಾರ್ಟ್ ಫೋನ್ ಖರೀದಿಸುವಾಗ ಪ್ರತಿಯೊಬ್ಬರು ಪರೀಕ್ಷೆಗೆ ಒಳಪಡಿಸುವ ಪ್ರಮುಖ ವೈಶಿಷ್ಟ್ಯವೆಂದರೆ ಅದು ಕ್ಯಾಮರಾವೇ ಆಗಿರುತ್ತದೆ. ದೊಡ್ಡ ಬ್ಯಾಟರಿ ಮತ್ತು ಪ್ರೊಸೆಸರ್ ಇವುಗಳನ್ನು ನೋಡುತ್ತಾರೋ ಇಲ್ಲವೋ ಆದರೆ ಕ್ಯಾಮರಾ ಕ್ವಾಲಿಟಿ ಹೇಗಿದೆ ಅನ್ನುವುದನ್ನು ಪ್ರತಿಯೊಬ್ಬರು ಪರೀಕ್ಷಿಸುತ್ತಾರೆ.

ಈ ವಿಚಾರವು ಫೋನ್ ತಯಾರಿಕಾ ಕಂಪೆನಿಗಳಿಗೂ ಕೂಡ ಚೆನ್ನಾಗಿಯೇ ತಿಳಿದಿದೆ. ಕಳೆದ ಕೆಲವು ವರ್ಷಗಳಿಂದ ಅದೇ ಕಾರಣದಿಂದಾಗಿ ಫೋನಿನ ಕ್ಯಾಮರಾವು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು, ಯಾವುದೇ ಫೋಟೋವನ್ನು ಅತ್ಯುದ್ಭುತವಾಗಿ ಸೆರೆಹಿಡಿಯುವ ತಾಕತ್ತನ್ನು ಇಂದಿನ ಜಮಾನದ ಮೊಬೈಲ್ ಗಳೂ ಕೂಡ ಹೊಂದಿದೆ. ಆಪ್ಟಿಕ್ಸ್ ವಿಚಾರದಲ್ಲಿ ಸದ್ಯ ಹಲವು ರೀತಿಯ, ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ನಿಮ್ಮ ಪೋಟೋಗ್ರಾಫಿ ಹವ್ಯಾಸಕ್ಕೆ ಹೇಳಿಮಾಡಿಸಿದ ಸ್ಮಾರ್ಟ್‌ಫೋನ್‌ಗಳು..!

ಇಲ್ಲಿ 5000 ರುಪಾಯಿಯಿಂದ 50,000 ರುಪಾಯಿ ಒಳಗೆ ಇರುವ ಅತ್ಯುದ್ಭುತ ಕ್ಯಾಮರಾ ಒಳಗೊಂಡ ಫೋನ್ ಗಳ ಪಟ್ಟಿಯನ್ನು ನೀಡಲಾಗಿದೆ.

ಬೆಸ್ಟ್ ಕ್ಯಾಮರಾವಿರು ಸ್ಮಾರ್ಟ್ ಫೋನ್ ಗಳು (ಬೆಲೆ 5,000 ದಿಂದ 50,000 ರುಪಾಯಿಗಳು)

ಟಾಪ್ ಲೆವೆಲ್ ನಲ್ಲಿರುವ ಸ್ಮಾರ್ಟ್ ಫೋನ್ ಗಳಿಂದ ಹಿಡಿದು ಮಧ್ಯಮವರ್ಗದವರೂ ಖರೀದಿಸಬಹುದಾದ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ಮಾಡುತ್ತಿದ್ದೇವೆ. 5,000 ರುಪಾಯಿಯಿಂದ ಹಿಡಿದು 50,000 ರುಪಾಯಿವರೆಗಿನ ಫೋನ್ ಗಳಲ್ಲಿ ಕ್ಯಾಮರಾ ಅತ್ಯುತ್ತಮವಾಗಿರುವ ಫೋನ್ ಗಳ ಪಟ್ಟಿ ಇಲ್ಲಿದೆ.

10.ಆರ್ ಡಿ | 5,000 ರುಪಾಯಿ ವಿಭಾಗ

10.ಆರ್ ಡಿ | 5,000 ರುಪಾಯಿ ವಿಭಾಗ

ಅಮೇಜಾನ್ ನ ಸಬ್ ಬ್ರ್ಯಾಂಡ್ ಆಗಿರುವ 10. ಆರ್ ಡಿ ಶಿಯೋಮಿ ಬಜೆಟ್ ಫೋನ್ ಗಳಾದ ರೆಡ್ಮಿ 5ಎ ಸ್ಪರ್ದೆ ನೀಡುವ ನಿಟ್ಟಿನಲ್ಲಿ ಮಾರುಕಟ್ಟೆಗೆ ಬಂದಿರುವ ಫೋನ್ . 13 ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು 5 ಮೆಗಾಪಿಕ್ಸಲ್ ನ ಮುಂಭಾಗದ ಸೆಲ್ಫಿ ಕ್ಯಾಮರಾವನ್ನು ಇದು ಒಳಗೊಂಡಿದೆ. ಈ ಬಜೆಟ್ ನಲ್ಲಿ ಕ್ಯಾಮರಾ ವಿಚಾರದಲ್ಲಿ ಬೆಸ್ಟ್ ಆಗಿರುವ ಫೋನ್ ಇದು. ಆಟೋ ಸೀನ್ ಡಿಟೆಕ್ಷನ್ ಮೋಡ್ ಡಿಫಾಲ್ಟ್ ಆಗಿ ಆಯ್ಕೆ ಆಗಿರುತ್ತದೆ. ಬೇಸಿಕ್ ಕ್ಯಾಮರಾ ಆಪ್ ಇದರಲ್ಲಿದೆ. ಪನೋರಮಾ ಮತ್ತು ಬ್ಯೂಟಿಫಿಕೇಷನ್ ಮೋಡ್ ಗಳ ಆಯ್ಕೆಯೂ ಇದು ನೀಡುತ್ತದೆ. ಫೇಸ್ ಡಿಟೆಕ್ಷನ್ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ.

ರೆಡ್‌ಮಿ ವೈ 2 | 10,000 ರುಪಾಯಿ ವಿಭಾಗ

ರೆಡ್‌ಮಿ ವೈ 2 | 10,000 ರುಪಾಯಿ ವಿಭಾಗ

10,000 ರುಪಾಯಿ ಒಳಗಿನ ಫೋನ್ ಗಳಲ್ಲಿ ರೆಡ್ಮಿ ವೈ2 ಅತ್ಯುತ್ತಮ ಫೋನ್ ಆಗಿದೆ. ಹಿಂಭಾಗದಲ್ಲಿ ಎರಡು ಕ್ಯಾಮರಾವನ್ನು ಇದು ಹೊಂದಿರುತ್ತದೆ. 12 ಮೆಗಾಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಒಂದಾದರೆ 5 ಮೆಗಾ ಪಿಕ್ಸಲ್ ನ ಸೆಕೆಂಡರಿ ಕ್ಯಾಮರವನ್ನು ಇದು ಹೊಂದಿದೆ.ಶಿಯೋಮಿ ರೆಡ್ಮಿ ವೈ2 16 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾ ಹೊಂದಿದ್ದು ಮುಂಭಾಗ ಫ್ಲ್ಯಾಶ್ ಲೈಟ್ ಸಾಮರ್ತ್ಯವಿದೆ. ಬೆಳಕಿನ ಯಾವುದೇ ಕಂಡೀಷನ್ ನಲ್ಲೂ ಉತ್ತಮ ಫೋಟೋ ಕ್ಲಿಕ್ಕಿಸಿಕೊಳ್ಲಬಹುದು. ಬೆಳಕಿನ ಲಭ್ಯತೆ ಕಡಿಮೆ ಇರುವಲ್ಲೂ ಕೂಡ ಉತ್ತಮ ಫೋಟೋಗಾಗಿ ಕೆಲವು ಪ್ರೊಫೆಷನಲ್ ಸೆಟ್ಟಿಂಗ್ ಗಳನ್ನು ಇದರಲ್ಲಿ ಮಾಡಲಾಗಿರುತ್ತದೆ.

ರೆಡ್‌ಮಿ ನೋಟ್ 5 ಪ್ರೋ | 15,000 ರುಪಾಯಿ ವಿಭಾಗ

ರೆಡ್‌ಮಿ ನೋಟ್ 5 ಪ್ರೋ | 15,000 ರುಪಾಯಿ ವಿಭಾಗ

ಪ್ರೋ ಎರಡು ಹಿಂಭಾಗದ ಕ್ಯಾಮರಾವನ್ನು ಹೊಂದಿದೆ. ಒಂದು 12ಎಂಪಿ f/2.2 ದ್ಯುತಿರಂಧ್ರ ಹೊಂದಿದೆ. ಮತ್ತೊಂದು 5ಎಂಪಿ f/2.0 ದ್ಯುತಿರಂಧ್ರವನ್ನು ಮತ್ತೊಂದು ಕ್ಯಾಮರಾ ಹೊಂದಿದೆ.ಕಡಿಮೆ ಬೆಳಕಿನಲ್ಲೂ ನೈಜ ಬಣ್ಣದ ಫೋಟೋವನ್ನು ತೆಗೆಯುವುದಕ್ಕೆ ಇದು ಸಹಕಾರಿಯಾಗಿದೆ. ಮುಂಭಾಗದಲ್ಲಿ 20ಎಂಪಿ ಕ್ಯಾಮರಾ ಹೊಂದಿದ್ದು ಇದು ಅತ್ಯುತ್ತಮ ಲೋ ಲೈಟ್ ಫೋಟೋವನ್ನು ಆಳದ ಎಫೆಕ್ಟ್ ನಲ್ಲಿ ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.

ಹುವಾಯಿ ಪಿ20 ಲೈಟ್ | 20,000 ರುಪಾಯಿ ವಿಭಾಗ

ಹುವಾಯಿ ಪಿ20 ಲೈಟ್ | 20,000 ರುಪಾಯಿ ವಿಭಾಗ

ಎರಡು ಹಿಂಭಾಗದ ಕ್ಯಾಮರಾವನ್ನು ಇದು ಹೊಂದಿದೆ. ಹುವಾಯಿ ಪಿ20 ಲೈಟ್ ನಲ್ಲಿ 16 ಮೆಗಾಪಿಕ್ಸಲ್ ನ f/2.2 ದ್ಯುತಿರಂಧ್ರವಿರುವ ಒಂದು ಕ್ಯಾಮರಾ ಮತ್ತೊಂದು 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫೀ ತೆಗೆದುಕೊಳ್ಳಲು ಬೆಸ್ಟ್ ಅಂದರೆ 24 ಮೆಗಾಪಿಕ್ಸಲ್ ಮತ್ತು f/2.0 ದ್ಯುತಿರಂಧ್ರ ಹೊಂದಿರುವ ಕ್ಯಾಮರಾವಿದೆ. ಹೆಚ್ಚೆಚ್ಚು ಹೊಸ ಅವಕಾಶಗಳು ಇದರಲ್ಲಿ ಲಭ್ಯವಿದೆ.ಶಟ್ಟರ್ ಸ್ಪೀಡ್, ISO, ಎಕ್ಸ್ ಪೋಷರ್, ವೈಟ್ ಬ್ಯಾಲೆನ್ಸ್ ಇತ್ಯಾದಿ ಪ್ರೊಫೆಷನಲ್ ಮೋಡೋ ಗಳು ಈ ಕ್ಯಾಮರಾದಲ್ಲಿದೆ.

ನೋಕಿಯಾ 7 ಪ್ಲಸ್ | 25,000 ರುಪಾಯಿ ವಿಭಾಗ

ನೋಕಿಯಾ 7 ಪ್ಲಸ್ | 25,000 ರುಪಾಯಿ ವಿಭಾಗ

ನೋಕಿಯಾ 7 ಹಿಂಭಾಗದಲ್ಲಿ ಎರಡು 12ಎಂಪಿ ಡುಯಲ್ ಪಿಕ್ಸಲ್ ಸೆನ್ಸರ್ ನ್ನು ಹೊಂದಿದೆ ಅದರ ದ್ಯುತಿರಂಧ್ರ f/1.75 ದ್ಯುತಿರಂಧ್ರವನ್ನು ಹೊಂದಿದೆ. ಮುಂಭಾಗದಲ್ಲಿ 13ಎಂಪಿ ಕ್ಯಾಮರಾವಿದ್ದು f/2.6 ದ್ಯುತಿರಂಧ್ರವನ್ನು ಹೊಂದಿದೆ. ಎಲ್ಲಾ ಸೆನ್ಸರ್ ಗಳು Carl Zeiss ಬ್ರ್ಯಾಂಡಿಂಗ್ ನ್ನು ಹೊಂದಿದೆ. ಕ್ಯಾಮರಾ ಕಡಿಮೆ ಶಬ್ದದಲ್ಲೂ ಉತ್ತಮ ವೀಡಿಯೋ ಕ್ವಾಲಿಟಿ ಕೊಡಲಿದೆ. ಹೈ ಕಾಂಟ್ರಾಸ್ಟ್ ಆಗಿರುವ ಫೋಟೋಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯ ಇದು ಹೊಂದಿದೆ.

ಆಸುಸ್‌ ಝೆನ್ ಫೋನ್ 5ಝಡ್ | 30,000 ರುಪಾಯಿ ವಿಭಾಗ

ಆಸುಸ್‌ ಝೆನ್ ಫೋನ್ 5ಝಡ್ | 30,000 ರುಪಾಯಿ ವಿಭಾಗ

ಆಸುಸ್‌ ಝೆನ್ ಫೋನ್ 5 ಝಡ್ ಎಐ ಪವರ್ ನಿಂದ ಕೂಡಿರುವ 12 ಮೆಗಾಪಿಕ್ಸಲ್ ನ ಸೋನಿ IMX 363 ಸೆನ್ಸರ್ 8ಮೆಗಾಪಿಕ್ಸಲ್ ನ ಸೆಕೆಂಡರಿ PDAF ಜೊತೆ ಕಪಲ್ ಆಗಿರುತ್ತದೆ ಮತ್ತು OIS ಮೂಲದ ಸೆನ್ಸರ್ ಹೊಂದಿದೆ. ನೈಜ ಬಣ್ಣದಲ್ಲಿ ಫೋಟೋವನ್ನು ಕ್ಲಿಕ್ಕಿಸುವ ಸಾಮರ್ಥ್ಯವಿದೆ. ಮುಭಾಗದಲ್ಲಿ 8ಎಂಪಿ ಕ್ಯಾಮರಾ ಸೆಲ್ಫೀ ತೆಗೆದುಕೊಳ್ಳಲು ಇದರಲ್ಲಿದೆ.

ಒನ್ ಪ್ಲಸ್ 6 | 40,000 ರುಪಾಯಿ ವಿಭಾಗ

ಒನ್ ಪ್ಲಸ್ 6 | 40,000 ರುಪಾಯಿ ವಿಭಾಗ

ಇತ್ತೀಚೆಗೆ ಬಿಡುಗಡೆಗೊಂಡಿರುವ ಒನ್ ಪ್ಲಸ್ 6 ಪ್ರೈಮರಿಯಾಗಿ 16 ಮೆಗಾಪಿಕ್ಸಲ್ ನ OIS ಸೆನ್ಸರ್ ಇದ್ದು ಇದು ಸೆಕೆಂಡರಿ 20 ಮೆಗಾಪಿಕ್ಸಲ್ ಆಳದ ಸೆನ್ಸರ್ ನೊಂದಿಗೆ ಹೊಂದಿಕೊಂಡಿದೆ. ಅತೀ ಕಡಿಮೆ ಬೆಳಕಿನಲ್ಲೂ ಕೂಡ ಅತ್ಯುತ್ತಮವಾದ ಫೋಟೋ ತೆಗೆಯುವ ಸಾಮರ್ಥ್ಯವನ್ನು ಇದು ಹೊಂದಿದೆ.ವೀಡಿಯೋಗಳನ್ನು 60fps ನ 4K ನಲ್ಲಿ ರೆಕಾರ್ಡ್ ಮಾಡಬಹುದು. ಫೋಟೋದಲ್ಲಿ ಬಣ್ಣದ ವ್ಯತ್ಯಾಸ ಹೆಚ್ಚು ಆಗುವುದಿಲ್ಲ ಮತ್ತು ನೈಜವಾಗಿ ಚಿತ್ರೀಕರಿಸಲು ಇದು ನೆರವಾಗುತ್ತದೆ.ಉತ್ತಮವಾಗ ಸ್ಲೋ ಮೋಷನ್ ಮೋಡ್ ಇದರಲ್ಲಿದೆ.

ಪಿಕ್ಸಲ್ 2 | 50,000 ರುಪಾಯಿ ವಿಭಾಗ

ಪಿಕ್ಸಲ್ 2 | 50,000 ರುಪಾಯಿ ವಿಭಾಗ

ಎರಡನೇ ಜನರೇಷನ್ ನ ಗೂಗಲ್ ಫ್ಲ್ಯಾಗ್ ಶಿಪ್ ಪಿಕ್ಸಲ್ 2 ಒಂದು 12.2ಎಂಪಿ ಕ್ಯಾಮರಾ ಲೆನ್ಸ್ ಹೊಂದಿದ್ದು ಅದು f/1.8 ದ್ಯುತಿರಂಧ್ರವನ್ನು ಹೊಂದಿರುತ್ತದೆ. ಒಂದೇ ಲೆನ್ಸ್ ಆಗಿದ್ದರೂ ಕೂಡ 2018 ರಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಅತ್ಯುತ್ತಮ ಕ್ಯಾಮರಾ ಫೋನ್ ಗಳ ಪೈಕಿ ಇದೂ ಕೂಡ ಒಂದು.ಮೊದಲ ಜನರೇಷನ್ ನ ಪಿಕ್ಸಲ್ ಫೋನ್ ಗಳಿಗಿಂತ ಕೆಲವು ಸಣ್ಣ ಅಭಿವೃದ್ಧಿಯನ್ನು ಇದು ಹೊಂದಿದ್ದು ಬೆಳಕಿನ ಯಾವುದೇ ಕಂಡೀಷನ್ ನಲ್ಲೂ ಕೂಡ ಉತ್ತಮ ಫೋಟೋ ಕ್ಲಿಕ್ಕಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಮುಂಭಾಗದಲ್ಲಿ ಸೆಲ್ಫೀಗಾಗಿ 8ಎಂಪಿ ಕ್ಯಾಮರಾವಿದ್ದು f/2.4 ದ್ಯುತಿರಂಧ್ರವನ್ನು ಅದು ಹೊಂದಿದೆ. ಹೆಚ್ಚು ಬೆಲೆಯ ಇತರೆ ಫೋನ್ ಗಳಿಗಿಂತ ಪಿಕ್ಸಲ್ 2 ಉತ್ತಮ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಅಗಲವಾದ ದ್ಯುತಿರಂಧ್ರ ಮತ್ತು ವೇಗವಾದ ಆಟೋ ಫೋಕಸ್ ನಿಂದಾಗಿ ಮುಂಭಾಗದ ಮತ್ತು ಹಿಂಭಾಗದ ಎರಡೂ ಕ್ಯಾಮರಾದಲ್ಲೂ ಕೂಡ ಉತ್ತಮವಾದ ಫೋಟೋ ಕ್ಲಿಕ್ಕಿಸಲು ಸಹಕಾರಿಯಾಗಿದೆ.

Best Mobiles in India

English summary
Best Camera Smartphones For Every Budget (Rs 5,000 To Rs 50,000). To know more this visit kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X