Home
ಮೊಬೈಲ್

20000ಕ್ಕಿಂತ ಕಡಿಮೆ..! ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು.. ಬೆಲೆ, ವೈಶಿಷ್ಟ್ಯಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

Best Camera Mobiles Under 20,000: ನೀವು ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋಗ್ರಫಿ ಮಾಡಲು ಇಷ್ಟಪಡುತ್ತೀರಾ? ಇದಕ್ಕಾಗಿ ಹೊಸ ಮೊಬೈಲ್ ಹುಡುಕುತ್ತಿದ್ದೀರಾ? ಹಾಗಿದ್ರೆ, ತಪ್ಪದೇ ಈ ಲೇಖನವನ್ನು ಓದಿ. ಹೌದು, ನೀವು 20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಕ್ಯಾಮೆರಾ ಹೊಂದಿರುವ ಮೊಬೈಲ್ ಹುಡುಕುತ್ತಿದ್ದರೆ, ಈ ಲೇಖನ ನಿಮ್ಮ ಗೊಂದಲವನ್ನು ನಿವಾರಿಸುತ್ತದೆ. ಹೌದು, ಪ್ರಸ್ತುತ ದಿನಗಳಲ್ಲಿ, ಫೋಟೋಗ್ರಫಿ ಮೇಲಿನ ಉತ್ಸಾಹವನ್ನು ಪೂರೈಸಲು ಒಂದು ಸ್ಮಾರ್ಟ್‌ಫೋನ್ (smartphones) ಕ್ಯಾಮೆರಾ ಸಾಕು. ನಿಮಗೆ ಫೋಟೋಗ್ರಫಿ ಬಗ್ಗೆ ಜ್ಞಾನವಿದ್ದರೆ, ಈ ಸ್ಮಾರ್ಟ್‌ಫೋನ್‌ಗಳಿಂದಲೂ ಅತ್ಯುತ್ತಮ ಚಿತ್ರಗಳನ್ನು ತೆಗೆಯಬಹುದು.

ನೀವು ಫೋಟೋಗ್ರಫಿಗಾಗಿ ದುಬಾರಿ ಬೆಲೆ ಫೋನ್ ಖರೀದಿಸಲು ಬಯಸದಿದ್ದರೆ, ನಿಮಗೆ 20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಆಯ್ಕೆಗಳು ಸಿಗುತ್ತವೆ. ಈ ಪೈಕಿ ರಿಯಲ್‌ಮಿ ನಾರ್ಜೊ 80 ಪ್ರೊ 5G (realme Narzo 80 Pro 5G), ಒಪ್ಪೋ F25 ಪ್ರೊ (Oppo F25 Pro), ರಿಯಲ್‌ಮಿ P3 (realme P3) ಮೊಬೈಲ್‌ ಈ ಬಜೆಟ್‌ ವಿಭಾಗದಲ್ಲಿ ಲಭ್ಯವಿದೆ. ನಾವು ಈ ಲೇಖನದಲ್ಲಿ 20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವ (Best Camera Mobiles Under 20,000) ಈ ಫೋನ್‌ಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.

20000ಕ್ಕಿಂತ ಕಡಿಮೆ! ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು.. ಬೆಲೆ, ವಿಶೇಷತೆಗಳೇನು?

20,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಿವು!

ರಿಯಲ್‌ಮಿ ನಾರ್ಜೊ 80 ಪ್ರೊ 5G

20000ಕ್ಕಿಂತ ಕಡಿಮೆ! ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು.. ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ ನಾರ್ಜೊ 80 ಪ್ರೊ 5G (realme Narzo 80 Pro 5G) ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಈ ಸ್ಕ್ರೀನ್ 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ರಿಯಲ್‌ಮಿ 5G ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ. ಈ ರಿಯಲ್‌ಮಿ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಉತ್ತಮ ಕಾರ್ಯಕ್ಷಮತೆ ಮತ್ತು ವಿದ್ಯುತ್ ದಕ್ಷತೆಯನ್ನು ಒದಗಿಸುತ್ತದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ realme UI 6.0 ನೊಂದಿಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G615 MC2 ಜಿಪಿಯು ಸಹ ಹೊಂದಿದೆ.

ರಿಯಲ್‌ಮಿ ನಾರ್ಜೊ 80 ಪ್ರೊ 5G ಮೊಬೈಲ್ ಕ್ಯಾಮೆರಾದ ವಿಷಯದಲ್ಲಿ ತುಂಬಾ ವಿಶೇಷವಾಗಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಈ 5G ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.

ಒಪ್ಪೋ F25 ಪ್ರೊ

20000ಕ್ಕಿಂತ ಕಡಿಮೆ! ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು.. ಬೆಲೆ, ವಿಶೇಷತೆಗಳೇನು?

ಒಪ್ಪೋ F25 ಪ್ರೊ (Oppo F25 Pro) ಸ್ಮಾರ್ಟ್‌ಫೋನ್ 20,000 ರೂ.ಗಳ ಬಜೆಟ್‌ನಲ್ಲಿ ಉತ್ತಮ ಆಯ್ಕೆಯಾಗಿದೆ. ಇದು OIS ಬೆಂಬಲದೊಂದಿಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 6.7 ಇಂಚಿನ ಫುಲ್‌ ಎಚ್‌ಡಿ ಪ್ಲಸ್ ಅಮೋಲೆಡ್‌ ಡಿಸ್‌ಪ್ಲೇ ರಚನೆ ಪಡೆದಿದ್ದು, 2412 × 1080 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಪಾಂಡಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಆಕ್ಟಾ ಕೋರ್ ಪ್ರೊಸೆಸರ್ ಕೆಲಸ ಮಾಡಲಿದೆ. ಇದರ ಜೊತೆಗೆ ಮಾಲಿ G68 MC4 ಜಿಪಿಯು ಸಪೋರ್ಟ್‌ ಇದೆ. ಹಾಗೆಯೇ 8GB + 128GB ಸ್ಟೋರೇಜ್‌ ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಒಪ್ಪೋ 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 67W ಸೂಪರ್‌ವೂಕ್ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿದೆ.

ರೆಡ್‌ಮಿ ನೋಟ್ 13 ಪ್ರೊ

20000ಕ್ಕಿಂತ ಕಡಿಮೆ! ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು.. ಬೆಲೆ, ವಿಶೇಷತೆಗಳೇನು?

ರೆಡ್‌ಮಿ ನೋಟ್ 13 ಪ್ರೊ (Redmi Note 13 Pro) ಫೋನ್‌ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1,220 x 2,712 ಪಿಕ್ಸೆಲ್‌ ರೆಸಲ್ಯೂಶನ್‌, 1,800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಹೊಂದಿದೆ. ರೆಡ್ಮಿ 5G ಮೊಬೈಲ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ಹೈಪರ್ ಓಎಸ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. 8 ಮೆಗಾಪಿಕ್ಸೆಲ್‌ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ರೆಡ್ಮಿ 5G ಮೊಬೈಲ್ 5100mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ರಿಯಲ್‌ಮಿ P3

20000ಕ್ಕಿಂತ ಕಡಿಮೆ! ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು.. ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ P3 (realme P3) ಮೊಬೈಲ್ 20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮತ್ತೊಂದು ರಿಯಲ್‌ಮಿ ಫೋನ್ ಆಗಿದೆ. ಇದು ಉತ್ತಮ ಕ್ಯಾಮೆರಾದೊಂದಿಗೆ ಬರುತ್ತದೆ.ರಿಯಲ್‌ಮಿ P3 5G ಮೊಬೈಲ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 1500Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2000 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ರಿಯಲ್‌ಮಿ 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಅಡ್ರಿನೊ 810 ಜಿಪಿಯು ಒಳಗೊಂಡಿದೆ. ಈ ಫೋನ್ 6GB RAM + 8GB RAM ಹೊಂದಿದೆ. ಇದರಲ್ಲಿ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ರಿಯಲ್‌ಮಿ P3 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅಳವಡಿಸಲಾಗಿದೆ. ಈ ರಿಯಲ್‌ಮಿ 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನಿನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
Best Camera smartphones Under Rs 20,000: realme Narzo 80 Pro 5G, Oppo F25 Pro, realme P3 and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+