10,000 ರೂ. ಒಳಗೆ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಫೋನ್‌ಗಳಿವು!
ನೀವು ಹೆಚ್ಚಾಗಿ ಗೇಮ್‌ಗಳನ್ನು (Gaming) ಆಡುತ್ತೀರಾ? ಈಗಿರುವ ಸ್ಮಾರ್ಟ್‌ಫೋನ್‌ಗೆ (Mobile Phones) ಬಾಯ್ ಹೇಳಿ, ಹೈಫೈ ಗೇಮಿಂಗ್ ಮೊಬೈಲ್ (Gaming Mobile Phones) ತೆಗೆದುಕೊಳ್ಳುವ ಪ್ಲ್ಯಾನ್ ಏನಾದ್ರೂ ಇದೆಯಾ? ಅದರಲ್ಲೂ ಕಡಿಮೆ ಬೆಲೆಯ ಅದ್ಭುತ ಗೇಮಿಂಗ್ ಫೋನ್ ಖರೀದಿಸುವ ಒಲವು ಇದೆಯಾ? ಹಾಗಿದ್ರೆ, ನಾವು ನಿಮಗೆ ಭಾರತದಲ್ಲಿ 10,000 ರೂ.ಗಿಂತ ಕಡಿಮೆ ಇರುವ ಟಾಪ್ ಗೇಮಿಂಗ್ ಮೊಬೈಲ್‌ಗಳನ್ನು (Gaming Smartphones) ತಿಳಿಸಿಕೊಡುತ್ತೇವೆ. ತಪ್ಪದೇ, ಈ ಸುದ್ದಿ ಓದಿ.
ಮಾರುಕಟ್ಟೆಯಲ್ಲಿ ಹಲವು ವಿದಧ ಮೊಬೈಲ್‌ಗಳು ಇವೆ. ಸ್ಮಾರ್ಟ್‌ಫೋನ್ ಕಂಪನಿಗಳು ಯುವಜನತೆ ಹಾಗೂ ಅವರ ಬಳಕೆಗೆ ಅನುಗುಣವಾಗಿ ಮೊಬೈಲ್‌ಗಳನ್ನು ತಯಾರಿಸಿ, ಲಾಂಚ್ ಮಾಡುತ್ತಿವೆ. ಒಬ್ಬರಿಗೆ ಕ್ಯಾಮೆರಾ ಚೆನ್ನಾಗಿದ್ದರೆ ಸಾಕು ಅನಿಸುತ್ತದೆ. ಕೆಲವರಿಗೆ ಡಿಸ್‌ಪ್ಲೇ ಮೇಲೆ ಮೋಹ. ಇನ್ನು ಕೆಲವರು ಮ್ಯೂಸಿಕ್, ಫಿಲ್ಮ್ ನೋಡಲು ಬಳಸುತ್ತಾರೆ. ಆದರೆ, ಹೆಚ್ಚಾಗಿ ಯುವಕರು ಮೊಬೈಲ್‌ನಲ್ಲಿ ಗೇಮ್ ಆಡಲು ಇಷ್ಟ ಪಡುತ್ತಾರೆ. ಅಂತಹವರಿಗಾಗಿ ಕಡಿಮೆ ಬೆಲೆಯಲ್ಲಿ ಇಲ್ಲಿವೆ ಅಧ್ಬುತ ಗೇಮಿಂಗ್ ಮೊಬೈಲ್‌ಗಳು.

10,000 ರೂ. ಒಳಗಿನ ಮೊಬೈಲ್‌ಗಳು ಇಲ್ಲಿವೆ
Samsung Galaxy M14 4G : ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅದ್ಭುತ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ Samsung Galaxy M14 4G ಮೊಬೈಲ್ ಒಂದಾಗಿದೆ. ಇದರ ಬೆಲೆ 8,499 ರೂಪಾಯಿ. ಇದು 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. 50MP + 2MP + 2MP ಟ್ರಿಪಲ್ ಲೆನ್ಸ್ ಪ್ರಾಥಮಿಕ ಕ್ಯಾಮೆರಾ, 13MP ಮುಂಭಾಗದ ಕ್ಯಾಮೆರಾದ ಸೌಲಭ್ಯದಲ್ಲಿ ಇದೆ. 5000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ.
Tecno Spark 20C : ಟೆಕ್ನೋ ಸ್ಪಾರ್ಕ್ 20 ಸಿ ಸ್ಮಾರ್ಟ್‌ಫೋನ್ 8,999 ರೂ.ಗೆ ಲಭ್ಯವಿದೆ. ಇದು 6.56 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇನ್ನು 720 x 1612 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. 50MP + AI ಡ್ಯುಯಲ್ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಹೊಂದಿದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ.
Redmi 13C 5G : 10,999 ರೂಪಾಯಿ ಬೆಲೆಯಲ್ಲಿ Redmi 13C 5G ಸ್ಮಾರ್ಟ್‌ಫೋನ್ ಖರೀದಿಸಬಹುದು. ಇದು6.74 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. 50MP + AI ಡ್ಯುಯಲ್ ಕ್ಯಾಮೆರಾ ಹಾಗೂ 5MP ಫ್ರಂಟ್ ಕ್ಯಾಮೆರಾ ಹೊಂದಿದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಇದೆ.
Motorola Moto G34 5G : ಇದರ ಬೆಲೆ 10,999 ರೂಪಾಯಿ. ಡಿಸ್‌ಪ್ಲೇ 6.5 ಇಂಚು ಹಾಗೂ 720 x 1600 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಇದೆ. 50MP + 2MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ, Li-Ion 5000 mAh ಬ್ಯಾಟರಿ ಬ್ಯಾಕಪ್ ಹೊಂದಿದೆ.
POCO M6 5G : POCO M6 5G ಮೊಬೈಲ್ ಅನ್ನು 10,499 ರೂ.ನಲ್ಲಿ ಖರೀದಿಸಬಹುದು. 6.74 ಇಂಚು ಡಿಸ್ಲಪೇ ಹಾಗೂ 720 x 1600 ಪಿಕ್ಸೆಲ್‌ಗಳ (ಡಿಸ್‌ಪ್ಲೇ) ಸ್ಕ್ರೀನ್ ರೆಸಲ್ಯೂಶನ್ ಇದೆ. 50MP + AI ಡ್ಯುಯಲ್ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಹೊಂದಿದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಒಳಗೊಂಡಿದೆ.
Vivo Y18 : ಈ ಸ್ಮಾರ್ಟ್‌ಫೋನ್ ಬೆಲೆ 8,999 ರೂಪಾಯಿ. ಡಿಸ್ಲ್ಪೇ 6.56 ಇಂಚು ಹಾಗೂ 720 x 1612 ಪಿಕ್ಸೆಲ್‌ಗಳ ಡಿಸ್‌ಪ್ಲೇ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. 50MP + 0.08 AI ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಪಡೆದಿದೆ. Li-Ion 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
Realme C65 5G : Realme C65 5G ಮೊಬೈಲ್ ಅನ್ನು 9,999 ರೂ.ನಲ್ಲಿ ಖರೀದಿಸಬಹುದು. ಇದರ ಡಿಸ್ಪ್ಲೇ 6.67 ಇಂಚು ಹಾಗೂ 720 x 1604 ಪಿಕ್ಸೆಲ್‌ಗಳ ಡಿಸ್‌ಪ್ಲೇ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. 50MP + 2MP ಪ್ರಾಥಮಿಕ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ ಹಾಗೂ Li-Ion 5000 mAh ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ.
Lava O2 : Lava O2 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 8,499 ರೂ.ಗೆ ಲಭ್ಯವಿದೆ. ಇದರ ಡಿಸ್ಪ್ಲೇ 6.5 ಇಂಚು ಹಾಗೂ 720 x 1600 ಪಿಕ್ಸೆಲ್‌ಗಳ ಡಿಸ್‌ಪ್ಲೇ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇನ್ನೂ, 50MP AI Dual lens ಪ್ರಾಥಮಿಕ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಇದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಹೊಂದಿದೆ.


Click it and Unblock the Notifications








